ನನಸಾಗುವ ಹಂತದಲ್ಲಿ ವಾರಾಹಿ ಎಡದಂಡೆ ಕಾಲುವೆ ವಿಸ್ತರಣೆ ಯೋಜನೆ
Team Udayavani, Sep 9, 2018, 6:00 AM IST
ಕೋಟ: ಇಲ್ಲಿನ ಹೋಬಳಿಯ ಜನರಿಗೆ ಕೃಷಿಯೇ ಮೂಲಕಸುಬು. ಆದರೆ ಬೇಸಗೆಯಲ್ಲಿ ಎದುರಾಗುವ ನೀರಿನ ಅಭಾವ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿದೆ. ಇದೀಗ ಬಹು ನಿರೀಕ್ಷೆಯ ವಾರಾಹಿ ಎಡದಂಡೆ ಏತ ನೀರಾವರಿ ಕಾಲುವೆ ವಿಸ್ತರಣೆ ಕಾಮಗಾರಿಯ ಹಂತಕ್ಕೆ ತಲುಪಿದ್ದು ಎಲ್ಲಾ ಅಂದುಕೊಂಡಂತೆಯೇ ನಡೆದರೆ 2 ವರ್ಷದಲ್ಲಿ ಕಾಮಗಾರಿ ನಡೆದು ನೀರಿನ ಬವಣೆ ತಪ್ಪಲಿದೆ.
ಏನಿದು ಯೋಜನೆ ?
ವಾರಾಹಿ ಕಾಮಗಾರಿ ಆರಂಭದ ದಿನಗಳಿಂದ ಶಿರಿಯಾರ, ಯಡ್ತಾಡಿ, ಆವರ್ಸೆ, ಬಿಲ್ಲಾಡಿ, ಕಾವಡಿ, ಅಚ್ಲಾಡಿ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ವಾರಾಹಿ ನೀರು ಹರಿಯಲಿದೆ ಎನ್ನುವ ಆಸೆಯಲ್ಲಿದ್ದರು. ಆದರೆ 35ವರ್ಷ ಕಳೆದರೂ ಎಡದಂಡೆ ಯೋಜನೆಯ ಮೂಲಕ ಈ ಭಾಗದ ರೈತರಿಗೆ ನೀರು ದೊರೆಯಲಿಲ್ಲ. ಇದೀಗ ಹೈಕಾಡಿ ಸಮೀಪ ಕಾಸಾಡಿಯಿಂದ ಶಿರೂರು ಮೂಕೈì ತನಕ ನೇರ ಕಾಲುವೆ ಹಾಗೂ ಶಿರೂರು ಮೂಕೈìಯಿಂದ ಎರಡು ಕಾಲುವೆಗಳನ್ನು ನಿರ್ಮಿಸಿ ರೈತರ ಜಮೀನಿಗೆ ನೀರುಣಿಸುವ ಮತ್ತೂಂದು ಯೋಜನೆ ರೂಪಿಸಲಾಗಿದ್ದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ಜ. 1ರಂದು ಬ್ರಹ್ಮಾವರಕ್ಕೆ ಆಗಮಿಸಿದ ಸಂದರ್ಭ ಕಾಮಗಾರಿಗೆ ಚಾಲನೆ ನೀಡಿದ್ದರು. ಈಗ 276.66 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಮುಗಿದು ಅಂತಿಮ ಹಂತದ ಸರ್ವೆಗೆ ತಯಾರಿ ನಡೆದಿದೆ. ನವೆಂಬರ್‌ನಲ್ಲಿ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಪೂರ್ಣಗೊಳ್ಳಲು 18 ತಿಂಗಳ ಗಡುವು ನೀಡಲಾಗಿದೆ.
ಅಂತರ್ಜಲ ವೃದ್ಧಿಗೆ ಸಹಕಾರಿ
ಕಾಲುವೆ ಮೂಲಕ ಹರಿದು ಬರುವ ನೀರು ಕೃಷಿಭೂಮಿ, ನದಿ, ಹಳ್ಳಗಳನ್ನು ಸೇರುವುದರಿಂದ ಭೂಮಿಯಲ್ಲಿ ನೀರಿನ ಒರತೆ ಹೆಚ್ಚಲಿದೆ. ನದಿ, ಹಳ್ಳಗಳಿಗೆ ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿದಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಕುಡಿಯುವ ನೀರಿನ ಸಮಸ್ಯೆಯೂ ಪರಿಹಾರವಾಗಲಿದೆ. 11ತಿಂಗಳು ಕಾಲುವೆ ಮೂಲಕ ನೀರು ಹರಿಯಲಿದ್ದು, ಹತ್ತಿರದ ಹೊಳೆ, ತೊರೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ರೈತರು ಸಹಕಾರ ನೀಡಿದರೆ ಕಾರ್ಯ ಸುಲಭ
ಶೀಘ್ರದಲ್ಲಿ ಕಾಲುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಯೋಜನೆಯ ಯಶಸ್ವಿಗಾಗಿ ರೈತರ ಸಹಕಾರ ಅಗತ್ಯವಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಕೋಟ್ಯಂರ ರೂ. ಮೀಸಲಿರಿಸಿದ್ದು ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಸಿಗಲಿದೆ ಹಾಗೂ ಸಾವಿರಾರು ಎಕರೆ ಪ್ರದೇಶಕ್ಕೆ ನೀರಿನಾಸರೆ ದೊರೆಯುವುದರಿಂದ ಭೂಮಿಯ ಬೆಲೆ ಹೆಚ್ಚಳವಾಗುತ್ತದೆ. ಹಲವು ದಶಕಗಳ ತನಕ ಈ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಸಹಕಾರ ನೀಡಬೇಕು ಎನ್ನುವುದು ಹೋರಾಟಗಾರರ ಅಭಿಪ್ರಾಯ.
ಸಾವಿರಾರು ಹೆಕ್ಟೇರ್ ಕೃಷಿಭೂಮಿಗೆ ನೀರಿನಾಸರೆ
ಹೈಕಾಡಿ ಸಮೀಪ ಕಾಸಾಡಿಯಿಂದ ಶಿರೂರುಮೂಕೈ ತನಕ ಒಂದು ಕಾಲುವೆ ಹಾಗೂ ಅಲ್ಲಿಂದ 9 ಕಿ.ಮೀ. ಹಾಗೂ 26 ಕಿ.ಮೀ.ಉದ್ದದ ಎರಡು ಪ್ರತ್ಯೇಕ ಕಾಲುವೆಗಳು ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗಲಿದೆ 9 ಕಿ.ಮೀ. ಉದ್ದದ ಕಾಲುವೆ ಶಿರೂರುಮೂಕೈì, ಹೆಗ್ಗುಂಜೆ, ಯಡ್ತಾಡಿ ಸಂಪರ್ಕಿಸಲಿದ್ದು, 26 ಕಿ.ಮೀ. ಕಾಲುವೆ ಆವರ್ಸೆ, ವಂಡಾರು, ಬಿಲ್ಲಾಡಿ, ಶಿರಿಯಾರ, ಯಡ್ತಾಡಿ, ಕಾವಡಿ, ಅಚಾÉಡಿ ರೈಲ್ವೇ ಸೇತುವೆ ವರೆಗೆ ನಿರ್ಮಾಣಗೊಳ್ಳಲಿದೆ. ಈ ಮೂಲಕ 26 ಕಿ.ಮೀ. ನಾಲೆ 1921 ಹೆಕ್ಟೇರ್( 4744 ಎಕ್ರೆ) ಪ್ರದೇಶಕ್ಕೆ ಹಾಗೂ 9 ಕಿ.ಮೀ. ನಾಲೆ 802 ಹೆಕ್ಟೇರ್(1980 ಎಕ್ರೆಗೆ) ಒಟ್ಟು 6724 ಕೃಷಿಭೂಮಿಗೆ ನೀರುಣಿಸುವ ಯೋಜನೆ ಇದಾಗಿದೆ.
ಅಂತಿಮ ಸರ್ವೆ
ವಾರಾಹಿ ಎಡದಂಡೆ ಏತನೀರಾವರಿ ಯೋಜನೆಗೆ ಈಗಾಗಲೇ ಪೂರ್ವ ತಯಾರಿಗಳು ನಡೆದಿದ್ದು ಶೀಘ್ರದಲ್ಲಿ ಕಾಲುವೆ ನಿರ್ಮಾಣದ ಸ್ಥಳದ ಅಂತಿಮ ಸರ್ವೆ, ಭೂ ಸ್ವಾಧೀನ ಪ್ರಕ್ರಿಯೆಗಳು ನಡೆಯಲಿವೆ. ಟೆಂಡರ್ ಪ್ರಕ್ರಿಯೆ ನಡೆದಿದೆ. 18 ತಿಂಗಳೊಳಗೆ ಕಾಮಗಾರಿ ಮುಗಿಸುವ ಗಡುವು ಕೂಡ ನೀಡಲಾಗಿದೆ.
– ಪ್ರಸನ್ ಕುಮಾರ್,
ಎ.ಇ.ಇ. ವಾರಾಹಿ ಯೋಜನೆ
ಕನಸು ನನಸಾಗುವ ಹಂತದಲ್ಲಿದೆ
ವಾರಾಹಿ ನೀರು ಲಭ್ಯವಾಗಬೇಕು ಎನ್ನುವುದು ಇಲ್ಲಿನ ರೈತರ ಬಹುದಿನಗಳ ಕನಸಾಗಿದೆ. ಮುಖ್ಯ ಕಾಲುವೆಯ ಮೂಲಕ ಇಲ್ಲಿಗೆ ನೀರು ಹರಿಯದಿದ್ದರೂ ಎಡದಂಡೆ ಏತನೀರಾವರಿ ಕಾಲುವೆ ಮೂಲಕ ನೀರು ಪೂರೈಕೆಗೆ ತಯಾರಿ ನಡೆದಿದೆ. ಸ್ಥಳೀಯರು ಸಹಕಾರ ನೀಡಿದಲ್ಲಿ ಕಾಮಗಾರಿ ಆದಷ್ಟು ಶೀಘ್ರ ಕೈಗೂಡಲಿದೆ. ನಮ್ಮ 38 ವರ್ಷಗಳ ಹೋರಾಟಕ್ಕೆ ಫಲಸಿಗಲಿದೆ.
– ಸತೀಶ್ ಶೆಟ್ಟಿ ಯಡ್ತಾಡಿ, ವಾರಾಹಿ ನೀರಾವರಿ ಹೋರಾಟಗಾರರು
– ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.