ಪುರುಷ ಬಡಗಿಗಳಿಗೆ ಕಮ್ಮಿ ಇಲ್ಲ ಈ ಮಹಿಳಾ ಬಡಗಿ

Team Udayavani, Apr 2, 2018, 6:15 AM IST

1603gk5.jpg

ಉಡುಪಿ: ಆಕೆ ಉಳಿ, ಸುತ್ತಿಗೆ ಹಿಡಿದರೆ ಸುಂದರ ಮರದ ಕೆತ್ತನೆಗಳು ತಯಾರಾಗುತ್ತವೆ. ಕೆಲಸವಂತೂ ಅಚ್ಚುಕಟ್ಟು. ಇದು ಪುರುಷ ಬಡಗಿಗಳಿಗೆ ಕಮ್ಮಿ ಇಲ್ಲದಂತೆ ಕೆಲಸ ಮಾಡುವ ವೇದಾವತಿ ಅವರ ಚಾಕಚಕ್ಯತೆ. 

ಸಂತೆಕಟ್ಟೆ ನೇಜಾರಿನವರಾದ ವೇದಾವತಿ ಆಚಾರ್ಯ ಜೀವನ ನಿರ್ವಹಣೆಗಾಗಿ ಅವರು ತಮ್ಮ 55 ನೇ ವರ್ಷದ ಬಳಿಕ ಬಡಗಿ ಕೆಲಸ ಶುರುಮಾಡಿದ್ದು ನೆಮ್ಮದಿ ಕಂಡುಕೊಂಡಿದ್ದಾರೆ.  5ನೇ ತರಗತಿ ಓದುತ್ತಿರುವಾಗಲೇ ಸಹೋದರ ಕೃಷ್ಣಯ್ಯ ಆಚಾರ್ಯರಿಂದ ತಕ್ಕಮಟ್ಟಿಗೆ ಬಡಗಿ ಕೆಲಸ ಕಲಿತದ್ದು ಅವರ ಕೈ ಹಿಡಿದಿದೆ. 

ಊರುಗೋಲಾದ ಕೆಲಸ
ವೇದಾವತಿ 3 ವರ್ಷವಿದ್ದಾಗ ತಂದೆ ಸೋಮಯ್ಯ ಅವರನ್ನು ಕಳೆದುಕೊಂಡಿದ್ದರು. ಕಬ್ಬಿಣ ಕೆಲಸ ಮಾಡುವ ಉಪೇಂದ್ರ ಆಚಾರ್ಯರನ್ನು ವಿವಾಹವಾದ ಬಳಿಕ ಸಂಸಾರ ನಡೆಯುತ್ತಿತ್ತು. ಆದರೆ 10 ವರ್ಷಗಳ ಹಿಂದೆ ಪತಿಗೆ ಆರೋಗ್ಯ ಕೈಕೊಟ್ಟಿದ್ದು, ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಗ ಎದುರಾದ ಆರ್ಥಿಕ ಸಮಸ್ಯೆ ನಿಭಾಯಿಸಲು, ಮಗಳ ಶಿಕ್ಷಣಕ್ಕಾಗಿ ಬಡಗಿ ಕೆಲಸವನ್ನು ಮತ್ತೆ ಆರಂಭಿಸಿದ್ದರು. ಆದರೆ ದುರದೃಷ್ಟವಶಾತ್‌ ಕಳೆದ ವರ್ಷ ಪುತ್ರಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದು, ಬಡಗಿ ಕೆಲಸವನ್ನೇ ಮಾಡುತ್ತಿದ್ದಾರೆ.
 
ಸುಂದರ ಪೀಠೊಪಕರಣಗಳು
ವೇದಾವತಿ ಅವರ ಕೈಯಿಂದ ಕುರ್ಚಿ, ದೇವರ ಸ್ಟಾಂಡ್‌, ಕಾಯಿ ತುರಿಯುವ ಮಣೆ, ಕತ್ತಿಯ ಮಣೆ, ಒರಗುವ ಕುರ್ಚಿ, ಅನ್ನ ಬಾಗುವ ಚಟ್ಟಿ ಇತ್ಯಾದಿ ಸುಂದರವಾಗಿ ರೂಪಪಡೆಯುತ್ತದೆ. ಸಣ್ಣ ಮರದ ತುಂಡುಗಳನ್ನು ತುಂಡುಮಾಡಲು ವಿದ್ಯುತ್‌ ಕಟ್ಟಿಂಗ್‌ ಮಷೀನ್‌, ರಂಧ್ರ ಕೊರೆಯಲು ಡ್ರಿಲ್‌ ಮಷೀನ್‌ ಬಳಸುತ್ತಾರೆ. ಉಳಿದಂತೆ ಎಲ್ಲ ಕೆಲಸ ಉಳಿ, ಸುತ್ತಿಗೆಯಲ್ಲಿ ಮಾಡುತ್ತಾರೆ. ಪೀಠೊಪಕರಣಗಳಿಗೆ ಸುಂದರ ಡಿಸೈನ್‌ ಕೂಡ ಮಾಡುತ್ತಾರೆ.  

ಮೂವರನ್ನು ಸಲಹಿದರು
ವೇದಾವತಿಯವರು ಸಹೋದರಿಯ ಮೂವರೂ ಪುತ್ರರನ್ನು ಅವರು ದುಡಿವವರೆಗೆ ಸಾಕಿ ಸಲಹಿದ್ದಾರೆ. ಆರೋಗ್ಯ ಸಮಸ್ಯೆ ಕಾಡಿದಾಗ ಸಹೋದರಿಯ ಪುತ್ರರೇ ವೇದಾವತಿ ಅವರಿಗೆ ಸಹಾಯ ಮಾಡುತ್ತಾರೆ.
  
ಸರಕಾರಕ್ಕೆ ಕೈಚಾಚಲಿಲ್ಲ!
ವೃದ್ಧಾಪ್ಯ ವೇತನ, ವಿಧವಾ ವೇತನಕ್ಕೆ ವೇದಾವತಿ ಅರ್ಹರಾಗಿದ್ದರೂ ಅವರು ಯಾವುದೇ ವೇತನಗಳಿಗೆ ಅರ್ಜಿ ಸಲ್ಲಿಸದೇ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.  

ಹೆಚ್ಚಿಗೆ ಹಣ ನೀಡುವ ಗ್ರಾಹಕರು
ಅಂಬಾಗಿಲಿನ ಮಿಲ್‌ನಿಂದ ಮರ ತಂದು ತಯಾರಿಸಿದ ಪೀಠೊಪಕರಣಗಳನ್ನು ವೇದಾವತಿ ರಥಬೀದಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಮನೆಗೆ ಬಂದು ಖರೀದಿಸುವ ಸ್ಥಳೀಯರೂ ಇದ್ದಾರೆ. ಮನೆಗೆ ಬರುವ ಗ್ರಾಹಕರು ಅವರೊಂದಿಗೆ ಚರ್ಚೆ ಮಾಡದೆ  ಸ್ವಲ್ಪಮಟ್ಟಿಗೆ ಹೆಚ್ಚಿನ ಮೊತ್ತವನ್ನೇ ಕೊಟ್ಟು ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ.  

ಶಕ್ತಿ ಕುಂದುವವರೆಗೆ ಕೆಲಸ
ಬಡಗಿ ಕೆಲಸವು ನನ್ನ ಜೀವನ ನಿರ್ವಹಣೆಯೊಂದಿಗೆ ಹಿಂದಿನ ಸಾಲ ತೀರಿಸಲು ನೆರವಾಗುತ್ತಿದೆ. ನಿರಂತರ ಕೆಲಸದಿಂದ ಮನಸ್ಸಿನ ವೇದನೆ ಮರೆಯಾಗುತ್ತದೆ. ಮಹಿಳಾ ಒಕ್ಕೂಟ ನನ್ನನ್ನು “ಪುರುಷರಂತೆಯೇ ಬಡಗಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವ ಮಹಿಳೆ’ ಎಂದು ಗುರುತಿಸಿ ಸಮ್ಮಾನಿಸಿದೆ. ಶಕ್ತಿ ಇರುವಲ್ಲಿವರೆಗೆ ಈ ಕೆಲಸ ಮುಂದುವರಿಸುತ್ತೇನೆ.  

– ವೇದಾವತಿ ಆಚಾರ್ಯ

– ಎಸ್‌.ಜಿ. ನಾಯ್ಕ

ಟಾಪ್ ನ್ಯೂಸ್

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.