ಎಲ್ಲೆಲ್ಲೂ ಕೊಡೆ ಅಲಂಕರಣ
ಕಡಿಯಾಳಿ ದೇವಸ್ಥಾನದ ಜೀರ್ಣೋದ್ಧಾರ-ಬ್ರಹ್ಮ ಕಲಶೋತ್ಸವ
Team Udayavani, May 27, 2022, 11:59 AM IST
ಉಡುಪಿ: ಕಡಿಯಾಳಿ ಶ್ರೀ ಮಹಿಷ ಮರ್ದಿನೀ ದೇವಸ್ಥಾನದಲ್ಲಿ ಜೂ. 1ರಿಂದ 10ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಪ್ರಚಾರ ಕಾರ್ಯ ಕ್ರಮಕ್ಕೆ ಗುರುವಾರ ಕಲ್ಸಂಕದಲ್ಲಿ ಸಾಮೂಹಿಕವಾಗಿ ಕೊಡೆ ಅರಳಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು, ಕಡಿಯಾಳಿ ದೇವಸ್ಥಾನದ ಭಕ್ತ ಸಮೂಹ ಸಹಿತ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಕೇಸರಿ ಹಾಗೂ ಬಿಳಿ ಬಣ್ಣದ ಬ್ರಹ್ಮಕಲಶೋತ್ಸವದ ಮಾಹಿತಿ ಹೊಂದಿರುವ ಕೊಡೆಯನ್ನು ಅರಳಿಸಿದರು.
ಸಮಾಜ ಸೇವಕರಾದ ಡಾ| ಪಿ.ವಿ. ಭಂಡಾರಿ, ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ರವಿ ಕಟಪಾಡಿ, ನೀತಾ ಪ್ರಭು, ಪೃಥ್ವಿ ಪೈ, ಈಶ್ವರ ಮಲ್ಪೆಯವರು ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇವಸ್ಥಾನ ಜನರಿಗೆ ಹತ್ತಿರವಾಗಿರಬೇಕು. ಜನ ಸಾಮಾನ್ಯರ ಕಷ್ಟಕ್ಕೆ ದೇವಸ್ಥಾನಗಳು ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಶ್ರೀ ಕೃಷ್ಣಮಠ, ಅಂಬಲಪಾಡಿ ದೇವಸ್ಥಾನ, ಕಡಿಯಾಳಿ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳು ಸಮಾಜಮುಖೀ ಕೆಲಸ ಮಾಡುತ್ತಿವೆ. ಎಲ್ಲ ದೇವಸ್ಥಾನಗಳು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಡಾ|ಭಂಡಾರಿ ಆಶಿಸಿದರು.
ಕಳೆದ 3-4 ತಿಂಗಳಿಂದ ನಿರಂತರ ಗ್ರಾಮಸ್ಥರು ಕರಸೇವೆ ಮಾಡುತ್ತಿದ್ದಾರೆ. ಈ ಪ್ರಚಾರ ಕೊಡೆಯನ್ನು ಬ್ರಹ್ಮಕಲಶೋತ್ಸವದ ಅನಂತರ ಬಡವರಿಗೆ ನೀಡಲಾಗು ವುದು ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಹೇಳಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ.ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಭಾಸ್ಕರ ಶೇರಿಗಾರ್, ಸಮಾಜಸೇವಕಿ ವೀಣಾ ಶೆಟ್ಟಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಜೂ. 10ರ ಬಳಿಕ ಕೊಡೆ ದಾನ
ಈ ಕೊಡೆ ಗಳನ್ನು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಮುಗಿಯುವ ವರೆಗೂ ಉಡುಪಿ ನಗರದ ಸಹಿತ ಜಿಲ್ಲೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುತ್ತದೆ. ಆ ಬಳಿಕ ಎಲ್ಲ ಕೊಡೆಯನ್ನು ಬಡ ವರ್ಗದವರಿಗೆ ದಾನವಾಗಿ ನೀಡಲಾಗುವುದು.
ಆಕರ್ಷಕ ಕೊಡೆ ಮೆರವಣಿಗೆ
ಸ್ಕೌಟ್ಸ್ ಮತ್ರು ಗೈಡ್ಸ್ ನ ಸ್ವಯಂಸೇವಕರು, ಭಕ್ತರು ಸಹಿತ ಸಾರ್ವ ಜನಿಕರು ಪ್ರಚಾರ ಕೊಡೆಯನ್ನು ಹಿಡಿದುಕೊಂಡು ಮೂರು ಸಾಲುಗಳಲ್ಲಿ ಕಲ್ಸಂಕದಿಂದ ಕಡಿ ಯಾಳಿ ದೇವಸ್ಥಾನದವರೆಗೆ ಮೆರ ವಣಿಗೆಯಲ್ಲಿ ಹೊರಟ ದೃಶ್ಯವು ಆಕರ್ಷಣೀಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.