ಉಪ್ಪಿನಕುದ್ರು: ಮಳೆಗಾಲದಲ್ಲೇ ಕರಟಿ ಹೋದ ನೇಜಿ
ಮಳೆ ಕೊರತೆಯಿಂದ ಉಪ್ಪು ನೀರಿನ ಸಮಸ್ಯೆ ; ಗದ್ದೆ ಬದಿಯ ದಂಡೆ ಏರಿಸಲು ರೈತರ ಮನವಿ
Team Udayavani, Jul 22, 2019, 5:18 AM IST
ಉಪ್ಪಿನಕುದ್ರುವಿನ ನಾಗಿಮನೆ ಸಮೀಪ ಕರಟಿ ಹೋದ ನೇಜಿ.
ವಿಶೇಷ ವರದಿ –ಕುಂದಾಪುರ: ಮುಂಗಾರು ಈಗಷ್ಟೇ ಬಿರುಸು ಪಡೆದುಕೊಂಡಿದ್ದರೂ, ಸರಿಯಾದ ಸಮಯದಲ್ಲಿ ಉತ್ತಮ ಮಳೆ ಬಾರದ ಕಾರಣ ರೈತರು ಈಗಷ್ಟೇ ನೆಟ್ಟ ನೇಜಿ ಉಪ್ಪು ನೀರಿನ ಹಾವಳಿಯಿಂದಾಗಿ ಮಳೆಗಾಲದಲ್ಲಿಯೇ ಕರಟಿ ಹೋದ ಘಟನೆ ಉಪ್ಪಿನಕುದ್ರು ಭಾಗದಲ್ಲಿ ನಡೆದಿದೆ.
ಹಿಂಗಾರು ಅಥವಾ ವೈಶಾಖದಲ್ಲಿ ನೀರಿನ ಸಮಸ್ಯೆಯಿಂದಾಗಿ ಅಥವಾ ಉಪ್ಪು ನೀರಿನ ಪ್ರಭಾವದಿಂದಾಗಿ ನೆಟ್ಟ ನೇಜಿ ಕರಟಿ ಹೋಗುವುದು ಸಾಮಾನ್ಯ. ಆದರೆ ಈ ಬಾರಿ ತಲ್ಲೂರು ಗ್ರಾಮದ ಉಪ್ಪಿನಕುದ್ರು ಭಾಗದ ಗದ್ದೆಗಳಲ್ಲಿ ಮುಂಗಾರಿನಲ್ಲೇ ನೇಜಿ ಕರಟಿ ಹೋಗಿದೆ.
ಕಾರಣವೇನು?
ಮಳೆಗಾಲ ತಡವಾಗಿ ಆರಂಭ ವಾಗಿದ್ದು, ಈಗ ತಾನೇ ಮುಂಗಾರು ಸ್ವಲ್ಪ ಮಟ್ಟಿಗೆ ಬಿರುಸು ಪಡೆದಿದೆ. ಆದರೆ ಇದಕ್ಕೂ ಮೊದಲೇ ಈ ಭಾಗದಲ್ಲಿ ನೇಜಿ ನೇಡುವ ಕಾರ್ಯ ಮಾಡಿರುವುದರಿಂದ, ಅದಕ್ಕೆ ಉಪ್ಪು ನೀರು ಪ್ರವೇಶಿಸಿ ನೇಜಿ ಕರಟಿದೆ. ಇದಕ್ಕೆ ಪರಿಹಾರವೆಂದರೆ ಗದ್ದೆ ಬದಿಯ ದಂಡೆಯನ್ನು ಏರಿಸಿದರೆ ಅಮಾವಾಸ್ಯೆ – ಹುಣ್ಣಿಮೆ ಸಮಯದಲ್ಲಿ ಉಬ್ಬರವಿಳಿತ ಉಂಟಾ ದಾಗ ಗದ್ದೆಗಳಿಗೆ ಉಪ್ಪು ನೀರು ನುಗ್ಗುವುದು ಕಡಿಮೆಯಾಗಬಹುದು.
ಉಪ್ಪಿನಕುದ್ರು ಸಮೀಪದ ನಾಗಿಮನೆ ಸಮೀಪದ ಸುಮಾರು 20 ರೈತ ಕುಟುಂಬದ ಹತ್ತಾರು ಎಕರೆ ಗದ್ದೆಗಳಲ್ಲಿ ಬೆಳೆದ ನೇಜಿ, ಬೇಡರಕೊಟ್ಟಿಗೆ ಸಮೀಪದ ಗದ್ದೆಗಳಿಗೂ ಉಪ್ಪು ನೀರಿನ ಹಾವಳಿಯಿಂದ ಹಾನಿಯಾಗಿದೆ.
ಹಿಂಗಾರಿನಲ್ಲೂ ನಷ್ಟ
ಕಳೆದ ಬಾರಿ ಹಿಂಗಾರು ಹಂಗಾಮಿನಲ್ಲೂ ಉಪ್ಪಿನಕುದ್ರು ಭಾಗದ ರೈತರು ಉಪ್ಪು ನೀರಿನ ಸಮಸ್ಯೆಯಿಂದಾಗಿ ಕಟಾವಿನ ವೇಳೆಯಲ್ಲಿ ಕರಟಿ ಹೋಗಿದ್ದರಿಂದ ಏನೂ ಫಸಲು ಸಿಗದೇ ನಷ್ಟ ಅನುಭವಿಸಿದ್ದರು.
ಕಡಲ ತೀರದ ಅದರಲ್ಲೂ ಕುಂದಾಪುರ ತಾಲೂಕಿನ ಉಪ್ಪಿನಕುದ್ರು, ಹೆಮ್ಮಾಡಿ, ಕಟ್ಟು, ಹೊಸಾಡು ಭಾಗದಲ್ಲಿ ಉಪ್ಪು ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಭತ್ತದ ಇಳುವರಿ ಹಾಗೂ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಈ ಪ್ರದೇಶಗಳಲ್ಲಿ ಉಪ್ಪು ನೀರಿನ ಸಮಸ್ಯೆ ಎನ್ನುವುದು ಭತ್ತದ ಕೃಷಿಗೆ ಅಂಟಿದ ಶಾಪವಾಗಿದೆ. ಇದರಿಂದ ಭತ್ತದ ಬೆಳೆಯನ್ನೇ ನಂಬಿಕೊಂಡಿರುವ ಸಾವಿರಾರು ರೈತ ಕುಟುಂಬಗಳು ಕಂಗಾಲಾಗಿವೆ.
ಹೊಸ ತಳಿಯ ಸಂಶೋಧನೆ
ಕರಾವಳಿ ಭಾಗದ ಗದ್ದೆಗಳಲ್ಲಿ ಉಪ್ಪು ನೀರಿನಲ್ಲಿ ಬೆಳೆಯಬಹುದಾದ ಭತ್ತದ ಹೊಸ ತಳಿಯ ಕುರಿತಂತೆ ಕೃಷಿ ಇಲಾಖೆ ಹಾಗೂ ಚೆನ್ನೈಯ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಸಹಯೋಗದಲ್ಲಿ ಸಂಶೋಧನೆ ಮಾಡಲಾಗುತ್ತಿದೆ. ಸುಧಾರಿತ ಭತ್ತದ ತಳಿ ಅಭಿವೃದ್ಧಿಗೆ 3 ವರ್ಷದ ಯೋಜನೆ ರೂಪಿಸಲಾಗಿದೆ. ಅದು ಆದಷ್ಟು ಶೀಘ್ರದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ಕರಾವಳಿ ಜಿಲ್ಲೆಗಳಲ್ಲಿರು ಉಪ್ಪು ನೀರು ಬಾಧಿತ ಗದ್ದೆಗಳಲ್ಲಿ ಬೇಸಾಯ ಮಾಡುವ ರೈತರಿಗೆ ಪ್ರಯೋಜನವಾಗಲಿದೆ.
ಪರ್ಯಾಯ ತಳಿಗೆ ಪ್ರಯತ್ನ
ಉಪ್ಪು ನೀರಿನಲ್ಲಿಯೂ ಕೂಡ ಬೆಳೆಯುವಂತಹ ಭತ್ತದ ತಳಿಯನ್ನು ಈಗ ಪ್ರಾಯೋಗಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಭಾಗದಲ್ಲಿ ಬೆಳೆಸಲಾಗಿದೆ. ಅಲ್ಲಿ ಯಶಸ್ವಿಯಾದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೂ ಕೂಡ ಬೆಳೆಯಲಾಗುವುದು. ಹೊಳೆ ದಂಡೆ ಏರಿಸುವ ಕುರಿತಂತೆ ರೈತರು ಇಲಾಖೆಗೆ ಮನವಿ ಸಲ್ಲಿಸಿದಲ್ಲಿ ಅದನ್ನು ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಚಂದ್ರಶೇಖರ್,ಉಪ ನಿರ್ದೇಶಕರು,ಕೃಷಿ ಇಲಾಖೆ ಉಡುಪಿ
ಹೊಳೆ ದಂಡೆ ಏರಿಸಲಿ
ಪ್ರತಿ ವರ್ಷ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟು ಹೇಳಿದರೂ ನಮ್ಮ ಮನವಿಗೆ ಸ್ಪಂದಿಸಲೇ ಇಲ್ಲ. ಗದ್ದೆ ಬದಿಯ ಹೊಳೆ ದಂಡೆಗಳನ್ನು ಏರಿಸಿದರೆ ಮಾತ್ರ ಪ್ರಯೋಜನವಾಗಲಿದೆ.
-ಗುಲಾಬಿ ನಾಗಿಮನೆ,ಉಪ್ಪಿನಕುದ್ರು,ರೈತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Viksit Bharat ‘ಯಂಗ್ ಲೀಡರ್ ಡೈಲಾಗ್’:ಉಡುಪಿಯ ಮನು ಶೆಟ್ಟಿ ಆಯ್ಕೆ
ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.