ಉತ್ಥಾನ ದ್ವಾದಶಿ, ತುಳಸೀ ಹಬ್ಬದ ಆಚರಣೆ

Team Udayavani, Nov 7, 2019, 5:13 AM IST

tulasi

ಪಡುಬಿದ್ರಿ: ಕಾರ್ತಿಕ ಮಾಸದ 12ನೇ ದಿನವೇ ಉತ್ತಾನದ್ವಾದಶಿ. ಯತಿಗಳಿಗೆ ಚಾತುರ್ಮಾಸ ವ್ರತ ಸಂಕಲ್ಪದ ಕೊನೆಯ ದಿನವೂ ಹೌದು. ಶ್ರೀ ಕೃಷ್ಣನ ನೆಲೆವೀಡು ಉಡುಪಿಯಲ್ಲಿ ಲಕ್ಷ ದೀಪೋತ್ಸವದ ಆರಂಭವೂ ಅಂದೇ ಆಗಲಿದೆ. ಇದು ಈ ಬಾರಿ ನ. 9ರ ದಿನ ವಿಶೇಷವಾಗಿ ಹಿಂದೂ ಧರ್ಮಶ್ರದ್ಧೆಯೊಂದಿಗೆ ಮನೆ ಮನೆಗಳಲ್ಲಿನ ತುಳಸೀ ವೃಂದಾವನದ ಸನ್ನಿಧಾನದಲ್ಲಿ ತುಳಸೀ ಹಬ್ಬದ ರೂಪದಲ್ಲಿ ಆಚರಿಸಲ್ಪಡುತ್ತದೆ.

“ಉತ್ಥಾನ’ ಎಂದರೆ ಏಳು ಅಥವಾ ಎಬ್ಬಿಸುವುದೆಂದರ್ಥ. ನರಕಾಸುರನ ವಧಾ ನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ ಮಲಗುವ ಭಗವಂತನನ್ನು ಉತ್ಥಾನ ದ್ವಾದಶೀ ದಿನ ದೇವತೆಗಳು ಬಂದು ಎಬ್ಬಿಸುತ್ತಾರೆ. ಆದ್ದರಿಂದ ತುಲಸೀ ಸನ್ನಿಧಾನದಲ್ಲಿ ಈ ದಿನದಿಂದು ವಿಶೇಷವಾಗಿ ಭಗವಂತನನ್ನು ಪೂಜಿಸಿ ಆರಾಧಿಸುತ್ತಾರೆ.

ತುಲಸಿಗ್‌ ಬಜಿಲ್‌ ಪಾಡುನಿ, ತುಲಸೀ ಪರ್ಬ ಎನ್ನುವ ರೀತಿಯಲ್ಲಿ ತುಳುವರು ಇದನ್ನು ಆಚರಿಸಿದರೆ, ತುಳಸೀ ಪೂಜೆ, ಸಂಕೀರ್ತನೆ, ಉತ್ಥಾನ ದ್ವಾದಶಿಗಳು ವೈದಿಕರ ಕ್ರಮವಾಗಿ ಇಂದು ರೂಢಿಯಲ್ಲಿವೆ.

ವೈಜ್ಞಾನಿಕವಾಗಿಯೂ ಅತೀ ಹೆಚ್ಚು ಆಮ್ಲಜನಕವನ್ನು ಹೊರಸೂಸುವ ತುಳಸೀ ಗಿಡವು ಔಷಧೀಯ ಗುಣವುಳ್ಳದ್ದಾಗಿದೆ. ಇದು ಮನೆಯ ಮುಂದಿದ್ದರೆ ಉತ್ತಮವೆಂಬ ಕಲ್ಪನೆಯೊಂದಿಗೆ ಪ್ರತೀ ಮನೆಯ ಮುಂದೆ ಪಶ್ಚಿಮಾಭಿಮುಖವಾಗಿ ತುಲಸೀ ಕಟ್ಟೆಯನ್ನು ನಿರ್ಮಿಸುತ್ತಾರೆ. ಉತ್ಥಾನ ದ್ವಾದಶೀ ದಿನ ಮನೆಯಂಗಳದ ತುಳಸೀ ಕಟ್ಟೆಗೆ ದೀಪವನ್ನು ಹಚ್ಚಿಟ್ಟು ಧಾತ್ರೀ(ನೆಲ್ಲಿ) ದೇವಿಯೊಂದಿಗೆ ತುಳಸಿಯ ಸನ್ನಿಧಾನದಲ್ಲಿ ಭಗವಂತನನ್ನು ಪೂಜಿಸುತ್ತಾರೆ.

ಬ್ರಾಹ್ಮಣೇತರರಿಗೆ ಭಕ್ತಿ ಶ್ರದ್ಧೆಗಳೇ ಮುಖ್ಯವಾಗಿ ತುಳಸಿ ಪರ್ಬದ ಆಚರಣೆಯಾದÃ,ೆ ಬ್ರಾಹ್ಮಣರು ಪೂಜಾ ನಂತರ ಅಂದು ಪ್ರಾತಃ ವಾದಿರಾಜಕೃತ ತುಳಸೀ ಸಂಕೀರ್ತನೆಯ ಹಾಡುಗಳನ್ನು ಹಾಡಿ ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸುತ್ತಾರೆ. ಸಂಜೆಯ ಗೋಧೂಳೀ ಲಗ್ನದಲ್ಲಿ ತುಳಸಿಯ ಸನ್ನಿಧಾನದಲ್ಲಿ ಭಗವಂತನಿಗೆ ಹಾಲೆರೆದು “ಕ್ಷೀರಾಬ್ದಿ’ಯನ್ನು ನೆರವೇರಿಸಿ ಭಗವಂತನ‌ನ್ನು ನಿದ್ದೆಯಿಂದ ಎಬ್ಬಿಸುವ ಕ್ರಮವನ್ನು ಗೈಯ್ಯಲಾಗುತ್ತದೆ.
ಇದರೊಂದಿಗೆ ಹಿಂದೂಗಳ ಹಬ್ಬಗಳ ಪರ್ವವು ಕೊನೆಗೊಳ್ಳುತ್ತದೆ. ಆಯನೋತ್ಸವ ಗಳೊಂದಿಗೆ ಜಾತ್ರೆಯ ಪರ್ವ ಈ ನಂತರದಲ್ಲಿ ಆರಂಭಗೊಳುÉತ್ತದೆ.

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.