ಕಂದಾಯ ಸೇವೆಯಲ್ಲಿ ವ್ಯತ್ಯಯ; ಜನರಿಗೆ ಸಂಕಷ್ಟ 


Team Udayavani, Nov 14, 2021, 3:40 AM IST

ಕಂದಾಯ ಸೇವೆಯಲ್ಲಿ ವ್ಯತ್ಯಯ; ಜನರಿಗೆ ಸಂಕಷ್ಟ 

ಉಡುಪಿ:  ರಾಜ್ಯಮಟ್ಟದಲ್ಲಿ ಕಂದಾಯ ಸೇವೆಗೆ ಸಂಬಂಧಿಸಿ ಜಿಲ್ಲೆ ಗಣನೀಯ ಸಾಧನೆ ಮಾಡಿದ್ದರೂ ತಳಮಟ್ಟದಲ್ಲಿ ಸಾರ್ವಜನಿಕರು ಕಂದಾಯ ಸೇವೆ ಪಡೆಯಲು ಅಲೆದಾಡಬೇಕಾದ ಸ್ಥಿತಿಯಿದೆ. ಇದಕ್ಕೆ ಕಾರಣ, ಗ್ರಾಮ ಲೆಕ್ಕಿಗರಿಗೆ ಕಂದಾಯ ಸೇವೆಗಿಂತ ಅನ್ಯ ಇಲಾಖೆಯ ಕಾರ್ಯಭಾರವೇ ಹೆಚ್ಚಾಗಿದೆ ಮತ್ತು ನಿರಂತರ ಒತ್ತಡದಲ್ಲಿ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

2-3 ಗ್ರಾಮ ವ್ಯಾಪ್ತಿ:

ಗ್ರಾಮ ಲೆಕ್ಕಿಗರು ಎರಡು ಅಥವಾ ಮೂರು ಗ್ರಾಮಗಳ ವ್ಯಾಪ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕಂದಾಯ ಸೇವೆ ಜತೆಗೆ ಇತರ  ಇಲಾಖೆಗಳ ಸಮೀಕ್ಷೆ, ಗಣತಿ, ವರದಿ ನೀಡುವ ಕೆಲಸಗಳಿಂದ ಹೈರಾಣಾಗಿದ್ದಾರೆ. ಇದರಿಂದ ಸಕಾಲ ವ್ಯಾಪ್ತಿ ಹೊರತುಪಡಿಸಿ ಇತರ ಕಂದಾಯ ಸೇವೆಯ ಸಾಕಷ್ಟು ಅರ್ಜಿಗಳು ವಿಲೇ ವಾರಿ ವಿಳಂಬವಾಗುತ್ತಿದೆ. ಕಚೇರಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು  ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ವಿಎಗಳ ಮೇಲೆ ಹೆಚ್ಚಿದ ಒತ್ತಡ :

ವಾರಕ್ಕೆ ಒಂದು ಅಥವಾ ಎರಡು ಸಮೀಕ್ಷೆ, ಗಣತಿ, ಸೀಲ್‌ಡೌನ್‌ ಎಂದು ಗ್ರಾಮ ಲೆಕ್ಕಿಗರ ಮೇಲೆ ಕಾರ್ಯದ ಒತ್ತಡ ಹೆಚ್ಚಿಸುತ್ತಲೇ ಇರುತ್ತಾರೆ. ಇಷ್ಟೊಂದು ಒತ್ತಡದ ನಡುವೆ ಜನರಿಗೆ ಸರಿಯಾದ ಸಮಯಕ್ಕೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಳೆ, ಬೆಳೆ ಹಾನಿಗೆ ಸಂಬಂಧಿಸಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಮೀಕ್ಷೆ,  ಆರ್‌ಟಿಸಿಗೆ ಆಧಾರ್‌ ಕಾರ್ಡ್‌ ಲಿಂಕ್‌,  ನೀರಾವರಿ ಗಣತಿ, ಸಾಂಖ್ಯೀಕ ಇಲಾಖೆಯ ಕಾರ್ಯ, ಕೋವಿಡ್‌ ಸಂಬಂಧಿತ ಸೇವೆ (ಗ್ರಾಮೀಣ ಭಾಗದಲ್ಲಿ ಸೀಲ್‌ಡೌನ್‌), ಅಕ್ರಮ ಮರಳುಗಾರಿಕೆ ತಡೆಯುವ ಪ್ರಕ್ರಿಯೆ, ಅಕ್ರಮ ಮದ್ಯ ಮಾರಾಟ ತಡೆ ಹೀಗೆ ವಿವಿಧ ಇಲಾಖೆಗಳ ಹೆಚ್ಚುವರಿ ಕಾರ್ಯ, ನ್ಯಾಯಾಲಯದ ವ್ಯಾಜ್ಯ, ಕಚೇರಿಗೆ ಸಂಬಂಧಿಸಿದ ಕೆಲಸಕ್ಕೂ ನಮ್ಮನ್ನೇ ನಿಯೋಜಿಸುತ್ತಾರೆ. ಬಹುತೇಕ ಕಂದಾಯ ಸೇವೆಗಳು ಆನ್‌ಲೈನ್‌ ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಕಂಪ್ಯೂಟರ್‌, ಇಂಟರ್‌ನೆಟ್‌ ಸಂಪರ್ಕ ವನ್ನು ಸರಕಾರ  ಒದಗಿಸಿಲ್ಲ ಮತ್ತು ಮೊಬೈಲ್‌ ಕೂಡ ನೀಡಿಲ್ಲ  ಎಂದು ಗ್ರಾಮಲೆಕ್ಕಿಗರು  ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶೇ. 50ರಷ್ಟು  ವಿಎಗಳಿಗೆ ಕಚೇರಿ ಕೆಲಸ :

ಜಿಲ್ಲೆಯಲ್ಲಿ 216 ಮಂಜೂರಾದ ಗ್ರಾಮ ಲೆಕ್ಕಿಗ ಹುದ್ದೆಯಲ್ಲಿ ಹೊಸದಾಗಿ 18 ಹುದ್ದೆ ಗಳು ಭರ್ತಿಯಾಗಿವೆ. ಇದರಲ್ಲಿ 14 ಮಂದಿಗೆ ಕಾರ್ಯಾದೇಶ ನೀಡಲಾಗಿದೆ. ಒಟ್ಟಾರೆ 198 ವಿಎಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ. 50ರಷ್ಟು ವಿಎಗಳು ಡಿಸಿ, ಎಸಿ, ತಾಲೂಕು ಹಾಗೂ ನಾಡ ಕಚೇರಿಗಳಿಗೆ ನಿಯೋಜಿಸಲ್ಪಟ್ಟಿದ್ದಾರೆ. ಇಲ್ಲಿನ ಬಹುತೇಕ ವಿಭಾಗದಲ್ಲಿ ಎಸ್‌ಡಿಎ, ಕ್ಲರಿಕಲ್‌ ಪೋಸ್ಟ್‌ ಗಳು ಖಾಲಿ ಇದ್ದು, ಇವರ ಕೆಲಸವನ್ನು ವಿಎಗಳು ಮಾಡುವಂತಾಗಿದೆ ಎಂದು ಮೂಲಗಳು ತಿಳಿಸಿವೆ.

11ನಕ್ಷೆಗೆ ಜನರ ಪರದಾಟ :

ಜಿಲ್ಲೆಯೊಂದರಲ್ಲೇ ಮೂರು ನಾಲ್ಕು ವರ್ಷಗಳಿಂದ ಕೃಷಿ ಜಮೀನಿಗೆ ಸಂಬಂಧಿಸಿದ 11ಇ ನಕ್ಷೆ ಕೋರಿ ಸಲ್ಲಿಕೆಯಾದ 7,700 ಅರ್ಜಿಗಳು ವಿಲೇವಾರಿಯಾಗಿಲ್ಲ.  ವಿಎಗಳ ಕೆಲಸದ ಒತ್ತಡದಿಂದ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಆರ್‌ಟಿಸಿ-ಆಖಾರ್‌ಬಂದ್‌ ಪ್ರಕ್ರಿಯೆ, 11ಇ ನಕ್ಷೆ ಪಡೆಯಲು ಜನರು ಪರದಾಡುತ್ತಿದ್ದಾರೆ. ಆರ್‌ಟಿಸಿ-ಸರ್ವೇ ಟ್ಯಾಲಿ, ಆರ್‌ಟಿಸಿ ಮ್ಯುಟೇಶನ್‌, ಆದಾಯ, ಜಾತಿ, ವಾಸ್ತವ್ಯ ಪ್ರಮಾಣ ಪತ್ರ, ಜಮಾಬಂದಿ ಸೇರಿದಂತೆ ಕಂದಾಯ ಇಲಾಖೆಯ ಮೂಲ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ  ಎಂದು ಗ್ರಾಮ ಲೆಕ್ಕಿಗರು ದೂರಿದ್ದಾರೆ.

ಅನ್ಯ ಇಲಾಖೆ ಕೆಲಸಗಳು ಹೆಚ್ಚಿರುವುದರಿಂದ ಗ್ರಾಮ ಲೆಕ್ಕಿಗರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಗ್ರಾಮ ಲೆಕ್ಕಿಗನಿಗೆ ಎರಡು ಮೂರು ಗ್ರಾಮಗಳಲ್ಲಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಇದೆ. ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕಂದಾಯ ಸಂಬಂಧಿತ ಸೇವೆ ಒದಗಿಸಲು ಕಷ್ಟವಾಗುತ್ತಿದೆ. ಭರತ್‌ ಶೆಟ್ಟಿ, ಅಧ್ಯಕ್ಷರು, ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಉಡುಪಿ ಜಿಲ್ಲೆ

ರಾಜ್ಯಮಟ್ಟದ ಕಂದಾಯ ಸೇವೆಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸುತ್ತಿದೆ. ಇದರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ನಿರಂತರ ಶ್ರಮವಿದೆ.  ಕಂದಾಯ ಇಲಾಖೆ ಮಾತೃ ಇಲಾಖೆಯಾದ್ದರಿಂದ ತುರ್ತು ಸಂದರ್ಭದಲ್ಲಿ  ಅನ್ಯ ಇಲಾಖೆಗಳ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಚೇರಿಗಳಲ್ಲಿಯೂ ಕಂದಾಯ ಸಂಬಂಧಿತ ಸೇವೆ ಹೆಚ್ಚಿದ್ದು, ಸಿಬಂದಿ ಕೊರತೆ ಇರುವುದರಿಂದ ವಿಎಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ 20 ವಿಎಗಳ ನೇಮಕಾತಿಗೆ ಸರಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ.  – ಕೂರ್ಮಾರಾವ್‌ ಎಂ.,  ಜಿಲ್ಲಾಧಿಕಾರಿ,  ಉಡುಪಿ ಜಿಲ್ಲೆ

 

ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Udupi: ಯುವತಿ ನಾಪತ್ತೆ; ದೂರು ದಾಖಲು

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.