“ಚಿತ್ತ ಚಿತ್ತಾರ’, “ಬಹುರೂಪಿ ಪ್ರೀತಿ’ ಕೃತಿಗಳ ಅನಾವರಣ
Team Udayavani, Mar 29, 2018, 7:55 AM IST
ಉಡುಪಿ: ರಂಗಭೂಮಿ ಉಡುಪಿ, ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ಕಲಾವಿದ ಅರಸೀಕೆರೆ ಚಾಂದ್ ಬಾಷಾ ಅವರು ವಿರಚಿತ ಕವನ ಸಂಕಲನಗಳಾದ “ಚಿತ್ತ ಚಿತ್ತಾರ’ ಮತ್ತು “ಬಹುರೂಪಿ ಪ್ರೀತಿ’ ಕೃತಿಗಳ ಅನಾವರಣ ನಡೆಯಿತು.
ರಂಗಭೂಮಿಯ ಗೌರವಾಧ್ಯಕ್ಷ ಡಾ| ಎಚ್. ಶಾಂತಾರಾಮ್ ಅವರು ಕೃತಿಗಳ ಅನಾವರಣ ಮಾಡಿದರು. ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗನಟ- ನಿರ್ದೇಶಕ ಲಕ್ಷ್ಮೀನಾರಾಯಣ ಭಟ್ ಕೆ. ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.
ಕೃತಿಕಾರ ಅರಸೀಕೆರೆ ಚಾಂದ್ ಬಾಷಾ, ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ| ಸಂಧ್ಯಾ ನಂಬಿಯಾರ್ ಉಪಸ್ಥಿತರಿದ್ದರು.ಉಪಾಧ್ಯಕ್ಷ ನಂದಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಸ್ತಾವನೆಗೈದರು. ಮೇಟಿ ಮುದಿಯಪ್ಪ ಅವರು ಕೃತಿಕಾರರ ಪರಿಚಯ ಮಾಡಿದರು.
ವಿವೇಕಾನಂದ ಎಚ್. ವಿಶ್ವರಂಗಭೂಮಿ ಸಂದೇಶ ತಿಳಿಸಿದರು. ಪೂರ್ಣಿಮಾ ಸುರೇಶ್ ನಿರೂಪಿಸಿದರು.
ಅನುಭವ ಸಜೀವವಾಗಿರಲಿ
ಸಾಹಿತಿ ಡಾ| ರೇಖಾ ವಿ. ಬನ್ನಾಡಿ ಅವರು ಕೃತಿ ಪರಿಚಯಗೈದರು. ಸಾಮಾಜಿಕ ಜವಾಬ್ದಾರಿ, ಎಲ್ಲರೂ ಒಂದಾಗಿ ಬಾಳಬೇಕು ಎನ್ನುವ ಆಶಯ ಕೃತಿಕಾರ ಚಾಂದ್ ಬಾಷಾ ಅವರಿಗಿದೆ. ಕವಿಗಳಿಗೆ ಅನುಭವವು ಸಜೀವವಾಗಿರಬೇಕು. ಅದು ಕವಿತೆಗೆ ಶಕ್ತಿ ತುಂಬುತ್ತದೆ. ಸಮಾಜವನ್ನು ಪ್ರೀತಿಸುವ ಆಶಯವೂ ಕವಿಗಿರಬೇಕು ಎಂದು ಹೇಳಿದ ಅವರು, ಕವಿತೆ ಬರೆ ಯುವವರು ಹೆಚ್ಚಾಗುತ್ತಿದ್ದರೂ, ಕವಿತೆ ಓದುವವರು ಇಂದು ಕಡಿಮೆ ಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.