Udupi: ಜುವೆಲರಿಗೆ ನಕಲಿ ಚಿನ್ನ ನೀಡಿ ವಂಚಿಸಿದ ಮಹಿಳೆಯರು
Team Udayavani, Feb 21, 2024, 12:01 AM IST
ಉಡುಪಿ: ಇಲ್ಲಿಯ ಜುವೆಲರಿ ಶಾಪೊಂದಕ್ಕೆ ಬಂದ ಮಹಿಳೆಯರು ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ನಕಲಿ ಚಿನ್ನಾಭರಣಗಳನ್ನು ನೀಡಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಕನಕದಾಸ ರಸ್ತೆಯಲ್ಲಿರುವ ಅಂಗಡಿಗೆ ಫೆ.18ರಂದು ರಾತ್ರಿ 7.30ರ ಸುಮಾರಿಗೆ 35ರಿಂದ 45 ವರ್ಷ ಪ್ರಾಯದ ಮೂವರು ಬುರ್ಖಾಧಾರಿ ಮಹಿಳೆ ಯರು ಬಂದು 15.800 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು 10.150 ಗ್ರಾಂ ತೂಕದ ಬ್ರೇಸ್‌ಲೆಟ್ ಖರೀದಿಸಿದ್ದರು. ಇದಕ್ಕೆ ಬದಲಾಗಿ ಆರೋಪಿಗಳು ತಮ್ಮಲ್ಲಿದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಲೇಸ್ ಮತ್ತು 10.940 ಗ್ರಾಂ ತೂಕದ ಜುಮುಕಿ ನೀಡಿದ್ದರು. ಅಂಗಡಿಯವರಿಂದ 48,771 ರೂ. ಉಳಿಕೆ ಹಣದ ಪೈಕಿ 19,000 ರೂ. ಪಡೆದುಕೊಂಡು 8.30ರ ಸುಮಾರಿಗೆ ನಿರ್ಗಮಿಸಿದ್ದರು.
ಆರೋಪಿಗಳು ವ್ಯವಹಾರದ ಸಮಯದಲ್ಲಿ ಚೌಕಾಸಿ ಮಾಡುವ ವೇಳೆ ಅಂಗಡಿಯವರ ಗಮನವನ್ನು ಬೇರೆಡೆಗೆ ಸೆಳೆದು ನಕಲಿ ಚಿನ್ನದ ಆಭರಣಗಳನ್ನು ನೀಡಿ 1,98,923 ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.