ಅವರು ಕಾರಲ್ಲಿ ಬಂದರೆ, ಇವರು ಎತ್ತಿನಗಾಡಿ ಏರಿದರು!
Team Udayavani, Apr 5, 2018, 7:15 AM IST
ಬ್ರಹ್ಮಾವರ: ಗ್ರಾಮ ಪಂಚಾಯತ್, ತಾ.ಪಂ., ಜಿ.ಪಂ. ಸದಸ್ಯರಾಗಿ, ಪಕ್ಷಗಳ ವಿವಿಧ ಹುದ್ದೆಗಳನ್ನು ಅಲಂಕರಿಸಿ ಶಾಸಕ ರಾಗುವುದು ಸಾಮಾನ್ಯ. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ನೇರವಾಗಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಉಪ್ಪೂರು ಜಯಪ್ರಕಾಶ ಶೆಟ್ಟಿ ಅವರಿಗೆ ಸಲ್ಲುತ್ತದೆ. 32ನೇ ವಯಸ್ಸಿನಲ್ಲಿ ಶಾಸನ ಸಭೆಗೆ ಆಯ್ಕೆ ಯಾಗಿದ್ದರು ಎನ್ನುವುದು ಇನ್ನೊಂದು ವಿಶೇಷ. ಜಯಪ್ರಕಾಶ ಶೆಟ್ಟಿ ಅವರು 1967ರಿಂದ 71ರ ತನಕ ಬ್ರಹ್ಮಾವರದ ಶಾಸಕರಾಗಿದ್ದರು. ವೀರೇಂದ್ರ ಪಾಟೀಲ್ ಆಗ ಮುಖ್ಯಮಂತ್ರಿಯಾಗಿದ್ದರು.
ಜಯಪ್ರಕಾಶ ಶೆಟ್ಟಿ ಅವರ ಅಂದಿನ ದಿನಗಳನ್ನು ಸಹೋದರಿ ಸಬಿತಾ ಆರ್. ಹೆಗ್ಡೆ ಹೀಗೆ ನೆನಪಿಸಿಕೊಂಡಿದ್ದಾರೆ: ಜಯ ಪ್ರಕಾಶ ಅವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡು ವಾಗಲೇ ವಿಭಿನ್ನವಾಗಿ ಗುರುತಿಸಿಕೊಂಡ ವರು. ಶ್ರೀಮಂತರೆಲ್ಲ ಕಾರಿನಲ್ಲಿ ಬರು ತ್ತಿದ್ದಾಗ ಇವರು ಎತ್ತಿನಗಾಡಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಮಳೆಗಾಲ ದಲ್ಲಿ ಓಲೆ ಕೊಡೆಯೊಂದಿಗೆ ಕಾಲೇಜಿಗೆ ತೆರಳಿ ಎಲ್ಲರ ಗಮನ ಸೆಳೆಯುತ್ತಿದ್ದರು. ಪ್ರತಿ ವಿಚಾರದಲ್ಲೂ ಧೈರ್ಯದಿಂದ ವಿಭಿನ್ನ ವಾಗಿ ಮುನ್ನಡೆಯುವ ಗುಣ ಹೊಂದಿದ್ದ ಅವರಲ್ಲಿ ಸಣ್ಣಪುಟ್ಟ ಕೀಟಲೆಗಳಿಗೇನೂ ಕಡಿಮೆ ಇರಲಿಲ್ಲ. ಪರಿಣಾಮ ದ್ವಿತೀಯ ವರ್ಷದಲ್ಲೇ ಟಿ.ಸಿ. ದೊರೆಯಿತು! ಮಂಗಳೂರು ವಿ.ವಿ. ಕಾಲೇಜಿನಲ್ಲಿ ಪದವಿ ಪೂರೈಸಿದರು. ಬಳಿಕ ಉಡುಪಿ ಯಲ್ಲಿ ಎಲ್‌ಎಲ್‌ಬಿ ಮುಗಿಸಿ ವೃತ್ತಿಯಲ್ಲಿ ತೊಡಗಿದರು.
ಹಠಾತ್ ಶಾಸಕ ಅಭ್ಯರ್ಥಿ
ಅದುವರೆಗೆ ರಾಜಕೀಯ ಕಡೆ ಮುಖ ಮಾಡಿರದ ಶೆಟ್ಟಿ ಅವರು 1967ರಲ್ಲಿ ವಿಧಾನ ಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತರು. ಕಾಲೇಜು ದಿನಗಳಲ್ಲಿ ಅವರ ಚಟುವಟಿಕೆಗಳನ್ನು ಗಮನಿಸಿದ್ದ ಯುವ ಜನತೆ ಹುಚ್ಚೆದ್ದರು. ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ನ ಎಸ್.ಡಿ. ಪಿಂಟೊ ಅವರನ್ನು ಮಣಿಸಿದರು. ಅದೂ ರಾಜ್ಯದ 2ನೇ ಗರಿಷ್ಠ ಅಂತರದಲ್ಲಿ (12,500ಕ್ಕೂ ಮಿಕ್ಕಿದ ಮತ) ವಿಜಯಿಯಾದರು.
ಗೆದ್ದ ಮೇಲೆ ಉತ್ತಮ ಸೇವೆ ನೀಡಿದ್ದರು. ಬಳಿಕ ಸ್ವತಂತ್ರ ಪಕ್ಷವನ್ನು ಸೇರಿದರು. ಆದರೆ ಹೊಲಸು ರಾಜಕೀಯ ವ್ಯವಸ್ಥೆಯಿಂದ ಬೇಸತ್ತು ಮುಂದೆ ಚುನಾವಣೆಗಳಿಂದ ಹಿಂದೆ ಸರಿದರು ಎಂದು ಸಹೋದರಿ ಸಬಿತಾ ಆರ್. ಹೆಗ್ಡೆ ಸ್ಮರಿಸುತ್ತಾರೆ.
ಕೂಡು ಕುಟುಂಬದ ಅಂದಿನ ಕಾಲದಲ್ಲಿ ಶೆಟ್ಟಿ ಅವರು ರಾಜಕೀಯ ಹಾಗೂ ಮನೆ ಯನ್ನು ಬೇರೆ ಬೇರೆಯಾಗಿ ಪರಿಗಣಿಸಿ ಮನೆಯ ಸದಸ್ಯರೊಂದಿಗೆ ಬೆರೆಯುತ್ತಿದ್ದರು ಎನ್ನುತ್ತಾರೆ ಸಬಿತಾ ಆರ್. ಹೆಗ್ಡೆ. ಜಯಪ್ರಕಾಶ ಶೆಟ್ಟಿ ಅವರು 2015ರಲ್ಲಿ ನಿಧನ ಹೊಂದಿದರು.
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.