Malpe; ಮಾ. 19-29: ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ, ಮನ್ಮಹಾರಥೋತ್ಸವ

ಮಲ್ಪೆ ಶ್ರೀ ವಡಭಾಂಡ ಬಲರಾಮ ದೇವಸ್ಥಾನ

Team Udayavani, Mar 16, 2024, 1:51 AM IST

Malpe; ಮಾ. 19-29: ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ, ಮನ್ಮಹಾರಥೋತ್ಸವ

ಮಲ್ಪೆ: ಇಲ್ಲಿನ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ಮನ್ಮಹಾರಥೋತ್ಸವ ಮೊದಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅನುಗ್ರಹ, ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಮಾ. 19ರಿಂದ 29ರ ವರೆಗೆ ನಡೆಯಲಿದೆ.

ಮಾ. 22: ದೇವರ ಪುನಃ ಪ್ರತಿಷ್ಠೆ
ಮಾ. 22ರಂದು ಬೆಳಗ್ಗೆ ಗೋಪೂಜೆ, ಪ್ರತ್ಯಕ್ಷ ಗೋದಾನ, ಪೀಠ ಪ್ರತಿಷ್ಠೆ ನಡೆದು 10.06ರ ವೃಷಭ ಲಗ್ನ ಸುಮುಹೂರ್ತದಲ್ಲಿ ಪರಿವಾರ ಸಹಿತ ದೇವರ ಬಿಂಬ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ನ್ಯಾಸಪೂಜೆ, ನಿತ್ಯ ನೈಮಿತ್ತಿಕ ಪೂಜಾ ವಿಧಿ ವಿಧಾನಗಳ ಪ್ರತಿಜ್ಞಾ ಸ್ವೀಕಾರ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇಗುಲದಲ್ಲಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಜರಗಲಿವೆ.

ಮಾ. 25:
ಅಷ್ಟಬಂಧ ಬ್ರಹ್ಮಕಲಶೋತ್ಸವ
ಮಾ. 25ರಂದು ಬೆಳಗ್ಗೆ 6.45ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮ ಕುಂಭಾಭಿಷೇಕ, ಪರಿಕಲಶಾಭಿಷೇಕ, ಮಹಾ ಮಂತ್ರಾಕ್ಷತೆ, ಅಗ್ನಿಜನನ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 4ರಿಂದ ನಿತ್ಯಬಲಿ, ಮಂಟಪದಲ್ಲಿ ಪೂಜೆ, ರಂಗಪೂಜೆ ಸೇವೆ ಜರಗಲಿದೆ.

ಮಾ. 27:
ಶ್ರೀ ಮನ್ಮಹಾರಥೋತ್ಸವ
ಮಾ. 27ರಂದು ಬೆಳಗ್ಗೆ 10.15 ರಿಂದ ಉತ್ಸವ ಬಲಿ, ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ರಥೋತ್ಸವ ಪ್ರಾರಂಭವಾಗಿ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಓಲಗ ಮಂಟಪ ಪೂಜೆ, ರಾತ್ರಿ ಭೂತ ಪೂಜೆಯು ಜರಗಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ
ಮಾ. 19ರಿಂದ 26ರ ವರೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿರುವರು ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

ಮಾ. 19ರಂದು ಹೊರೆಕಾಣಿಕೆ ಮೆರವಣಿಗೆ
ಮಾ. 19ರಂದು ಸಂಜೆ 4ರಿಂದ ಹಸುರು ಹೊರೆ ಕಾಣಿಕೆ ಮೆರವಣಿಗೆಯು ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ 101 ಚೆಂಡೆ, ವಿವಿಧ ವೇಷಭೂಷಣಗಳೊಂದಿಗೆ ವೈಭವದ ಶೋಭಾಯಾತ್ರೆಯಲ್ಲಿ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಸಾಗಿ ಬರಲಿದೆ. ಬೆಳಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ, ಸಂಜೀವಿನಿ ಮೃತ್ಯುಂಜಯ ಹೋಮ, ಸಂಜೆ ವಾಸ್ತು ಹೋಮ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿವೆ. ಮಾ. 20ರಿಂದ ಮಾ. 29ರ ವರೆಗೆ ಬೆಳಗ್ಗೆ ಮತ್ತು ಸಂಜೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಲಿವೆ.

ಟಾಪ್ ನ್ಯೂಸ್

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Mumbai-Pilot

Mumbai: ಬಾಯ್‌ಫ್ರೆಂಡ್‌ ಮಾಂಸಾಹಾರ ತಿನ್ನಬೇಡ ಎಂದಿದ್ದಕ್ಕೆ ಪೈಲಟ್ ಆತ್ಮಹ*ತ್ಯೆ!

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Brahmavar: ಲಾಕ್‌ಅಪ್‌ ಡೆತ್‌; ಕೇರಳ ಸಿಎಂಗೆ ದೂರು

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

Udupi: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Udupi: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

4

Karkala: ನಲ್ಲೂರು; ಮಹಿಳೆ ಆತ್ಮಹ*ತ್ಯೆ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Mumbai-Pilot

Mumbai: ಬಾಯ್‌ಫ್ರೆಂಡ್‌ ಮಾಂಸಾಹಾರ ತಿನ್ನಬೇಡ ಎಂದಿದ್ದಕ್ಕೆ ಪೈಲಟ್ ಆತ್ಮಹ*ತ್ಯೆ!

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

6

Brahmavar: ಲಾಕ್‌ಅಪ್‌ ಡೆತ್‌; ಕೇರಳ ಸಿಎಂಗೆ ದೂರು

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.