ಪ್ಲಾಸ್ಟಿಕ್ ಟ್ಯಾಂಕ್‌ನಿಂದಲೇ ಗೊಬ್ಬರ ಅನಿಲ ಘಟಕ ಆವಿಷ್ಕರಿಸಿದ ವಾಸು ಮೊಗವೀರ
ಆಟೋ ಚಾಲಕನಿಂದ ನ್ಯಾನೋ ಗೊಬ್ಬರ ಅನಿಲ ಉತ್ಪಾದನೆ
Team Udayavani, Feb 6, 2020, 5:07 AM IST
ಕೆದೂರು: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಮೂಡು ಕೆದೂರಿನಲ್ಲಿ ಆಟೋ ಚಾಲಕ ವಾಸು ಮೊಗವೀರ ಅವರು ಕೇವಲ 2 ಸಾವಿರ ರೂ. ವೆಚ್ಚದಲ್ಲಿಯೇ ಪ್ಲಾಸ್ಟಿಕ್ ಟ್ಯಾಂಕ್ (ಬ್ಯಾರಲ್)ಬಳಸಿಕೊಂಡು ಗೊಬ್ಬರ ಅನಿಲ ಘಟಕವನ್ನು ಆವಿಷ್ಕರಿಸಿ ಮಾದರಿಯಾಗಿದ್ದಾರೆ.
ತೆರೆಮರೆಯ ಸಾಧಕ
ವಾಸು ಮೊಗವೀರ ಅವರು ಯಾವುದೇ ಪ್ರಚಾರವನ್ನು ಬಯಸದೆ ಪ್ಲಾಸ್ಟಿಕ್ ನೀರಿನ ಟ್ಯಾಂಕ್(ಬ್ಯಾರಲ್), ಪಿವಿಸಿ ಪೈಪ್, ಲಾರಿಯ ಟಯರ್‌ನ ಎರಡು ಟ್ಯೂಬ್‌ಗಳು , ಹಾಗೂ ತೆಳ್ಳಗಿನ ಸುಮಾರು 15 ಮೀಟರ್ ವಾಟರ್ ಪೈಪ್ , ಪ್ಲಾಸ್ಟಿಕ್ ವಾಲ್ , ಹಾಗೂ ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಅತೀ ಕಡಿಮೆ ವೆಚ್ಚದಲ್ಲಿ ಅತ್ಯಂತ ಸರಳವಾಗಿ ಪರಿಸರ ಸ್ನೇಹಿ ಗೊಬ್ಬರ ಅನಿಲ ಘಟಕವನ್ನು ಸ್ಥಾಪಿಸುವ ಮೂಲಕ ನಿತ್ಯ ಅಡುಗೆಗಾಗಿ ಅನಿಲವನ್ನು ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ.
ಅನಿಲ ಬಳಕೆ ಹೇಗೆ ?
ವಾಸು ಅವರು ವಾಸವಾಗಿರುವ ಮನೆಯ ಸಮೀಪದಲ್ಲಿಯೇ ಸುಮಾರು ಮೂರು ದನ ಹಾಗೂ ಕರುಗಳನ್ನು ಸಾಕಿ ಸಲಹುತ್ತಿದ್ದಾರೆ. ಹೈನುಗಾರಿಕೆಯಿಂದಾಗಿ ಉಂಟಾಗಬಹುದಾದ ಉಪ ಉತ್ಪಾದನ ಹಸುವಿನ ಸಗಣಿ ಹಾಗೂ ಒಂದು ಬಕೆಟ್ ದನದ ಗಂಜಲು (ಗೋ ಮೂತ್ರ)ವನ್ನು ಶೇಖರಿಸಿ ಆವಿಷ್ಕರಿಸಿದ ಟ್ಯಾಂಕ್‌ಗೆ ಮಿಶ್ರಣ ಮಾಡಿ ಹಾಕಲಾಗುವುದು. ಒಂದು ಗಂಟೆಯಲ್ಲಿಯೇ ರಾಸಾಯನಿಕ ಪ್ರಕ್ರಿಯೆ ಪೂರ್ಣಗೊಂಡು ಟ್ಯಾಂಕ್‌ನ ಮೇಲ್ಭಾಗದಲ್ಲಿ ಅಳವಡಿಸಿ ವಾಟರ್ ಪೈಪ್‌ಗ್ಳ ಮೂಲಕ ಲಾರಿಯ ಟಯರ್‌ನ ಎರಡು ಟ್ಯೂಬ್‌ನಲ್ಲಿ ಶೇಖರಣೆಯಾಗುವುದು ಮಿತವ್ಯಯದಿಂದ ನಿತ್ಯ ಅಡುಗೆಗೆ ಅನಿಲಗಳು ಉತ್ಪಾದನೆಯಾಗುವುದು. ದಿನಕ್ಕೆ ಎರಡು ಬಾರಿ ಅನಿಲ ಉತ್ಪಾದನೆಯ ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದು ಹೆಚ್ಚು ಪ್ರಮಾಣದಲ್ಲಿ ಅನಿಲ ಶೇಖರಣೆಯಾಗಬೇಕಾದರೆ ಟ್ಯೂಬ್‌ಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು.
ವಾಸು ಮೊಗವೀರ ಸದಾ ಕ್ರಿಯಾಶೀಲ ಚಿಂತನೆ ಜತೆಗೆ ಹೈನುಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿರುವ ಇವರು ಕಡಿಮೆ ಖರ್ಚಿನಲ್ಲಿಯೇ ನ್ಯಾನೋ ಗೊಬ್ಬರ ಅನಿಲ ಘಟಕವನ್ನು ಸ್ಥಾಪಿಸಬೇಕು ಎನ್ನುವ ಬಹುದಿನದ ಕನಸು ಸಾಕಾರಗೊಂಡಿದೆ.
ಬಹುದಿನದ ಕನಸು ಸಾಕಾರ
ಈ ಮೊದಲು ಬೆಂಗಳೂರು ಮಹಾ ನಗರದಲ್ಲಿ ಹೋಟೆಲ್‌ನಲ್ಲಿ 9 ವರ್ಷ ಉದ್ಯೋಗದಲ್ಲಿದೆ ಆದರೆ ನಗರ ಜೀವನ ಶೈಲಿಗೆ ಒಗ್ಗಿಕೊಳ್ಳಲು ನನ್ನಲ್ಲಿ ಕಷ್ಟಸಾಧ್ಯವಾದ್ದರಿಂದ ನನ್ನೂರಿನಲ್ಲಿ ಗ್ರಾಮೀಣ ಭಾಗದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಕೃಷಿ ಹಾಗೂ ಹೈನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂದು ಕಳೆದ ನಾಲ್ಕು ವರ್ಷಗಳಿಂದಲೂ ಕೃಷಿ ಚಟುವಟಿಕೆಯ ಹೈನುಗಾರಿಕೆಯಲ್ಲಿ ತನ್ನನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪತ್ನಿ ರಾಜೇಶ್ವರೀ ಸಾಥ್ ನೀಡುತ್ತಿದ್ದಾರೆ . ಎಲ್‌ಪಿಜಿ ಗ್ಯಾಸ್ ಬಳಕೆ ಕಷ್ಟಸಾಧ್ಯವಾದ್ದರಿಂದ ಏನಾದರೂ ಮಾಡಿ ಮಿತವ್ಯಯದಲ್ಲಿ ಪರಿಸರ ಸ್ನೇಹಿ ಮಾದರಿ ಅನಿಲ ಉತ್ಪಾದನೆ ಮಾಡಬೇಕು ಎನ್ನುವ ಬಹುದಿನದ ಕನಸು ಸಾಕಾರಗೊಂಡಿದೆ. -ವಾಸು ಮೊಗವೀರ ಜಡ್ಡಿನಮನೆ, ಸಾಧಕ
-ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.