ಎ. 28-ಮೇ 2: ಪುನಃಪ್ರತಿಷ್ಠಾ ಕಲಶಾಭಿಷೇಕ ಸಂಭ್ರಮ
Team Udayavani, Apr 26, 2017, 11:08 AM IST
ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇಗುಲ
ಉಡುಪಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇಗುಲದಲ್ಲಿ ಎ. 28ರಿಂದ ಮೇ 2ರ ತನಕ ಆದಿ ಬ್ರಹ್ಮಸ್ಥಾನ, ಆದಿನಾಗ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕ ಮತ್ತು ರಾಜ ಗೋಪುರ, ನಗಾರಿ ಗೋಪುರ ಹಾಗೂ ಭೋಜನ ಶಾಲೆ ಸಮರ್ಪಣೆ ಕಾರ್ಯಕ್ರಮಗಳು ಜರಗಲಿವೆ.
ತತ್ಸಂಬಂಧ ಎ. 28ರಂದು ಬೆಳಗ್ಗೆ 9.30ರಿಂದ ಶ್ರೀ ವೀರಭದ್ರ ದೇಗುಲದಲ್ಲಿ ಸಾಮೂಹಿಕ ಪ್ರಾರ್ಥನೆ, ಭೂಶುದ್ಧಿ ಹೋಮ, ಭೂವರಾಹ ಹೋಮ, ಸಂಜೆ 6ರಿಂದ ಆದಿಬ್ರಹ್ಮಸ್ಥಾನ ಮತ್ತು ನಾಗಬನದಲ್ಲಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಅನ್ನಬ್ರಹ್ಮ ಭೋಜನ ಶಾಲೆಯ ವಾಸ್ತು ಹೋಮ, ಎ. 29ರಂದು ಬೆಳಗ್ಗೆ ಆದಿಬ್ರಹ್ಮಸ್ಥಾನ ಮತ್ತು ಶ್ರೀ ವೀರಭದ್ರ ದೇಗುಲದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಸಂಜೆ ಶ್ರೀ ವೀರಭದ್ರ ದೇಗುಲದಲ್ಲಿ ರಾಜಗೋಪುರ, ನಗಾರಿ ಗೋಪುರ, ವಾಲಗ ಮಂಟಪ,ಪರಿವಾರ ದೇವರಲ್ಲಿ ವಾಸ್ತು ಹೋಮ, ಎ. 30ರಂದು ಬೆಳಗ್ಗೆ ಆದಿಬ್ರಹ್ಮಸ್ಥಾನ ಮತ್ತು ಶ್ರೀ ವೀರಭದ್ರ ದೇಗುಲದಲ್ಲಿ ಮಹಾಸುದರ್ಶನ ಯಾಗ, ಸಂಜೆ ಆದಿಬ್ರಹ್ಮಸ್ಥಾನ ಮತ್ತು ಪರಿವಾರ ದೇವರ ಬಿಂಬ ಶುದ್ಧಿ, ಅಧಿವಾಸ ಪೂಜೆ, ಅಘೋರ ಹೋಮಗಳು ನಡೆಯಲಿವೆ.
ಮೇ 1ರಂದು ಬೆಳಗ್ಗೆ 7ರಿಂದ ಆದಿಬ್ರಹ್ಮಸ್ಥಾನ ಮತ್ತು ಪರಿವಾರ ದೇವರಿಗೆ ಪ್ರತಿಷ್ಠಾ ಹೋಮ, 9.15ರಿಂದ ಪ್ರತಿಷ್ಠಾ ವಿಧಿ, ಪರಿವಾರ ದೇವರ ಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ ಆದಿಬ್ರಹ್ಮಸ್ಥಾನ ಮತ್ತು ಶ್ರೀ ವೀರಭದ್ರ ದೇಗುಲದಲ್ಲಿ ಶಾಂತಿ ಪ್ರಾಯಶ್ಚಿತ್ತ ಹೋಮ,ಮೇ 2ರಂದು ಬೆಳಗ್ಗೆ 4ರಿಂದ
ಆದಿಬ್ರಹ್ಮ, ಶ್ರೀ ವೀರಭದ್ರಹಾಗೂ ಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, 9.30ಕ್ಕೆ ನಾಗದೇವರಿಗೆ ಪಂಚವಿಂಶತಿ ಕಲಶಾಭಿಷೇಕ ಪೂರ್ವಕ ಪ್ರಾಯಶ್ಚಿತ್ತ ಹೋಮ ಪೂರ್ವಕ ಆಶ್ಲೇಷಾ ಬಲಿ ಜರಗಲಿದೆ.
ಮೇ 2ರಂದು ಅಪರಾಹ್ನ 12ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಶಾಸಕ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಎಸ್.ಪಿ. ಷಡಕ್ಷರಿ ಸ್ವಾಮಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಚೇರ್‌ಮನ್ ಡಾ| ಮೋಹನ ಆಳ್ವ, ಧಾರ್ಮಿಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿ, ಮಹಾ ಪೋಷಕರಾದ ಪುಣೆ ವೈಶಾಲಿ ಗ್ರೂಪ್ ಆಫ್ ಹೊಟೇಲ್‌ನ ಬಿ. ಜಗನ್ನಾಥ ಶೆಟ್ಟಿ, ಲೀಲಾವತಿ ಸುಧಾಕರ ಹೆಗ್ಡೆ ಪಳ್ಳಿ ಪೆಜಕೊಡಂಗೆ ಮೊದಲಾದವರು ಉಪಸ್ಥಿತರಿರುವರು.
ಪ್ರತಿದಿನ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎ. 28ರಿಂದ ಎ. 30ರ ವರೆಗೆ ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದ, ಮೇ 1 ಮತ್ತು 2ರಂದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.