ಮಣಿಪಾಲ- ಕ್ರಾನ್‌ಫೀಲ್ಡ್ ವಿ.ವಿ. ಒಪ್ಪಂದ
Team Udayavani, Feb 22, 2017, 12:27 PM IST
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಯುನೈಟೆಡ್ ಕಿಂಗ್‌ಡಂ ಕ್ರಾನ್‌ಫೀಲ್ಡ್ ವಿಶ್ವವಿದ್ಯಾನಿಲಯದ ನಡುವೆ ಬೆಂಗಳೂರಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಲಾಯಿತು. ಗ್ಯಾಸ್ ಟರ್ಬೈನ್ ಸಿಸ್ಟಮ್ಸ್, ಎನರ್ಜಿ, ಪ್ರಿಸಿಶನ್ ಅಗ್ರಿಕಲ್ಚರ್, ಉತ್ಪಾದನೆ, ಜಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಜ್ಞಾನ ವಿನಿಮಯ ಒಪ್ಪಂದಕ್ಕೆ ಬರಲಾಗಿದೆ.
ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್, ಬೆಂಗಳೂರಿನ ಏರೋ ಇಂಡಿಯಾ ಪ್ರದರ್ಶನಕ್ಕೆ ಆಗಮಿಸಿದ ಕ್ರಾನ್‌ಫೀಲ್ಡ್ ವಿ.ವಿ. ಕುಲಪತಿ, ಮುಖ್ಯ ಕಾರ್ಯನಿರ್ವಾಹಕ ಸರ್ ಪೀಟರ್ ಜಾನ್ ಗ್ರೆಗ್‌ಸನ್ ಸಹಿ ಮಾಡಿದರು.
ಮಣಿಪಾಲ ವಿ.ವಿ. ಸಂಶೋಧನ ನಿರ್ದೇಶಕ (ತಾಂತ್ರಿಕ) ಡಾ| ಸತೀಶ್ ಶೆಣೈ, ರಕ್ಷಣೆ ಮತ್ತು ಭದ್ರತಾ ನಿರ್ದೇಶಕ ಡಾ| ಸೈಮನ್ ಹಾರ್ವರ್ಡ್, ಕ್ರಾನ್‌ಫೀಲ್ಡ್ ವಿ.ವಿ. ಸಿಮುಲೇಶನ್ ಆ್ಯಂಡ್ ಆನಲಿಟಿಕ್ಸ್ ಕೇಂದ್ರದ ಹಿರಿಯ ಉಪನ್ಯಾಸಕ ಡಾ| ವೆಂಕಟ ಶಾಸಿŒ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದ್ವಿಪದವಿ ಕಾರ್ಯಕ್ರಮ, ಸಂಶೋಧ ಕರ, ಬೋಧಕರ ವಿನಿಮಯ, ಸಂಶೋಧನ ಯೋಜನೆಗಳು, ಜಂಟಿ ಕಾರ್ಯಾಗಾರಗಳು ಒಪ್ಪಂದ ಪತ್ರ ದಲ್ಲಿ ಅಡಕವಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.