ವಾರಾಹಿ ನೀರು ಗೊಂದಲ: ಸೌಹಾರ್ದ ಪರಿಹಾರ


Team Udayavani, Jun 17, 2018, 6:00 AM IST

q-28.jpg

ಕುಂದಾಪುರ: ವಾರಾಹಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಉಡುಪಿ ನಗರಕ್ಕೆ ಕೊಂಡೊಯ್ಯುವ ಸರಕಾರದ ನಿರ್ಧಾರಕ್ಕೆ ಆಕ್ಷೇಪವಿಲ್ಲ. ಆದರೆ ಕುಂದಾಪುರದ ಗ್ರಾಮಾಂತರ ಭಾಗದ ಜನರಿಗೆ ಅನ್ಯಾಯವಾಗದಂತೆ ಯೋಜನೆ ರೂಪಿಸಿ, ಈ ಕುರಿತು ಗೊಂದಲವನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸುವ ಕುರಿತ ನಿರ್ಣಯವನ್ನು ಶನಿವಾರ ಕುಂದಾಪುರದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಸಭೆಯಲ್ಲಿ ಕೈಗೊಳ್ಳಲಾಯಿತು. 

ಕುಂದಾಪುರದ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಪದಾಧಿಕಾರಿಗಳ ಸಭೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಕುರಿತಂತೆ ಉಡುಪಿ ಶಾಸಕರ ಬಳಿ ರೈತ ಸಂಘದ ನಿಯೋಗ ತೆರಳಿ, ಹಳೆ ಯೋಜನೆ ಕೈಬಿಟ್ಟು, ಸ್ಥಳೀಯರಿಗೆ ಅನ್ಯಾಯವಾಗದಂತೆ ಹೊಸ ಯೋಜನೆ ರೂಪಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.

ಹೈಕೋರ್ಟ್‌ಗೆ ಮೊರೆ
ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ಟೆಂಡರ್‌ ಕರಾರು ಪ್ರಕಾರ ವಾರಾಹಿ ನೀರನ್ನು ಶಂಕರನಾರಾಯಣ, ಹಾಲಾಡಿ, ಆವರ್ಸೆ, ಬಿಲ್ಲಾಡಿ, ಹೆಗ್ಗುಂಜೆ, ಚೇರ್ಕಾಡಿ ಮೂಲಕ ಹಾದುಹೋಗುವ ಪೈಪ್‌ಲೈನ್‌ ಮೂಲಕ ಸ್ವರ್ಣ ನದಿಯ ಬಜೆ ಡ್ಯಾಂಗೆ ಹರಿಸಲಾಗುತ್ತದೆ. ಆದರೆ ಈ ಗ್ರಾಮಗಳಿಗೆ ಕಚ್ಚಾ ನೀರನ್ನು ಕೊಟ್ಟು, ಉಡುಪಿಗೆ ಮಾತ್ರ ಶುದ್ಧ ನೀರು ಕೊಡುವುದು ಎಂದು ಟೆಂಡರ್‌ ಮಾರ್ಗಸೂಚಿಯಲ್ಲಿದೆ. ಇದು ಸಾಮಾಜಿಕ ನ್ಯಾಯವಲ್ಲ. ಈ ಕುರಿತಂತೆ ಈಗಾಗಲೇ ರೈತ ಸಂಘ ಹೈಕೋರ್ಟ್‌ ಮೊರೆಹೊಕ್ಕಿದೆ. ಈಗಾಗಲೇ 2 ಹಂತದ ವಿಚಾರಣೆ ಕೂಡ ಮುಗಿದಿದೆ. ಅಗತ್ಯಬಿದ್ದರೆ ಉಡುಪಿಯ ಶಾಸಕರಲ್ಲಿಯೂ ಈ ಕುರಿತು ಮಾತನಾಡಲಾಗುವುದು ಎಂದವರು ಹೇಳಿದರು. 

ರೈತ ಸಂಘದ ಆಗ್ರಹವೇನು?
ವಾರಾಹಿ ನೀರನ್ನು ಉಡುಪಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಬರುವ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಕೊಡಬೇಕು. ಅದಲ್ಲದೆ ಪೈಪ್‌ಲೈನ್‌ ಹಾದುಹೋಗಲು ರಸ್ತೆಯ ಬದಲು ಬೇರೆ ಜಾಗವನ್ನು ಗುರುತಿಸಲಿ. ನೇರವಾಗಿ ಬಜೆ ಡ್ಯಾಂಗೆ ನೀರು ಕೊಂಡೊಯ್ಯುವ ಬದಲು ವಾರಾಹಿ ಭಾಗದಲ್ಲಿಯೇ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ, ಇಲ್ಲಿಂದ ಹತ್ತಿರದ ದಾರಿಯಾದ ಶಿರಿಯಾರ ಮೂಲಕ ನೀರು ಕೊಂಡುಹೋಗಲಿ ಎನ್ನುವ ಆಗ್ರಹ ಸಭೆಯಲ್ಲಿ ಕೇಳಿ ಬಂತು. 
ಸಭೆಯಲ್ಲಿ ಸಂಘದ ಪ್ರ. ಕಾರ್ಯದರ್ಶಿ ಸತೀಶ್‌ ಕಿಣಿ, ಪದಾಧಿಕಾರಿಗಳಾದ ಪ್ರಕಾಶ್ಚಂದ್ರ ಶೆಟ್ಟಿ, ಅಶೋಕ್‌ ಶೆಟ್ಟಿ, ವಿಕಾಸ್‌ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. 

ನಡೆದ ಚರ್ಚೆ
ಪ್ರಾಕೃತಿಕ ವಿಕೋಪದಿಂದ ಬೆಳೆಹಾನಿಯನ್ನು ಅನು ಭವಿಸಿದ ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಧನ ಒದಗಿಸಬೇಕು. 
ಸಾಲ ಮನ್ನಾ ಕುರಿತು
ಕೃಷಿ ಇಲಾಖೆಯ ಸವಲತ್ತುಗಳು ಸಮರ್ಪ ಕ ವಿತರಣೆ ಹಾಗೂ ರೈತರ ಮೊಬೈಲ್‌ಗೆ ಸವಲತ್ತು ಗಳ ಮಾಹಿತಿಗಳು ಸಿಗುವಂ ತಾಗಲಿ.
ಮರಳುಗಾರಿಕೆ, ಮಕ್ಕಳ ಬಸ್‌ ಪಾಸ್‌.

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ
ಗ್ರಾಮೀಣ ಬಸ್‌ ಸಂಚಾರ ಸ್ಥಗಿತಗೊಳಿಸಿದ ಕುರಿತು
ಕೃಷಿ ಯಂತ್ರೋಪಕರಣ ಗಳನ್ನು ಸಹಕಾರ ಸಂಘಗಳಿಂದ ಖರೀದಿಸುವ ಕುರಿತು ಚರ್ಚೆ ನಡೆಯಿತು.  

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3

Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

1-vvv

ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್‌’ನಲ್ಲಿ ಪಲಿಮಾರು ಶ್ರೀ ಅಭಿಮತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.