Ullal ಅಂತಾರಾಜ್ಯ ಸ್ಪಿರಿಟ್ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ
ಲಕ್ಷಾಂತರ ಬೆಲೆಯ ಸ್ಪಿರಿಟ್, ಕಾರು, ನಕಲಿ ಸಾರಾಯಿ ವಶಕ್ಕೆ
Team Udayavani, Dec 13, 2023, 11:14 PM IST
ಉಳ್ಳಾಲ: ಕರ್ನಾಟಕ – ಕೇರಳ ಗಡಿಭಾಗದ ತಲಪಾಡಿ ಮತ್ತು ಕಿನ್ಯಾ ಗ್ರಾಮದ ಸಾಂತ್ಯದಲ್ಲಿ ಅಕ್ರಮವಾಗಿ ಸ್ಪಿರಿಟ್ ದಾಸ್ತಾನು ಮಾಡಿ ಕೇರಳ ಭಾಗಕ್ಕೆ ಸಾಗಾಟ ನಡೆಸುತ್ತಿದ್ದ ಬೃಹತ್ ಸ್ಪಿರಿಟ್ ಮತ್ತು ನಕಲಿ ಸಾರಾಯಿ ಜಾಲವನ್ನು ಅಬಕಾರಿ ಇಲಾಖೆ ಪತ್ತೆ ಹಚ್ಚಿದೆ.
ಮಂಗಳೂರು ವಿಭಾಗ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ನೇತೃತ್ವದ ತಂಡವು 2,450 ಲೀ. ಸ್ಪಿರಿಟ್, 242 ಲೀ. ನಕಲಿ ಬ್ರಾಂಡಿ, 2..34 ಲೀ. ಪ್ರಸ್ಟೀಜ್ ವಿಸ್ಕಿ ಸೇರಿದಂತೆ ಸಾರಾಯಿ ಪ್ಯಾಂಕಿಂಗ್ ಯಂತ್ರ, ಸಾಗಾಟಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕ ಪಡೆದುಕೊಂಡಿದ್ದು, ಮೂವರನ್ನು ಬಂಧಿಸಿದೆ. ಇಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಿನ್ಯಾ ಗ್ರಾ.ಪಂ. ವ್ಯಾಪ್ತಿಯ ಸಾಂತ್ಯದ ಮನೆಯಿಂದ 2,240 ಲೀ. ಮದ್ಯ ಸಾರ, 222 ಲೀ. ನಕಲಿ ಬ್ರಾಂಡಿ ಹಾಗೂ ನಕಲಿ ಸಾರಾಯಿ ಪ್ಯಾಕಿಂಗ್ ನಡೆಸುತ್ತಿದ್ದ ಯಂತ್ರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿ ನಿತ್ಯಾನಂದ ಭಂಡಾರಿ ತಲೆಮರೆಸಿಕೊಂಡಿದ್ದಾನೆ. ತಲಪಾಡಿ ಮಸೀದಿ ಬಳಿಯ ಮನೆಯೊಂದರಿಂದ 210 ಲೀ. ಸ್ಪಿರಿಟ್ 20ಲೀ. ನಕಲಿ ಬ್ರಾಂಡಿ, 2.34 ಲೀ. ನಕಲಿ ಪ್ರಸ್ಟೀಜ್ ವಿಸ್ಕಿ, ಇನೋವಾ ಕಾರು ಸಹಿತ ಅದರೊಳಗಿದ್ದ 70 ಲೀ. ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ. ಸತೀಶ್ ತಲಪಾಡಿ, ಕುಂಜತ್ತೂರಿನ ನೌಷಾದ್ ಹಾಗೂ ಅನ್ಸಿಫ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಆರೋಪಿ ಮಂಜೇಶ್ವರ ಕುಂಜತ್ತೂರು ನಿವಾಸಿ ಆನ್ನು ಯಾನೆ ಅರವಿಂದನ ಪತ್ತೆಗೆ ಕರ್ನಾಟಕದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಕೇರಳದ ಅಬಕಾರಿ ಇಲಾಖೆಯ ಸಹಯೋಗದೊಂದಿಗೆ ದಾಳಿ ನಡೆಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ನಿತ್ಯಾನಂದ ಮತ್ತು ಅರವಿಂದನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಕುಂಜತ್ತೂರು ಸಂಪರ್ಕ
ಸಾಂತ್ಯದಲ್ಲಿ ನಿತ್ಯಾನಂದ ಮತ್ತು ತಲಪಾಡಿಯ ಸತೀಶ್ ಅಕ್ರಮ ಅಡ್ಡೆಯ ಪ್ರಮುಖ ರೂವಾರಿ ಕುಂಜತ್ತೂರು ನಿವಾಸಿ ಅನ್ನು ಯಾನೆ ಅರವಿಂದ್ ಎಂಬಾತನಾಗಿದ್ದು, ಆತನ ವಿರುದ್ಧ ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. 9 ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಕುಂಜತ್ತೂರು ಪ್ರದೇಶ ಅಕ್ರಮ ದಾಸ್ತನಿಗೆ ಅವಕಾಶವಿರದ ಕಾರಣ ತಲಪಾಡಿ ಮತ್ತು ಸಾಂತ್ಯದಲ್ಲಿ ಈ ಚಟುವಟಿಕೆ ಅರವಿಂದ್ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಅಲ್ಲಿಂದ ನಕಲಿ ಸಾರಾಯಿಯನ್ನು ಕಾಸರಗೋಡು ಜಿಲ್ಲೆಯ ವಿವಿಧೆಡೆಗೆ ಏಜೆಂಟ್‌ಗಳ ಮೂಲಕ ಸಾಗಾಟ ಮಾಡುತ್ತಿದ್ದರು.
ಬುಧವಾರ ಮಂಗಳೂರು ವಿಭಾಗದ ಅಬಕಾರಿ ಅಧಿಕಾರಿಗಳ ತಂಡ ಕಾಸರಗೋಡು ಜಿಲ್ಲೆಯ ಅಬಕಾರಿ ಇಲಾಖೆಯ ತಂಡದೊಂದಿಗೆ ಅರವಿಂದನ ಮನೆಗೆ ದಾಳಿ ನಡೆಸಿದ್ದು, ಆರೋಪಿ ಮನೆಯಿಂದ ಹೊರಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಅರವಿಂದ ವಿದೇಶಕ್ಕೆ ತೆರಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಮಾತನಾಡಿ, ಅಧಿಕಾರ ಸ್ವೀಕರಿಸಿದ 2 ತಿಂಗಳ ಅವಧಿಯಲ್ಲಿ ಇದು ಬೃಹತ ದಾಳಿಯಾಗಿದ್ದು, ಅಕ್ರಮ ಸ್ಪಿರಿಟ್ ಸೇರಿದಂತೆ ನಕಲಿ ಸಾರಾಯಿ ಮಾರಾಟದ ಮೇಲೆ ನಿಗಾ ವಹಿಸಿದ್ದು, ಈ ಪ್ರಕರಣದ ಹಿಂದೆ ಇರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಅಬಕಾರಿ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ಟಿ., ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಮಾರ್ಗದರ್ಶನದಲ್ಲಿ ಉಪಅಧೀಕ್ಷಕ ಸೈಯ್ಯದ್ ತಫಿjàಲುಲ್ಲಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ದಕ್ಷಿಣ ವಲಯ-2 ಅಬಕಾರಿ ಇಲಾಖೆ ನಿರೀಕ್ಷಕಿ ಕಮಲಾ ಎಚ್.ಎನ್. ಉಪ ನಿರೀಕ್ಷಕರಾದ ಅಶೀಷ್, ಉಮೇಶ್, ಉಪ ವಿಭಾಗ 2 ಮಂಗಳೂರು ದಕ್ಷಿಣ ವಲಯ 1 ಮತ್ತು ಪೂರ್ವ ವಲಯ 1ರ ಅಬಕಾರಿ ಇಲಾಖೆಯ ಸಿಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.