“ಉಡುಪಿ ಉತ್ಸವ’ ಉದ್ಘಾಟನೆ
Team Udayavani, Dec 4, 2017, 12:03 PM IST
ಉಡುಪಿ: ಉಡುಪಿಯ ಕಲ್ಸಂಕ ಬಳಿಯ ರಾಯಲ್ ಗಾರ್ಡನ್‌ನಲ್ಲಿ ರವಿವಾರ “ಉಡುಪಿ ಉತ್ಸವ’ ಉದ್ಘಾಟನೆ ಸಮಾರಂಭ ನಡೆಯಿತು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಉದ್ಘಾಟಿಸಿ, ಉಡುಪಿ ಜನತೆಗೆ ಕಳೆದ ಹತ್ತು ವರ್ಷಗಳಿಂದಲೂ ಮನೋರಂಜನೆಯೊಂದಿಗೆ ಒಂದೇ ಸೂರಿನಡಿ ವೈವಿಧ್ಯಮಯ ಆಕರ್ಷಕ ವಸ್ತು ಖರೀದಿಸುವ ವ್ಯವಸ್ಥೆ ಕಲ್ಪಿಸಿಕೊಟ್ಟ ಉಡುಪಿ ಉತ್ಸವ ಇದೀಗ ಆರಂಭಗೊಂಡಿದೆ. ಜನತೆ ಮನೋರಂಜನೆಯನ್ನು ಆಸ್ವಾದಿಸಲು ಸಾಕಷ್ಟು ಅವಕಾಶವಿದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ರತ್ನಾಕರ ಶೆಟ್ಟಿ, ನಗರಸಭೆ ಸ್ಥಾಯಿ ಸಮಿತಿ ನಿಯೋಜಿತ ಅಧ್ಯಕ್ಷ ಹಾರ್ಮಿಸ್ ನೊರೊನ್ಹ ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಪಿ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭೆ ಸದಸ್ಯರಾದ ಜನಾರ್ದನ ಭಂಡಾರ್ಕರ್, ಸೆಲಿನಾ ಕರ್ಕಡ, ಶೋಭಾ ಕಕ್ಕುಂಜೆ, ಚಂದ್ರಕಾಂತ್ ನಾಯಕ್, ಗಣೇಶ್ ನೇರ್ಗಿ, ಲತಾ ಆನಂದ ಶೇರಿಗಾರ್ ಉಪಸ್ಥಿತರಿದ್ದರು.
ಉಡುಪಿಯಲ್ಲಿ ಫ್ರಾನ್ಸ್‌ನ ಐಫೆಲ್ ಟವರ್!
ಈ ಬಾರಿಯ ಉಡುಪಿ ಉತ್ಸವದಲ್ಲಿ ಅನೇಕ ಹೊಸ ಹೊಸ ಬಗೆಯ ಆಕರ್ಷಣೆಗಳೊಂದಿಗೆ ದೇಶದಲ್ಲೇ ಪ್ರಥಮ ಬಾರಿಗೆ ಉಡುಪಿಯಲ್ಲಿ 90 ಅಡಿ ಎತ್ತರದ 20,000 ಕೆಜಿ ಸ್ಟೀಲ್‌ನಿಂದ ತಯಾರಿಸಿದ ಸಪ್ತ ವರ್ಣಗಳಿಂದ ಕಂಗೊಳಿಸುವ “ಫ್ರಾನ್ಸ್ ದೇಶದ ಐಫೆಲ್ ಟವರ್’ ಮಾದರಿ ಗಮನ ಸೆಳೆಯುತ್ತಿದೆ.
ವಿಶೇಷ ಆಕರ್ಷಣೆ
27 ಬಗೆಯ ವೈವಿಧ್ಯಮಯ ಆಕರ್ಷಕ ಕೈಬರಹದ ಪೈಂಟಿಂಗ್‌ನ ಸೆಲ್ಫಿ ಗ್ಯಾಲರಿ, ಎನಿಮಲ್ ಕಿಂಗ್‌ಡಂ ಹಾಗೂ ಇನ್ನಿತರ ಆಕರ್ಷಣೆಗಳು ಸೇರಿದಂತೆ ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಉತ್ಸವವನ್ನು ಆಯೋಜಿಸಲಾಗಿದೆ. ನೂರಕ್ಕೂ ಅಧಿಕ ವೈವಿಧ್ಯಮಯ ವಸ್ತುಗಳ ಮಳಿಗೆಗಳು ಹಾಗೂ ಮಕ್ಕಳನ್ನು ಆಕರ್ಷಿಸುವ ಹಲವು ಬಗೆಯ ಅಮ್ಯೂಸ್‌ಮೆಂಟ್‌ಗಳು ಮನೋರಂಜನೆ ನೀಡಲಿದೆ ಎಂದು ಸಂಘಟಕ ಗೌತಮ್ ಅಗರ್‌ವಾಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.