ಹೊಸಂಗಡಿಗೆ ವಾರಾಹಿ ನೀರು: ಈಡೇರದ ದಶಕಗಳ ಬೇಡಿಕೆ
Team Udayavani, Jan 26, 2019, 12:30 AM IST
ಸಿದ್ದಾಪುರ: ಜಲ ಸಂಪತ್ತು ಹೇರಳವಾಗಿದ್ದರೂ, ಕುಂದಾಪುರ ತಾ. ಹೊಸಂಗಡಿ ಗ್ರಾಮಕ್ಕೆ ಕುಡಿಯುವ ನೀರಿನ ಬರ ತಪ್ಪಿಲ್ಲ. ಇದಕ್ಕೆ ಪರಿಹಾರವಾಗಿ ವಾರಾಹಿ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ, ಸಾವಿರಾರು ಎಕರೆ ಭೂಮಿಗೆ ನೀರುಣಿಸಬಹುದಾಗಿದೆ.
ಹೊಸಂಗಡಿ ಗ್ರಾಮಕ್ಕೆ ನೀರು ಬಳಸಿಕೊಳ್ಳುವಲ್ಲಿ ಇಚ್ಛಾಶಕ್ತಿ ಕೊರತೆ ಪ್ರಮುಖವಾಗಿ ಕಾಡಿದೆ. ಇಲ್ಲಿ ರಾಜರ ಕಾಲದ ಕೆರೆ ಹಾಗೂ ಮದಗಗಳಿವೆ. ಇವುಗಳಲ್ಲಿ ಕೋಟೆಕೆರೆ ಕೂಡ ಒಂದು. ಇದಕ್ಕೆ ವಾರಾಹಿ ನದಿಯ ನೀರು ಹಾಯಿಸಿದರೆ ಕೃಷಿ ಭೂಮಿಗೆ, ಜನ- ಜನುವಾರುಗಳಿಗೆ, ಕಾಡು ಪ್ರಾಣಿಗಳಿಗೆ ಅನುಕೂಲವಾಗಲಿದೆ.
ಕಡಿಮೆ ಖರ್ಚ, ದೊಡ್ಡ ಲಾಭ
ಭಾಗೀಮನೆ ಹಾಗೂ ಹೊನಕನಬೈಲು ಕೆರೆ ಮೂರು ಕಿ.ಮೀ ಅಂತರದಲ್ಲಿದೆ. ಭಾಗೀಮನೆ ಬಳಿ ವಾರಾಹಿ ನದಿಯ ನೀರನ್ನು ಪಂಪ್ ಮೂಲಕ ಸುಮಾರು 8ಎಕ್ರೆ ವಿಸ್ತೀರ್ಣ ಹೊಂದಿರುವ ಹೊನಕನಬೈಲು ಕೆರೆಗೆ ಹಾಯಿಸಿ, ಅಲ್ಲಿಂದ ನೈಸರ್ಗಿಕ ನಾಲೆಯಲ್ಲಿ ಕೋಟೆಕೆರೆಗೆ ನೀರು ಹರಿಯಲು ಅನುಕೂಲ ಕಲ್ಪಿಸಬೇಕು. ಕೃಷಿ ಭೂಮಿಗೆ ಅನುಕೂಲವಾಗುವುದರ ಜತೆಗೆ ಆ ಭಾಗಗಳ ಕುಡಿಯುವ ನೀರಿನ ಮೂಲವು ವೃದ್ಧಿಸುತ್ತವೆ. ಈ ಯೋಜನೆಗೆ ಸರಕಾರ ಪಂಪ್ ಹಾಗೂ ಪೈಪ್‌ಲೈನ್‌ಗೆ ಖರ್ಚು ಮಾಡಿದರೆ ಸಾಕಾಗುತ್ತದೆ. ಇಚ್ಛಾಶಕ್ತಿ ಇದ್ದರೆ ಕಡಿಮೆ ಖರ್ಚಿನಲ್ಲಿ ದೊಡ್ಡ ಲಾಭ ಪಡೆಯಬಹುದಾಗಿದೆ.
ದಶಕಗಳ ಬೇಡಿಕೆ
ವಾರಾಹಿ ನೀರನ್ನು ಹೊನಕನಬೈಲು ಕೆರೆಗೆ ಹಾಯಿಸುವ ಮೂಲಕ ಹತ್ತಾರು ಹಳ್ಳಿಗಳಿಗೆ ನೀರು ಕಲ್ಪಿಸುವ ಈ ಯೋಜನೆ ಹತ್ತು ವರ್ಷಗಳ ಹಿಂದೆ ತಯಾರಾಗಿದ್ದರೂ, ಈವರೆಗೂ ಯೋಜನೆ ಈಡೇರಲಿಲ್ಲ. ಸುಮಾರು ಹತ್ತು ವರುಷಗಳ ಹಿಂದೆ ಈ ಬಗ್ಗೆ ಸರ್ವೇ ನಡೆದಿದ್ದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ರಾಜಕಾರಣಿಗಳ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ.
ಹಳ್ಳಿಗಳಿಗೆ ಅನುಕೂಲ
ವಾರಾಹಿ ನೀರನ್ನು ಹೊನಕನಬೈಲು ಕೆರೆಗೆ ಹಾಯಿಸಿದಲ್ಲಿ ಮುತ್ತಿನಕಟ್ಟೆ, ಕಂಟಗದ್ದೆ, ಕೆರೆಕಟ್ಟೆ ಹೆನ್ನಾಬೈಲು, ಬಾಳೆಜೆಡ್ಡು, ಚಕ್ತಿಬೇರು, ಅಬ್ಬಿಮಕ್ಕಿ, ಸಿದ್ದಾಪುರ ಸಣ್ಣಹೊಳೆ ಮೂಲಕ ವಳಾಲು, ಕಾನೂಹೊಳೆ ಮೂಲಕ ಕಳ್ಳಿನಜೆಡ್ಡು ಬಳಿ ಪುನ: ವಾರಾಹಿ ನದಿ ಸೇರುತ್ತದೆ.
ಇದರಿಂದ ಹಳ್ಳಿಗಳ ರೈತ ಕುಟುಂಬಗಳಿಗೆ ಅನುಕೂಲವಾಗುತ್ತದೆ.
ಅನುಕೂಲ
ವಾರಾಹಿ ನದಿ ನೀರು ಹೊನಕನಬೈಲು ಕೆರೆಗೆ ಹಾಯಿಸುವ ಬಗ್ಗೆ 10 ವರ್ಷಗಳ ಹಿಂದೆ ಯೋಜನೆ ತಯಾರಾಗಿದ್ದು ಕಾರಣಾಂತರದಿಂದ ಸ್ಥಗಿತಗೊಂಡಿದೆ. ಯೋಜನೆ ಕಾರ್ಯಗತವಾದಲ್ಲಿ ಕೃಷಿ ಭೂಮಿ ಹಾಗೂ ಕುಡಿಯುವ ನೀರಿಗೂ ಅನುಕೂಲವಾಗಲಿದೆ.
– ಅವಿನಾಶ್ ಶೆಟ್ಟಿ ಹೊಸಂಗಡಿ
ಕೆರೆಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ
ಯೋಜನೆ ತಯಾರಿಸಿ
ವಾರಾಹಿ ನದಿಯ ನೀರು ಹೊಸಂಗಡಿಯ ಹೊನಕನಬೈಲು ಕೆರೆಯ ಮೂಲಕ ಕೋಟೆಕೆರೆಯ ಅಚ್ಚು ಕಟ್ಟು ಪ್ರದೇಶಗಳಿಗೆ ನೀರು ಹಾಯಿಸಲು ನೂತನವಾಗಿ ಯೋಜನೆ ತಯಾರಾಗಬೇಕಿದೆ. ಭಾಗೀಮನೆಯಿಂದ ಹೊಸಂಗಡಿಗೆ ವಾರಾಹಿ ನದಿ ನೀರು ಸರಬರಾಜರಾಗಲು ಅರಣ್ಯ ಇಲಾಖೆಯ ವನ್ಯಜೀವಿ ವ್ಯಾಪ್ತಿಯ ಪ್ರದೇಶದಲ್ಲೆ ಬರಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗಿದೆ.
– ಪ್ರಸನ್ನಕುಮಾರ್
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಾರಾಹಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.