ಉದ್ಯಾವರ: ಪಡುಕರೆ ಭಾಗದಲ್ಲಿ ಮುಂದುವರಿದ ಕಡಲ ಅಬ್ಬರ
Team Udayavani, Jun 14, 2019, 6:10 AM IST
ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ ಪರಿಸರದಲ್ಲಿ ಕಡಲಿನ ಅಬ್ಬರವು ಮಂಗಳವಾರವೂ ಮುಂದುವರಿದಿದೆ.
ಕಡಲಿನ ನೀರಿನ ಸೆರೆಯ ಅಬ್ಬರದಿಂದ ಸಮುದ್ರದ ನೀರು ಮಲ್ಪೆ ಸಂಪರ್ಕದ ಪ್ರಮುಖ ರಸ್ತೆಯನ್ನೂ ದಾಟಿದ್ದು, ಶ್ರೀರಾಮಭಕ್ತ ಹನುಮಾನ್ ಭಜನ ಮಂದಿರ ಬಳಿಯ ಮೋಹನ್ ಮೆಂಡನ್, ಕಾವೇರಿ ಸುವರ್ಣ ಎಂಬವರ ಮನೆ ಬಳಿಯಲ್ಲಿ ತೋಟದೊಳಕ್ಕೆ ನುಗ್ಗಿ ಪೂರ್ವ ಪಾರ್ಶ್ವದಲ್ಲಿರುವ ಪಾಪನಾಶಿನಿ ಹೊಳೆಗೆ ಸೇರಿತ್ತು. ರಸ್ತೆಯ ಮೇಲೆಲ್ಲಾ ಮರಳು ತುಂಬಿತ್ತು.
ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಸಂಜೆಯ ವೇಳೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು ಅಪರ ಜಿಲ್ಲಾಧಿಕಾರಿ ಮತ್ತು ಎ.ಡಿ.ಬಿ. ಎಂಜಿನಿಯರ್ ಅವರೊಂದಿಗೆ ಸುರಕ್ಷತೆಯನ್ನು ಕಲ್ಪಿಸುವಂತೆ ಫೋನ್ ಮೂಲಕ ಸಂಪರ್ಕಿಸಿ ತಿಳಿಸಿರುತ್ತಾರೆ.
ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆಯನ್ನೂ ನಡೆಸಿರುತ್ತಾರೆ.
ಈ ಸಂದರ್ಭ ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಉದ್ಯಾವರ, ಗ್ರಾ.ಪಂ.ಸದಸ್ಯ ರವಿ ಕೋಟ್ಯಾನ್, ಸ್ಥಳೀಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.