“ಪರ್ಯಾಯ ಆಹಾರಗಳಿಗಿಂತ ಅನ್ನವೇ ಶ್ರೇಷ್ಠ’


Team Udayavani, Jun 28, 2018, 7:55 AM IST

2706kpt5e.jpg

ಕಟಪಾಡಿ: ಕೃಷಿ ಸಮೃದ್ಧ ವಾಗಿದ್ದಲ್ಲಿ ದೇಶ ಸಂಪದ್ಭರಿತವಾಗಿರುತ್ತದೆ. ಇತರ ಪರ್ಯಾಯ ಆಹಾರಗಳಿಗಿಂತ ಅನ್ನವೇ ಶ್ರೇಷ್ಠ ಆಹಾರವಾಗಿದೆ. ರೈತರ ಕೃಷಿ ಫಸಲು ಸಮೃದ್ಧಿಯೊಂದಿಗೆ ಲಾಭದಾಯಕವಾಗಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದ್ದಾರೆ.

ಜೂ. 27ರಂದು ಉದ್ಯಾವರ ಶ್ರೀ ವಿಠೊಬ ರುಖುಮಾಯಿ ಬಿಲ್ಲವ ಸಭಾ ಭವನದಲ್ಲಿ ಉಡುಪಿ ಜಿ.ಪಂ.  ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ – 2018-19 ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ  ಉದ್ಘಾಟಿಸಿ  ಅವರು ಮಾತನಾಡಿದರು.

ಕೈಗಾರೀಕರಣದಿಂದ ವಲಸೆ 
ಸ್ವಾತಂತ್ರ್ಯ ಪೂರ್ವದಲ್ಲಿ ಶೇ.70 ಪಾಲು ಜನರಿಗೆ ಕೃಷಿ ಜೀವನಾಧಾರಿತವಾಗಿತ್ತು. ಜಿಲ್ಲೆಯ ಪ್ರಧಾನ ಬೇಸಾಯ ಭತ್ತದ ಬೆಳೆಯಾಗಿದ್ದರೂ, ಕೈಗಾರೀಕರಣದಿಂದ ಯುವ ಜನತೆ ಪಟ್ಟಣದತ್ತ ಆಕರ್ಷಿತರಾಗುತ್ತಿದ್ದಾರೆ.  ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ  ನಮ್ಮ ಜಿಲ್ಲೆಯಲ್ಲಿ ಕೃಷಿ ದುಬಾರಿ ಅನಿಸತೊಡಗಿದೆ. ಮೂರು ಬೆಳೆ  ಬೆಳೆಯದೆ ಭತ್ತದ ಇಳುವರಿ ಕುಂಠಿತವಾಗುತ್ತಿದೆ. ಕೃಷಿ ಲಾಭದಾಯಕವಾಗಿಲ್ಲ. ಇಲಾಖೆ, ಸರಕಾರದ ಸವಲತ್ತುಗಳ ಸದ್ಭಳಕೆಯಿಂದ ಕೃಷಿಕರೇ ಸ್ವಯಂ ಸ್ಪೂರ್ತಿಯಿಂದ ಕೃಷಿ ಉಳಿಸಿ ಸಂತೃಪ್ತಿ ಪಡೆಯಬೇಕಿದೆ. ಕರಾವಳಿಯ ರೈತರ ಪರಿಶ್ರಮದ  ಭತ್ತದ ಬೆಳೆಯ ಅನ್ನ ಊಟದ ಜತೆಗೆ ಕರಾವಳಿಯ ಮೀನಿನ ಪದಾರ್ಥದ ಕಾಂಬಿನೇಷನ್‌ ಬಹಳಷ್ಟು ಸ್ವಾದಿಷ್ಟಕರವಾಗಿರುತ್ತದೆ ಎಂದರು.

ರೈತರ ಕೃಷಿಗೆ ಸಹಕಾರಿ 
ತಾ.ಪಂ.  ಉಪಾಧ್ಯಕ್ಷ ರಾಜೇಂದ್ರ ಪಿ. ಮಾತನಾಡಿ, ಕೃಷಿಕರೇ ದೇಶದ ಬೆನ್ನೆಲುಬು. ರೈತರ ಕೃಷಿಗೆ ಸಹಕಾರಿ
ಯಾಗಿ ಇಲಾಖೆ ವತಿಯಿಂದ ಇರುವ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದವರು ತಿಳಿಸಿದರು.

ಉದ್ಯಾವರ ಬಿಲ್ಲವ ಮಹಾಜನ ಸೇವಾ ಸಂಘದ ಅಧ್ಯಕ್ಷ ಪ್ರತಾಪ್‌ ಕುಮಾರ್‌ ಮಾತನಾಡಿ, ಆಧುನಿಕ ಕೃಷಿಗೆ ಒಗ್ಗಿಕೊಂಡು, ಇಲಾಖಾ ಮಾಹಿತಿ ಪಡೆದು, ಸವಲತ್ತುಗಳ ಸದುಪಯೋಗ ಪಡೆದುಕೊಂಡು ಕೃಷಿ ಉಳಿಸಿ ಬೆಳೆಸುವಂತೆ  ತಿಳಿಸಿದರು.

ತಾ.ಪಂ. ಸದಸ್ಯರಾದ ರಜನಿ ಆರ್‌.ಅಂಚನ್‌, ಸಂಧ್ಯಾ ಕಾಮತ್‌, ಎ.ಪಿ.ಎಂ.ಸಿ. ಸದಸ್ಯ ಕಿರಣ್‌ ಕುಮಾರ್‌ ಉದ್ಯಾವರ, ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷ ರಿಯಾಜ್‌ ಪಳ್ಳಿ, ಆತ್ರಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ಉಷಾ, ಪಶುವೈದ್ಯಾಧಿಕಾರಿ ಡಾ| ಸಂಪತ್‌ ಶೆಟ್ಟಿ, ವ.ಕೃ.ತೋ.ಸಂ. ಕೇಂದ್ರದ ಸಹ ಸಂಶೋಧನ ನಿರ್ದೇಶಕ ಡಾ| ಎಸ್‌.ಯು. ಪಾಟೀಲ್‌, ಮಣ್ಣು ವಿಜ್ಞಾನಿ ಟಿ.ಎಚ್‌. ರಂಜಿತ್‌, ಸಹಾಯಕ ಪ್ರಾಧ್ಯಾಪಕಿ ಡಾ| ಸೀಮಾ, ಬ್ರಹ್ಮಾವರ ಡಿಪ್ಲೊಮಾ ಕೃಷಿ ವಿಶ್ವವಿದ್ಯಾನಿಲಯದ ಪ್ರಾಂಶುಪಾಲ ಡಾ| ಕೆ.ಜಿ.ಎಸ್‌. ಕಾಮತ್‌,  ಜಿಲ್ಲಾ ಆತ್ಮಯೋಜನ ಉಪನಿರ್ದೇಶಕ ಅಣ್ಣಪ್ಪ ಸ್ವಾಮಿ ಉಪಸ್ಥಿತರಿದ್ದರು. 

ಸಹಾಯಕ ಕೃಷಿ ಅಧಿಕಾರಿ ನಾರಾಯಣ ಐತಾಳ್‌, ರಾಮಕೃಷ್ಣ ಭಟ್‌, ಸಹಾಯಕ ತೋಟಗಾರಿಕೆ ಅಧಿಕಾರಿ ದೀಪಾ ಉಪಸ್ಥಿತರಿದ್ದರು.

ಉದ್ಯಾವರ ಗ್ರಾ. ಪಂ.  ಅಭಿವೃದ್ಧಿ ಅಧಿಕಾರಿ ರಮಾನಂದ ಪುರಾಣಿಕ್‌ ಸ್ವಾಗತಿಸಿದರು. ಸಹಾಯಕ ಕೃಷಿ 
ನಿರ್ದೇಶಕ, ತಾ.ಪಂ.  ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್‌ ಪ್ರಸ್ತಾವನೆಗೈದರು. ಆತ್ಮ ಯೋಜನೆಯ ತಾಲೂಕು ತಾಂತ್ರಿಕ ಮುಖ್ಯಸ್ಥೆ ಸಂಜನಾ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸುಣ್ಣ ಬಳಕೆಯಿಂದ ಫ‌ಲವತ್ತತೆ ಸಾಧ್ಯ
ನಗರೀಕರಣದಿಂದ ಕೃಷಿ ಕುಂಠಿತವಾಗುತ್ತಿದೆ. ಕರಾವಳಿಯಲ್ಲಿ ಮಳೆಯಿಂದಾಗಿ ಮಣ್ಣಿನ ಫಲವತ್ತತೆ ಕುಂದುತ್ತದೆ. ಮಣ್ಣು ಪರೀಕ್ಷೆ ಅವಶ್ಯಕವಾಗಿದ್ದು, ಕರಾವಳಿಯಾದ್ಯಂತ ಇರುವ ಹುಳಿ ಮಣ್ಣು ಸಾರಭರಿತವಾಗಲು ಸುಣ್ಣದ ಸಮರ್ಪಕ ಬಳಕೆಯಿಂದ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯ.
ಡಾ| ಕೆ.ಜಿ.ಎಸ್‌. ಕಾಮತ್‌,
ಪ್ರಾಂಶುಪಾಲ, ಬ್ರಹ್ಮಾವರ ಡಿಪ್ಲೊಮಾ ಕೃಷಿ ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.