ಉದ್ಯಾವರ : ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿ
Team Udayavani, Aug 25, 2018, 11:43 AM IST
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗ್ಯಾಸ್ ಬಂಕ್ ಎದುರುಗಡೆ ಗುಂಡಿ ಕಂಡು ಬರುತ್ತಿದ್ದು, ದ್ವಿಚಕ್ರ ಸವಾರರ ಸಹಿತ ಇತರೇ ವಾಹನ ಚಾಲಕರು ಅಪಾಯವನ್ನು ಎದುರಿಸುವಂತಾಗಿದೆ.ತುಸು ಆಳವಾದ ಹೊಂಡ ಇದಾಗಿದ್ದು, ಹೆದ್ದಾರಿಯ ವಿಭಾಜಕದ ಪಕ್ಕದಲ್ಲಿಯೇ ಇದ್ದು ವಾಹನ ಸವಾರರು ಸರಿಯಾಗಿ ಲೆಕ್ಕಿಸದೆ ಅಪಾಯಕ್ಕೀಡಾಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮಳೆ ಬಂದ ಸಂದರ್ಭ ಈ ಗುಂಡಿಯಲ್ಲಿ ನೀರು ನಿಂತು ರಸ್ತೆ ಯಾವುದು ಹೊಂಡ ಯಾವುದು ಎಂದು ತಿಳಿಯದ ಪರಿಸ್ಥಿತಿ ಇದ್ದು, ಕತ್ತಲಾಗುತ್ತಿದ್ದಂತೆಯೇ ಈ ಭಾಗದಲ್ಲಿ ಸಂಚಾರವು ದುಸ್ತರವಾಗುತ್ತಿದೆ. ಕಳೆದ ಸುಮಾರು 25 ದಿನಗಳಿಂದಲೂ ಈ ಹೆದ್ದಾರಿ ಗುಂಡಿಯು ಬಾಯ್ದೆರೆದಿದ್ದು, ಆ.23ರ ರಾತ್ರಿ ಓರ್ವ ದ್ವಿಚಕ್ರ ಸವಾರ ಈ ಗುಂಡಿಗೆ ಬಿದ್ದಿದ್ದು ತೀವ್ರ ತರಹದ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.
ಇದೀಗ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡನ್ನು ಹೆದ್ದಾರಿ ನಡುವೆ ಇರಿಸಲಾಗಿದ್ದು, ಸ್ವಲ್ಪಮಟ್ಟಿನ ನಿರಾಳತೆ ಕಂಡುಬರುತ್ತದೆ. ಇಷ್ಟೆಲ್ಲಾ ಅಪಾಯಕಾರಿ ಸನ್ನಿವೇಶ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದರೂ ಸಂಬಂಧ ಪಟ್ಟ ಇಲಾಖೆಯು ನಿರ್ವಹಣೆಯನ್ನು ಮಾಡದೆ ಇನ್ನಷ್ಟು ಅಪಾಯವನ್ನು ನಿತ್ಯ ಸವಾರರು ಎದುರಿಸುವಂತಾಗಿದೆ.
ಇಲ್ಲಿನ ಗುಂಡಿ ಸಹಿತ ಹೆದ್ದಾರಿಯ ಇತರೆಡೆಗಳಲ್ಲಿಯೂ ಕಂಡು ಬರುವ ಗುಂಡಿಗಳನ್ನು ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತು ಸರಿಪಡಿಸಿ ವಾಹನ ಸವಾರರ ಸುಗಮ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.