ವಂಡ್ಸೆ -ಅಡಿಕೆಕೊಡ್ಲು ಸಂಪರ್ಕ ಕಿರುಸೇತುವೆ ನಿರ್ಮಾಣ
Team Udayavani, Jul 23, 2017, 8:05 AM IST
ಕುಂದಾಪುರ: ವಂಡ್ಸೆ ಗ್ರಾ.ಪಂ. ವ್ಯಾಪ್ತಿಯ ವಂಡ್ಸೆಯಿಂದ ಅಡಿಕೆಕೊಡ್ಲು, ಸಂಭಾರ್ತಿ, ನೂಜಾಡಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯು ನಿರ್ಮಾಣವಾಗಿದ್ದು, ಇದರಿಮದ ಈ ಭಾಗದ ಜನರ ಬಹುದಿನದ ಕನಸು ನನಸಾಗಿದೆ.
ಈ ಭಾಗದಲ್ಲಿ ಸುಮಾರು ನೂರ ಐವತ್ತಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು ದಿನ ನಿತ್ಯದ ಸಂಚಾರಕ್ಕೆ ಈ ಮಾರ್ಗವನ್ನೇ ಅವಲಂಬಿಸಿದ್ದರು. ಆದರೆ ಅತಿ ಹತ್ತಿರದಲ್ಲೇ ಇರುವ ವಂಡ್ಸೆ ಪೇಟೆಯನ್ನು ಸಂಪರ್ಕಿಸಲು ಈ ತೊರೆಯನ್ನು ದಾಟಿ ಹೋಗಬೇಕಾಗಿರುವುದರಿಂದ ಮಳೆಗಾಲದಲ್ಲಿ ಈ ನಾರ್ಗದಲ್ಲಿ ಸಂಚರಿಸುವುದು ಬಹಳಷ್ಟು ಕಷ್ಟಕರವಾಗಿತ್ತು. ಈ ಸೇತುವೆಗೆ ಪೂರಕವಾಗಿ ಸಂಪರ್ಕ ರಸ್ತೆ ನಿರ್ಮಾಣವಾಗಿ 4-5 ವರ್ಷ ಕಳೆದರೂ ಸೇತುವೆ ಮಾತ್ರ ನಿರ್ಮಾಣ ಆಗಿರಲಿಲ್ಲ. ಇದರಿಂದಾಗಿ ಈ ಭಾಗದ ಜನರು ಅಡಿಕೆಕೊಡ್ಲುವಿಗೆ ನೂಜಾಡಿ ಮೂಲಕ ಸುಮಾರು ಐದು ಕಿ.ಮೀ ಸುತ್ತು ಬಳಿಸಿ ಸಾಗಬೇಕಾಗಿದ್ದರಿಂದ ಇಲ್ಲಿನ ಜನರಿಗೆ ಸೇತುವೆ ನಿರ್ಮಾಣ ತುರ್ತು ಆವಶ್ಯಕತೆಯಾಗಿತ್ತು.
ಕರಾವಳಿ ಪ್ರಾಧಿಕಾರ, ಗ್ರಾ.ಪಂ. ನಿಧಿ ಬಳಕೆ
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರ ಶಿಫಾರಸಿನಂತೆ ಕರಾವಳಿ ಪ್ರಾಧಿಕಾರದಿಂದ ರೂ.5 ಲಕ್ಷ ರೂ.ಹಾಗೂ ಬಾಕಿ ಉಳಿದ ರಸ್ತೆ ಕಾಮಗಾರಿಗೆ ವಂಡ್ಸೆ ಗ್ರಾ.ಪಂ ಅನುದಾನವನ್ನು ಬಳಸಿಕೊಂಡು ಈ ಕಿರು ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ. ಕೂಡು ರಸ್ತೆ ಹಾಗೂ ಬದಿಕಟ್ಟುವ ಕೆಲಸ ಬಾಕಿಇದ್ದು ಶೀಘ್ರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.
ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ ಮುಖ್ಯವಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ.
ಅಪಾಯಕಾರಿ ತೊರೆಯಿಂದ ಮುಕ್ತಿ
ತೊರೆಯು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಸ್ಥಳಿಯ ಜನರಿಗೆ ತೊರೆ ದಾಟುವುದು ಕಷ್ಟಕರವಾಗಿತ್ತು. ಪರಿಸರದ ಗ್ರಾಮಸ್ಥರು ಕಿರು ಸೇತುವೆ ಕಲ್ಪಿಸಿಕೊಡುವಂತೆ ಬೇಡಿಕೆ ಇಡುತ್ತಲೇ ಬಂದಿದ್ದರು ಹಾಗೂ ಗ್ರಾಮಸಭೆಯಲ್ಲಿ ಮನವಿ ಮಾಡಿದ್ದರೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಸೇತುವೆ ರಚನೆಗೆ ಸಮಯ ಕೂಡಿ ಬಂದಿರಲಿಲ್ಲ. ನಂತರ ವಂಡ್ಸೆ ಗ್ರಾ.ಪಂ. ಅಧ್ಯಕ್ಷರು ಸ್ವತಃ ಮುತುವರ್ಜಿವಹಿಸಿಕೊಂಡು ಸೇತುವೆ ನಿರ್ಮಾಣ ಮಾಡುವಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿದ್ದರು. ಇದರಿಂದಾಗಿ ವಂಡ್ಸೆ ಭಾಗದ ಅಡಿಕೆಕೊಡ್ಲು ನೂಜಾಡಿಯಿಂದ ಹೋಗುವವರು ಈ ಮಾರ್ಗವಾಗಿ ಹೋಗಲು ಅನಕೂಲಕರವಾಗಿದೆ. ಸುಮಾರು ನಾಲ್ಕೈದು ಕಿ.ಮೀ. ಸುತ್ತಿ ಬಳಸುವುದು ತಪ್ಪಿದಂತಾಗಿದೆ.
ಸಣ್ಣ ತೊರೆಗೆ ಕಿರು ಸೇತುವೆಯನ್ನು ನಿರ್ಮಿಸುವಂತೆ ಗ್ರಾಮಸ್ಥರ ಬೇಡಿಕೆಯಂತೆ ಗ್ರಾ.ಪಂ. ನಿರ್ಣಯವನ್ನು ಕೈಗೊಂಡು ಶಾಸಕರ ಶಿಫಾರಸಿನೊಂದಿಗೆ ಕರಾವಳಿ ಪ್ರಾಧಿಕಾರದ ಅನುದಾನವನ್ನು ಬಳಸಿಕೊಂಡು ಕಿರು ಸೇತುವೆಯನ್ನು ನಿರ್ಮಿಸಲಾಗಿದೆ. ಗ್ರಾ.ಪಂ. ಹಾಗೂ ಕರಾವಳಿ ಪ್ರಾಧಿಕಾರದ ಅನುದಾನವನ್ನು ಬಳಿಸಿಕೊಂಡು ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣವಾಗಲಿದೆ.ಇನ್ನು ಕೂಡು ರಸ್ತೆ ಹಾಗೂ ಸೈಡ್ ವಾಲ್‌ಗಳ ನಿರ್ಮಾಣದ ಕಾಮಗಾರಿ ನಡೆಯಲಿದೆ. ಅತಿ ಶೀಘ್ರದಲ್ಲಿ ಜನಸಂಚಾರಕ್ಕೆ ಈ ಮಾರ್ಗ ಮುಕ್ತವಾಗಲಿದೆ.
-ಉದಯಕುಮಾರ್ ಶೆಟ್ಟಿ,
ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.