ಉಜ್ವಲಾ ಯೋಜನೆ ಹಗರಣ; ಪ್ರಧಾನಿ ಕಚೇರಿಗೆ ದೂರು
Team Udayavani, Jul 6, 2018, 10:24 AM IST
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಉಜ್ವಲಾ ಯೋಜನೆ ಹಗರಣ ರಾಜ್ಯವ್ಯಾಪಿ ನಡೆದ ಬಗ್ಗೆ ಶಂಕೆ ಇದ್ದು ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಕೆಯಾಗಿದೆ. ಕೇಂದ್ರ ಸಚಿವಾಲಯಕ್ಕೆ ಈ ಬಗ್ಗೆ ಹಿಮ್ಮಾಹಿತಿ ನೀಡಿದ ವಿಚಾರದಲ್ಲಿ ಸಂದೇಶವೂ ಬಂದಿದೆ. ಹಗರಣ ವಿಚಾರ ಬಿಗಿಯಾಗುತ್ತಿರುವಂತೆ ತೈಲ ಕಂಪೆನಿ ಅಧಿಕಾರಿ ಗಳು ಎಚ್ಚೆತ್ತಿದ್ದು ವಿತರಕರಿಂದ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂಬಂಧ ಬೈಂದೂರು ತಾಲೂಕಿನ ಕೆಲ ವಿತರಕರ ಬಳಿ ವಿವರಣೆ ಕೇಳಿದ್ದಾರೆ. ಜಿಲ್ಲಾಡಳಿತ, ನೋಡಲ್ ಅಧಿಕಾರಿಗಳಿಂದಲೂ ಸಮಗ್ರ ವಿವರ ಕೇಳಲಾಗಿದೆ. ಇದೇ ಸಂದರ್ಭದಲ್ಲಿ ತಾಲೂಕು ಕಚೇರಿ ಅಧಿಕಾರಿಗಳೂ ಹಗರಣ ಸಂಬಂಧ ಮಾಹಿತಿ ಕೇಳಿದ್ದಾರೆ.
ಉಜ್ವಲಾ ಯೋಜನೆ ಕುರಿತು ಉದಯವಾಣಿ ವರದಿಯನ್ನು ಗಮನಿಸಿದ್ದೇನೆ. ಈ ಕುರಿತು ಕೇಂದ್ರ ಪೆಟ್ರೋಲಿಯಂ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿರುವ ವಿತರಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ತಿಳಿಸುತ್ತೇನೆ.
– ಶೋಭಾ ಕರಂದ್ಲಾಜಿ
ಉಡುಪಿ- ಚಿಕ್ಕಮಗಳೂರು ಸಂಸದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.