ಡಾಮರು ಕಾಣದ ಪಳ್ಳಿ- ಪದವು ಸಂಪರ್ಕ ರಸ್ತೆ
Team Udayavani, Jul 3, 2019, 5:27 AM IST
ಪಳ್ಳಿ: ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಪಳ್ಳಿ-ಪದವು ರಸ್ತೆ ಡಾಮರು ಕಾಣದೆ ಕೆಸರು ಗದ್ದೆಯಂತಾಗಿದೆ.
ಬೇಸಗೆಯಲ್ಲಿ ಈ ರಸ್ತೆಯಲ್ಲಿ ಧೂಳಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ಕೆಸರಿನಿಂದ ಕೂಡಿದ್ದು, ಸಂಚಾರ ಕಷ್ಟಸಾಧ್ಯವಾಗಿದೆ. ಪಳ್ಳಿ ಶಾಲೆ ಬಳಿಯಿಂದ ಪದವು ಸಂಪರ್ಕಿಸುವ 3 ಕಿ.ಮೀ. ರಸ್ತೆಯಲ್ಲಿ ಒಂದೂವರೆ ಕೀ.ಮೀ. ರಸ್ತೆಗೆ ಡಾಮರು ಆಗಿದೆ. ಆದರೆ ಉಳಿದ ಭಾಗ ಆಗಿಲ್ಲ. ಈ ರಸ್ತೆ ಮೂಲಕ ಮಂಚಕಲ್, ಸೂಡ, ಜಂತ್ರ ಪಿಲರ್ಕಾನ, ಬೆಳ್ಮಣ್ ಸಂಪರ್ಕಿಸಬಹುದಾಗಿದೆ. ಪದವು ಪರಿಸರದ ಶಾಲಾ ಮಕ್ಕಳು ಪಳ್ಳಿ ಶಾಲೆಗೆ ಬರಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ರಸ್ತೆಗೆ ಡಾಮರು ಹಾಕುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಈ ರಸ್ತೆಗೆ 25 ಲಕ್ಷ ರೂ. ಅನುದಾನವನ್ನು ಶಾಸಕರು ಮಂಜೂರುಗೊಳಿಸಿರುತ್ತಾರೆ. ಮಳೆಗಾಲ ಕಳೆದ ಬಳಿಕ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಸತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.