ಉಡುಪಿ: ವಿಶ್ವ ಮಹಿಳಾ ದಿನಾಚರಣೆ
Team Udayavani, Mar 11, 2019, 1:00 AM IST
ಉಡುಪಿ : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ವಲಯ 15ರ ವಿವಿಧ ಘಟಕಗಳ ಆಶ್ರಯದಲ್ಲಿ ಬೃಹತ್ ವಾಕಥಾನ್ ಮತ್ತು ಮಹಿಳಾ ಆರೋಗ್ಯ ಮಾಹಿತಿ ಕಾರ್ಯಕ್ರಮ ಮಾ.8 ರಂದು ನಗರದ ಬ್ರಹ್ಮಗಿರಿ ಸರ್ಕಲ್ ಬಳಿ ಜರಗಿತು.
ರಾಷ್ಟೀಯ ಕಾರ್ಯಕ್ರಮ ನಿರ್ದೇಶಕ ಸಂದೀಪ್ ಕುಮಾರ್ ನೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಫೌಂಡೇಶನ್ ಮತ್ತು ಜೇಸಿಐ ಭಾರತದ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ರೀತಿಯ ನೂತನ ಪ್ರಯತ್ನ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ವಲಯ ಉಪಾಧ್ಯಕ್ಷ ದೇವೇಂದ್ರ ನಾಯಕ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ವಲಯ ಅಧ್ಯಕ್ಷ ಅಶೋಕ್‌ಚುಂತಾರ್, ಪೂರ್ವ ರಾಷ್ಟೀಯ ಉಪಾಧ್ಯಕ್ಷ ಸದಾನಂದ ನಾವಡ, ಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ., ವಲಯ ಉಪಾಧ್ಯಕ್ಷ ಕಾತೀಕೇಯ ಮಧ್ಯಸ್ಥ, ಮಕರಂದ ಸಾಲ್ಯಾನ್, ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ವಲಯಾಧಿಕಾರಿಗಳಾದ ಶೆರ್ಲಿ ಮನೋಜ್,ಶ್ರೀನಿವಾಸ, ರಾಜೇಶ್ ಭಟ್, ಘಟಕಾಧ್ಯಕ್ಷ ಜಗದೀಶ್ ಶೆಟ್ಟಿ, ದೀಪಿಕಾ ಭಟ್, ಅಶೋಕ್ ಪೂಜಾರಿ, ವಿನುತಾ, ರತ್ನಾಕರ್,ರೂಪಶ್ರೀ ಇಂದ್ರಾಳಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾಕಥಾನ್ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.