ಗೃಹೋದ್ಯಮದಲ್ಲಿ ಯಶ ಕಂಡ ವಸಂತಿ ಶೆಟ್ಟಿ ಹುಣ್ಸೆಮಕ್ಕಿ
Team Udayavani, Mar 8, 2019, 1:00 AM IST
ಕುಂದಾಪುರ: ಮಹಿಳೆ ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶದಲ್ಲೇ ಉದ್ಯಮ ನಡೆಸಿ, ಅದರಲ್ಲಿ ಯಶ ಗಳಿಸಬಹುದು ಅನ್ನುವುದಕ್ಕೆ ಹುಣ್ಸೆಮಕ್ಕಿಯ ವಸಂತಿ ಶೆಟ್ಟಿ ಉತ್ತಮ ನಿದರ್ಶನ.
ಪತಿ ಸಬ್ಲಾಡಿ ಮಂಜಯ್ಯ ಶೆಟ್ಟಿ ಉದ್ಯಮಿಯಾಗಿದ್ದರೂ ವಸಂತಿ ಶೆಟ್ಟಿಯವರು ತಾವೇ ಸ್ವತಃ ಆಸಕ್ತಿಯಿಂದ ಪ್ರತ್ಯೇಕ ಉದ್ಯಮ ಆರಂಭಿಸಿ, ಉನ್ನತ ಸ್ಥಾನಕ್ಕೇರಿರುವುದು ವಿಶೇಷ.
15 ವರ್ಷಕ್ಕೂ ಹೆಚ್ಚು ಕಾಲದಿಂದ ಹುಣ್ಸೆಮಕ್ಕಿಯಲ್ಲಿ “ಕೋಸ್ಟಲ್ ಮಸಾಲ’ ಹೆಸರಲ್ಲಿ ಬೇರೆ ಬೇರೆ ತರಹದ ಸಾಂಬಾರ್ ಮಸಾಲ, ಹಪ್ಪಳ, ಸಂಡಿಗೆ, ಮಂಗಳೂರು ರೊಟ್ಟಿ, ಸ್ನ್ಯಾಕ್ಸ್ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ದುರ್ಗಾ ಹೋಮ್ ಇಂಡಸ್ಟ್ರೀಸ್ ಎನ್ನುವ ಕಾರ್ಖಾನೆ ನಡೆಸುತ್ತಿರುವ ಇವರು 15ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ್ದಾರೆ. ಅವರಿಗೆ ಪಿಎಫ್, ಇಎಸ್‌ಐ ಸೌಲಭ್ಯಗಳನ್ನೂ ನೀಡುತ್ತಾರೆ.
ಭಾರೀ ಬೇಡಿಕೆ
ಹೊರ ದೇಶದಲ್ಲಿ ಕೆಲಸ ಮಾಡುವ ಇಲ್ಲಿನವರು ಇವರ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮುಂಬಯಿಯ ಹೊಟೇಲ್‌ಗಳಲ್ಲಿಯೂ ಕೋಸ್ಟಲ್ ಮಸಾಲಕ್ಕೆ ಬೇಡಿಕೆಯಿದೆ. ಕುಂದಾಪುರದಿಂದ ಸುರತ್ಕಲ್ ವರೆಗೆ, ಭಟ್ಕಳ, ತೀರ್ಥಹಳ್ಳಿಗಳಿಂದಲೂ ಬೇಡಿಕೆಯಿದೆ.
ಹೈನುಗಾರಿಕೆಯಲ್ಲಿ ಪ್ರಶಸ್ತಿ
ಉದ್ಯಮದೊಂದಿಗೆ ಕೃಷಿಯೂ ಇವರ ಆಸಕ್ತಿಯ ಕ್ಷೇತ್ರವಾಗಿದ್ದು, ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹೈನುಗಾರಿಕೆಯಲ್ಲಿಯೂ ಯಶ ಕಂಡಿದ್ದು, 4 ವರ್ಷಗಳಿಂದ ಕರಾವಳಿ ಜಿಲ್ಲೆಯಲ್ಲಿ ಹೈನುಗಾರಿಕೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಖಾಯಂ.
ಸಮಾಜಮುಖೀ ಕಾರ್ಯ
ಆರ್ಥಿಕ ಅಡಚಣೆಯಿರುವ ಅನೇಕ ಬಡ ಮಕ್ಕಳಿಗೆ ಪ್ರತಿ ವರ್ಷ ಬಸ್ ಪಾಸ್ ಹಣವನ್ನು ಇವರೇ ಭರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನೇಕ ಸಮಾಜಮುಖೀ ಚಿಂತನೆಯಿರುವ ಸಂಘ- ಸಂಸ್ಥೆಗಳಿಗೆ ನೆರವು ಕೂಡ ನೀಡುತ್ತಿದ್ದಾರೆ.
ಸಮ್ಮಾನ
ವಸಂತಿ ಶೆಟ್ಟಿ ಅವರ ಉದ್ಯಮ ಕ್ಷೇತ್ರದಲ್ಲಿನ ಯಶೋಗಾಥೆಗೆ ಕೋಟ ಪಡುಕರೆಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ವೇಳೆ ಸಮ್ಮಾನಿಸಲಾಗಿತ್ತು. ಊರಲ್ಲಿ ನಡೆದ ಗಣೇಶೋತ್ಸವದಲ್ಲೂ ಇವರನ್ನು ಗೌರವಿಸಲಾಗಿತ್ತು.
ಯಶಸ್ಸು ಸಾಧ್ಯ
ಏನಾದರೂ ಸಾಧಿಸಬೇಕು ಎನ್ನುವ ಛಲ, ಇನ್ನೊಬ್ಬರಿಗೆ ಒಳ್ಳೆಯದು ಮಾಡಬೇಕೆನ್ನುವ ಹಂಬಲ, ಮನೆಯವರ ಸಹಕಾರವಿದ್ದರೆ ಮಹಿಳೆಯೂ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸಲು ಸಾಧ.
-ವಸಂತಿ ಶೆಟ್ಟಿ ,ಉದ್ಯಮಿ
- ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.