Udupi Utsav 2023: ಜನಾಕರ್ಷಣೆಯ ಕೇಂದ್ರವಾದ “ಉಡುಪಿ ಉತ್ಸವ’
Team Udayavani, Dec 29, 2023, 2:15 PM IST
ಉಡುಪಿ: ನ್ಯಾಶನಲ್ ಕನ್ಸ್ಯೂಮರ್ ಫೇರ್ (ಎನ್‌ಸಿಎಫ್) ವತಿಯಿಂದ ಕರಾವಳಿ ಬೈಪಾಸ್ ಬಳಿಯ ರಾ.ಹೆ. 66ರ ಸನಿಹದ ಶಾರದಾ ಹೊಟೇಲ್ ಸಮೀಪದ 10 ಎಕ್ರೆ ವಿಶಾಲವಾದ ಜಾಗದಲ್ಲಿ ಆರಂಭಗೊಂಡ ಬೃಹತ್ ವಸ್ತು ಪ್ರದರ್ಶನ, ಮನೋರಂಜನೆ, ಸಾಂಸ್ಕೃತಿಕ ಮೇಳಗಳನ್ನು ಒಳಗೊಂಡ “ಉಡುಪಿ ಉತ್ಸವ’ದಲ್ಲಿ ನೀರೊಳಗಿನ ಮೀನು ಸುರಂಗ ಪ್ರದರ್ಶನ ಜನಾಕರ್ಷಣೀಯ ಕೇಂದ್ರ ಬಿಂದುವಾಗಿದೆ.
ಇಲ್ಲಿ ಆಟವಾಡಲು ಇಟಾಲಿಯನ್ ಟೊರಾಟೊರಾ, ಡ್ರ್ಯಾಗನ್ ಕಾರ್, ತ್ರಿಡಿ ಸಿನೆಮಾ, ಜಾಯಿಂಟ್ ವ್ಹೀಲ್, ಡ್ರ್ಯಾಗನ್ ವ್ಹೀಲ್, ಬ್ರೇಕ್ ಡ್ಯಾನ್ಸ್, ಮಿನಿ ಟ್ರೈನ್, ಹಿಪ್ಪೋಸ್ಲೆ„ಡ್, ಸಿಗ್ ಸ್ಯಾಗ್, ಎಲೆಕ್ಟ್ರಿಕ್ ಟ್ರೈನ್, ಜೈನಾ ಬಲೂನ್, ಕಪ್ಪೆ ಸವಾರಿ, ಟೈಟಾನಿಕ್ ಜಿಗ್‌ಜಾಗ್, 150 ಮೀ. ಉದ್ದದ ಬಲೂನ್, ಡ್ರ್ಯಾಗನ್ ಬಲೂನ್ ಹಾಗೂ ರಿಂಗ್ ಗೇಮ್, ಶೂಟಿಂಗ್ ಗೇಮ್ ಇತ್ಯಾದಿಗಳಿವೆ.
ಮಕ್ಕಳ, ಯುವಜನರ ಅಚ್ಚುಮಚ್ಚಿನ ಫಾಸ್ಟ್‌ಫುಡ್‌ಗಳು, ವೈವಿಧ್ಯಮಯ ಆಹಾರ ಸಾಮಗ್ರಿಗಳು, ದಿನನಿತ್ಯ ಎಲ್ಲ ವಯೋಮಾನದವರು ಬಳಸುವ ಎಲ್ಲ ಬಗೆಯ ವಸ್ತು ವೈವಿಧ್ಯಗಳ ನೂರಾರು ಮಳಿಗೆಗಳಿವೆ. ಆಕರ್ಷಕ ಸೆಲ್ಫಿ ಚಿತ್ರಗಳು, ಪ್ರಾಣಿಗಳ ಲೋಕ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ, ಫಿಶ್ ಸ್ಪಾ ಮಸಾಜ್ ಸೇರಿದಂತೆ ಇನ್ನಷ್ಟು ಆಕರ್ಷಣೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಸುಸಜ್ಜಿತ ವಾಹನ ನಿಲುಗಡೆಗೆ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಗೌತಮ್ ಅಗರ್‌ವಾಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.