![Demand to lift restrictions on rice transport from the Karnataka to Telangana](https://www.udayavani.com/wp-content/uploads/2024/12/raichur-415x241.jpg)
ಉಡುಪಿ: ಯಾರಾಗುವರು ಉಸ್ತುವಾರಿ ?
Team Udayavani, May 20, 2018, 8:56 AM IST
![o-17.jpg](https://www.udayavani.com/wp-content/uploads/2018/05/20/o-17.jpg)
ಉಡುಪಿ: ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಮೂರೇ ದಿನಗಳಲ್ಲಿ ರಾಜೀನಾಮೆ ಕೊಟ್ಟಿದ್ದು, ಮುಂದಿನ ಅವಕಾಶ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟಕ್ಕೆ ಸಿಕ್ಕಿದೆ. ಬಿಜೆಪಿ ಸರಕಾರ ರಚನೆಯಾಗಿದ್ದರೆ ಜಿಲ್ಲೆಯ ಐವರು ಶಾಸಕರಲ್ಲಿ ಒಬ್ಬರಲ್ಲ ಒಬ್ಬರಿಗೆ ಸಚಿವ ಪದವಿ ಸಿಗುವ ಖಾತ್ರಿ ಇತ್ತು. ಆದರೆ ಈಗ ಕಾಂಗ್ರೆಸ್- ಜೆಡಿಎಸ್ ಸರಕಾರ ರಚಿಸಿವೆ, ಈ ಪಕ್ಷಗಳಿಂದ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವಿಧಾನಸಭಾ ಸದಸ್ಯನಿಲ್ಲ. ಹೀಗಾಗಿ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವರು ಯಾರಾಗುವರು ಎಂಬ ಕುತೂಹಲ ಉಂಟಾಗಿದೆ.
ಈಗಿರುವ ಸಾಧ್ಯತೆ ಪ್ರಕಾರ ವಿಧಾನ ಪರಿಷತ್ ಸದಸ್ಯ ಕುಂದಾಪುರದ ಪ್ರತಾಪಚಂದ್ರ ಶೆಟ್ಟಿಯವರಿಗೆ ಅವಕಾಶಗಳು ಹೆಚ್ಚಿವೆ. ಮೈತ್ರಿಕೂಟ ಸರಕಾರವಿರುವಾಗ ಸಾಮಾನ್ಯವಾಗಿ ಜಿಲ್ಲೆಗಳನ್ನು ಉಭಯ ಪಕ್ಷಗಳು ಹಂಚಿಕೊಳ್ಳುತ್ತವೆ. ಹೀಗಾಗಿ ದ.ಕ., ಉಡುಪಿ ಜಿಲ್ಲೆ ಎರಡೂ ಜಿಲ್ಲೆಯನ್ನು ಕಾಂಗ್ರೆಸ್ ವಹಿಸಿಕೊಳ್ಳಬಹುದು ಅಥವಾ ಒಂದು ಜಿಲ್ಲೆಯನ್ನು ಕಾಂಗ್ರೆಸ್ ಮತ್ತು ಇನ್ನೊಂದು ಜಿಲ್ಲೆಯನ್ನು ಜೆಡಿಎಸ್ ಹಂಚಿಕೊಳ್ಳಬಹುದು.
ಯಾರು ಉಸ್ತುವಾರಿ ಸಚಿವರು?
ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿದ್ದ ಒಂಬತ್ತು ಮಂದಿ ಶಾಸಕರಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ -ಜನತಾದಳ, ಡಿ.ಟಿ. ಜಯಕುಮಾರ್ -ಜೆಡಿಎಸ್, ಡಾ| ವಿ.ಎಸ್. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯವರಾದರೆ ಉಳಿದವರೆಲ್ಲರೂ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು. ಡಿ.ಟಿ. ಜಯಕುಮಾರ್ ಅವರು ಎಚ್.ಡಿ. ಕುಮಾರಸ್ವಾಮಿ- ಯಡಿಯೂರಪ್ಪ ಸರಕಾರವಿರುವಾಗ ಉಸ್ತುವಾರಿ ಸಚಿವರಾಗಿದ್ದರು. ಈಗ ಮತ್ತೆ ಅಂತಹ ಕಾಲ ಕೂಡಿ ಬರುತ್ತಿದೆ.
ಉಡುಪಿ ಜಿಲ್ಲೆ ಜೆಡಿಎಸ್ ಪಾಲಿಗಾದರೆ ಹೊರಗಿನ ಸಚಿವರು ಇಲ್ಲಿಗೆ ಉಸ್ತುವಾರಿಯಾಗಿ ಬರಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಸಚಿವರಾಗಬಲ್ಲ ವರ್ಚಸ್ಸು ಹೊಂದಿದ ಸ್ಥಳೀಯ ಜೆಡಿಎಸ್ ನಾಯಕರು ಇಲ್ಲವಾದ ಕಾರಣ ಹೊರಗಿನ ಜಿಲ್ಲೆಯವರು ಉಸ್ತುವಾರಿಯಾಗುವುದು ಅನಿವಾರ್ಯ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರತಾಪಚಂದ್ರ ಶೆಟ್ಟಿಯವರಿಗೆ ಅವಕಾಶ ಕೂಡಿ ಬಂದೀತು. ಸುದೀರ್ಘ ಕಾಲ ವಿಧಾನಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಆಡಳಿತಾತ್ಮಕ ಸೂಕ್ಷ್ಮ ವಿಷಯಗಳು ತಿಳಿದಿದ್ದರೂ ಪ್ರತಾಪಚಂದ್ರ ಶೆಟ್ಟಿಯವರಿಗೆ ಸಚಿವರಾಗುವ ಯೋಗ ಬಂದಿರಲಿಲ್ಲ. ಈಗದು ಬರುವ ಲಕ್ಷಣಗಳಿವೆ.
ಇವರು ಉಸ್ತುವಾರಿ ಸಚಿವರಾಗಿದ್ದರು
ಕೆ. ಜಯಪ್ರಕಾಶ್ ಹೆಗ್ಡೆ, ವಸಂತ ಸಾಲ್ಯಾನ್, ರೋಶನ್ ಬೇಗ್, ಸುಮಾ ವಸಂತ್, ಮೋಟಮ್ಮ, ಡಿ.ಟಿ. ಜಯಕುಮಾರ್, ಡಾ| ವಿ.ಎಸ್. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಇದುವರೆಗೆ ಒಂಬತ್ತು ಮಂದಿ ಸಚಿವರಾಗಿದ್ದು, ಮುಂದಿನವರು ಹತ್ತನೆಯವರು.
ಟಾಪ್ ನ್ಯೂಸ್
![Demand to lift restrictions on rice transport from the Karnataka to Telangana](https://www.udayavani.com/wp-content/uploads/2024/12/raichur-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Demand to lift restrictions on rice transport from the Karnataka to Telangana](https://www.udayavani.com/wp-content/uploads/2024/12/raichur-150x87.jpg)
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
![4-sakleshpura](https://www.udayavani.com/wp-content/uploads/2024/12/4-sakleshpura-150x90.jpg)
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
![Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ](https://www.udayavani.com/wp-content/uploads/2024/12/1-36-150x90.jpg)
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-150x87.jpg)
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.