ಉಪ್ಪುಂದ: ನಗ -ನಗದಿಗಾಗಿ ಮನೆಗೆ ನುಗ್ಗಿ ಜಾಲಾಡಿದರು
Team Udayavani, Mar 22, 2017, 12:03 PM IST
ಮರವಂತೆ (ಉಪ್ಪುಂದ): ಉಪ್ಪುಂದದ ಬಳಿ ರಾ.ಹೆದ್ದಾರಿ 66ರ ಸಮೀಪದಲ್ಲಿ ಇರುವ ಡಾ| ಕೆ.ಆರ್. ನಂಬಿಯಾರ್ ಅವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಗ -ನಗದಿಗಾಗಿ ಮನೆಯನ್ನು ಜಾಲಾಡಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಡಾ| ಕೆ.ಆರ್.ನಂಬಿಯಾರ್ ಮತ್ತು ಅವರ ಪತ್ನಿ ಲತಿಕಾ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದು , ವಾರದ ಹಿಂದೆ ಅವರು ಹುಟ್ಟೂರು ಕೇರಳಕ್ಕೆ ಹೋಗಿದ್ದು, ಅಲ್ಲಿಂದ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದರು. ಹೋಗುವಾಗ ಅವರು ಮನೆ ಕೆಲಸದವರಿಗೆ ತೋಟಗಳಿಗೆ ನೀರು ಬಿಡಲು ಹಾಗೂ ನಾಯಿಗೆ ಊಟ ಹಾಕಲು ಹೇಳಿ ಮನೆಯ ಹೊರಗಿನ ಅಡುಗೆ ಕೋಣೆಯೊಂದರ ಬೀಗ ನೀಡಿ ತೆರಳಿದ್ದರು. ಮಂಗಳವಾರ ಬೆಳಗ್ಗೆ ಕೆಲಸದಾಕೆ ಬಂದಾಗ ಹಿಂದುಗಡೆ ಬಾಗಿಲು ಮುರಿದಿರುವುದನ್ನು ಕಂಡು ಅನುಮಾನಗೊಂಡು ಈ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಬೈಂದೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಮನೆಯಲ್ಲಿ ಕಳವು ನಡೆದಿದೆ ಎಂದು ತಿಳಿದಾಗ ನಂಬಿಯಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಮೊಬೈಲ್ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಅವರ ಸಂಬಂಧಿಗಳಾದ ನಾವುಂದ ನಿವಾಸಿ ಕೆ.ವಿ. ನಂಬಿಯಾರ್ ಮತ್ತು ಕೆ.ಪಿ. ನಂಬಿಯಾರ್ ಅವರಿಗೆ ಮಾಹಿತಿ ನೀಡಲಾಯಿತು. ಹಾಗೂ ಅವರ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳು ಮನೆ ಒಳಗೆ ಹೋಗಿ ನೋಡಿದಾಗ ಮನೆಯ ಕೋಣೆಯ ಒಳಗಿರುವ ಕಪಾಟು, ಹಲವಾರು ಡ್ರವರ್‌ಗಳನ್ನು ಜಾಲಾಡಿರುವುದು ಕಂಡುಬಂದಿದೆ. ಹಾಗೂ ಕಪಾಟಿನ ಒಳಗಿರುವ ಬಟ್ಟೆಗಳನ್ನು ಹೊರಕೆಹಾಕಿ ಹಣ ಒಡವೆಗಳಿಗಾಗಿ ಹುಡುಕಾಟ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.