ಉಜ್ವಲ ಯೋಜನೆ: ಜಿಲ್ಲೆಯಲ್ಲಿ ಸಮಗ್ರ ತನಿಖೆ ಆರಂಭ
Team Udayavani, Aug 12, 2018, 10:29 AM IST
ಬೈಂದೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಉಜ್ವಲವನ್ನು ಬೇರೆ ಟಿನ್ ನಂಬರ್ ಇದ್ದವರಿಗೆ
ನೀಡಿ ದುರ್ಬಳಕೆ ಮಾಡಿದ ಪ್ರಕರಣದ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸಮಗ್ರ ತನಿಖೆಗೆ ಆದೇಶಿಸಿದೆ.
ಉಡುಪಿ ಜಿಲ್ಲೆಯಲ್ಲಿ ಗ್ಯಾಸ್ ವಿತರಕರು ವಿತರಿಸಿದ ಫಲಾನುಭವಿಗಳ ಕುರಿತು ವಿವರವಾದ ತನಿಖೆ ಆರಂಭಿಸಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅನಿಲ ಸಂಪರ್ಕ ನೀಡುವ ಉಜ್ವಲ ಯೋಜನೆಯಡಿ ಕೆಲವೆಡೆ ದುರುಪಯೋಗವಾಗಿದೆ ಎಂದು ಉದಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕೇಂದ್ರ ಪೆಟ್ರೋಲಿಯಂ ಇಲಾಖೆ ತಮ್ಮ ಅಧಿಕಾರಿಗಳಿಂದ ವರದಿ ಕೇಳಿತ್ತು. ಬ್ರಹ್ಮಾವರ ಹಾಗೂ ಗಂಗೊಳ್ಳಿಯಲ್ಲಿ ನೂರಾರು ಸಂಪರ್ಕ ವನ್ನು ನಿಯಮ ಬಾಹಿರ
ವಾಗಿ ನೀಡಿರುವ ಆರೋಪ ಕೇಳಿಬಂದಿತ್ತು.
ಗಂಗೊಳ್ಳಿಯಲ್ಲಿ ಇದುವರೆಗೆ ಮುನ್ನೂರಕ್ಕೂ ಅಧಿಕ ಕುಟುಂಬಗಳು ವೈಯಕ್ತಿಕ ಸಂಪರ್ಕದ ಮಾಹಿತಿ ಪಡೆಯಲಾಗಿದೆ. ಒಟ್ಟು 2 ಕೋಟಿಗೂ ಅಧಿಕ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲ ಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಸಿಆರ್‌ಎಂ ಎನ್. ರಮೇಶ ಹಾಗೂ ಭಾರತ್ ಪೆಟ್ರೋಲಿಯಂನ ಸಿಆರ್‌ಎಂ ನಾರಾಯಣ ಸ್ವಾಮಿ, ಕೇಂದ್ರ ಪೆಟ್ರೋಲಿಯಂ ಇಲಾಖೆಯ ಮಾರ್ಗಸೂಚಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಬ್ರಹ್ಮಾವರ ಮತ್ತುಗಂಗೊಳ್ಳಿ ಎಜೆನ್ಸಿಯಲ್ಲಿ ಇಂತಹ ಪ್ರಕರಣ ಕಂಡು ಬಂದಿದೆ. ವಿವಿಧ ಏಜೆನ್ಸಿಗಳು ನೀಡಿದ ಪ್ರತಿ ಸಂಪರ್ಕಗಳನ್ನೂ ವಿವರವಾಗಿ ತನಿಖೆ ಮಾಡಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.