Varahi 1,500 ಮೆ.ವ್ಯಾ. ಹೆಚ್ಚುವರಿ ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ. ಜಾರ್ಜ್
Team Udayavani, Feb 6, 2024, 11:57 PM IST
ಮಣಿಪಾಲ: ವಾರಾಹಿಯಲ್ಲಿಹೆಚ್ಚುವರಿ 1,500 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಯೋಜಿಸಲಾ ಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ 450 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. 1,500 ಮೆ.ವ್ಯಾ. ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾದನೆಗೆ ಯೋಜಿಸಿದ್ದು, ಇದಕ್ಕಾಗಿ ವಾರ್ಷಿಕ 0.3 ಟಿಎಂಸಿ ನೀರು ಬಳಸುತ್ತೇವೆ. ಮಳೆಗಾಲದಲ್ಲಿ ಒಂದು ಬಾರಿ ಮಾತ್ರ ನೀರು ಬಳಸಲಿದ್ದು, ಚೆಕ್‌ಡ್ಯಾಮ್ ನಿರ್ಮಿಸಿ, ಅದಕ್ಕೆ ಫ್ಯೂಸ್‌ಗೆàಟ್ ಕೂಡ ರಚಿಸಲಿದ್ದೇವೆ. ಹೆಚ್ಚುವರಿ ನೀರು ಬಳಸದ ಕಾರಣ ಕೃಷಿಗೂ ಸಮಸ್ಯೆಯಾಗದು. ಈ ರೀತಿ ಶರಾವತಿ, ಬಳ್ಳಾರಿ, ಬೆಳಗಾವಿಯಲ್ಲೂ ಮಾಡುತ್ತಿದ್ದೇವೆ ಎಂದರು.
ಯುಪಿಸಿಎಲ್ ವಿಸ್ತರಣೆಯ ಪ್ರಸ್ತಾವ ಇಲ್ಲ. ಇದೀಗ ಯುಪಿಸಿಎಲ್‌ನಿಂದ 1,000 ಮೆ.ವ್ಯಾ. ವಿದ್ಯುತ್ ತೆಗೆದುಕೊಳ್ಳುತ್ತಿದ್ದು, ನಮ್ಮಲ್ಲಿ ಕೊರತೆ ಯಾದಾಗ ತತ್‌ಕ್ಷಣವೇ ವಿದ್ಯುತ್ ಪೂರೈಸಲು ವ್ಯವಸ್ಥೆ ಇದೆ ಎಂದರು.
ಸೋಲಾರ್ ಮತ್ತು ಪವನ ವಿದ್ಯುತ್ ಸ್ಥಾವರಕ್ಕೂ ಆದ್ಯತೆ ನೀಡುತ್ತಿದ್ದೇವೆ. ಬಳಕೆದಾರರ ದಟ್ಟಣೆ ಹೆಚ್ಚಿರುವ ಹೊತ್ತಿನಲ್ಲಿ ಉಂಟಾಗುವ ವಿದ್ಯುತ್ ಕೊರತೆಗೆ ಸೋಲಾರ್, ಪವನ ವಿದ್ಯುತ್ ಬಳಸುತ್ತಿದ್ದೇವೆ. ಥರ್ಮಲ್ ಪ್ಲಾಂಟ್ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ. ಜತೆಗೆ ಉಡುಪಿ ಜಿಲ್ಲೆಯಲ್ಲಿ ಚಾರ್ಜಿಂಗ್ ಸ್ಟೇಷನ್ ಹೆಚ್ಚಳ ಮಾಡಲು ಶೀಘ್ರವೇ ಮರು ಟೆಂಡರ್ ನಡೆಯಲಿದೆ ಎಂದರು.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಬ್ರಹ್ಮಾವರ ಉಪ ಕೇಂದ್ರದ ನಿರ್ವಹಣೆಗೆ ವಾರ್ಷಿಕ 1 ಕೋ.ರೂ. ಬರುತ್ತಿದ್ದು ಅದು ಸಾಲುತ್ತಿಲ್ಲ. ಹೀಗಾಗಿ ವಾರ್ಷಿಕ ಕನಿಷ್ಠ 6 ಕೋಟಿ ರೂ.ಒದಗಿಸಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಸಚಿವರನ್ನು ಕೋರಿದರು.
ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ, ಮೆಸ್ಕಾಂ ಎಂಡಿ ಡಿ. ಪದ್ಮಾವತಿ ಪತ್ರಿ ಕಾಗೋಷ್ಠಿಯಲ್ಲಿದ್ದರು.
ಹಸುರು ಹೈಡ್ರೋಜನ್ ನೀತಿ
ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ ಹೆಚ್ಚು ಪ್ರಚಲಿತವಾಗು ತ್ತಿದ್ದು, ಇದಕ್ಕಾಗಿ ಪ್ರತ್ಯೇಕ ನೀತಿ ಘೋಷಿಸಲಿದ್ದೇವೆ. 30ರಿಂದ 40 ಸಾವಿರ ಕೋಟಿ ರೂ. ಖಾಸಗಿ ವಲಯದ ಹೂಡಿಕೆಯಲ್ಲಿ ಮಂಗಳೂರಿನಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಗ್ರೀನ್ ಹೈಡ್ರೋಜನ್ ಅನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಕೊಂಡೊಯ್ಯುವುದೂ ಸುಲಭ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.