ಗದ್ದೆಯಿಂದಲೇ ತರಕಾರಿ ಮಾರಾಟ.. ಇನ್ನಂಜೆಯಲ್ಲಿ ಗಮನ ಸೆಳೆದ ತರಕಾರಿ ಮೇಳ
Team Udayavani, Mar 6, 2021, 9:10 PM IST
ಕಾಪು : ಸಾಂಪ್ರದಾಯಿ ಕೃಷಿ ಪದ್ದತಿ ಜತೆಗೆ ವೈಜ್ಞಾನಿಕತೆ ಬಳಸಿಕೊಂಡು ರೈತರು ತಮ್ಮ ಬದುಕು ಸುಂದರವಾಗಿ ಕಟ್ಟಿಕೊಳ್ಳಬಹುದು. ವೈಜ್ಞಾನಿಕತೆ ಎಂದರೆ ರಾಸಾಯನಿಕ ಗೊಬ್ಬರ ಬಳಕೆ, ಯಂತ್ರಗಳ ಬಳಕೆಯಲ್ಲ. ಬದಲಾಗಿಗೆ ಬೆಳೆಗಳಿಗೆ ಏನು ಬೇಕೋ ಅದನ್ನು ನೀಡುವುದು. ಈ ಮೂಲಕ ಕೃಷಿಯಲ್ಲಿ ಲಾಭ ಗಳಿಕೆ ಸಾಧ್ಯ ಎಂದು ಉಡುಪಿ ಜಿಲ್ಲಾ ಕೃಷಿಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.
ಕಾಪು ಜೇಸಿಐ, ಜೇಸಿರೆಟ್ ವಿಭಾಗದ ಮಹಿಳಾ ಉತ್ಸವ್ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಕೃಷಿಯಾಸಕ್ತರ ಬಳಗವು ಇನ್ನಂಜೆಯಲ್ಲಿ ಶನಿವಾರ ಏರ್ಪಡಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮ, ನೇರ ತರಕಾರಿ ಮಾರಾಟ ಮೇಳ ಮತ್ತು ಪ್ರಗತಿಪರ ಕೃಷಿಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅವೈಜ್ಞಾನಿಕತೆ ಮಾದರಿಯ ಕೃಷಿಯಿಂದ ನಷ್ಟದ ಜೊತೆಗೆ ರೋಗರುಜಿನಗಳನ್ನು ಆಹ್ವಾನಿಸಿ ಕೊಂಡಂತಾಗುತ್ತದೆ. ಅನ್ನದಾತರ ಬದುಕು ಹಸನಾಗಬೇಕಾದರೆ ಕೃಷಿಯಲ್ಲಿ ಯಾವುದೇ ತಪ್ಪುಗಳನ್ನು ಮಾಡದೇ, ವೈಜ್ಞಾನಿಕತೆ ವಿಧಾನಗಳ ಬಗ್ಗೆ ಅರಿತುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಪ್ರತೀ ವರ್ಷ ಸುಮಾರು 150 ಕ್ಕೂ ಮಾಹಿತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಕೃಷಿಯತ್ತ ಜನರನ್ನು ಸೆಳೆಯುವುದು ಕೃಷಿ ಲಾಭದಾಯಕವನ್ನಾಗಿಸುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕೃಷಿಕರನ್ನು ಆರ್ಥಿಕ ಸಬಲರನ್ನಾಗಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಿದ್ದು ಅದಕ್ಕೆ ಸಂಘ ಸಂಸ್ಥೆಗಳ ಪೂರ್ಣ ಸಹಕಾರದ ಅಗತ್ಯತೆಯಿದೆ ಎಂದರು.
ಇನ್ನಂಜೆ ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ಗೋಪಾಲ ಕುಂದರ್ ಮಜೂರು ತರಕಾರಿ ಕೃಷಿ ಸಹಿತವಾಗಿ ವಿವಿಧ ವಾಣಿಜ್ಯ ಬೆಳೆಗಳನ್ನು ಹೇಗೆ ಲಾಭದಾಯಕವಾಗಿಸಿ ಕೊಳ್ಳಬಹುದು ಮತ್ತು ಯಾವ ಋತುಗಳಲ್ಲಿ ಯಾವ್ಯಾವ ತರಕಾರಿ ಬೆಳೆಯ ಬಹುದು ಎನ್ನುವುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇನ್ನಂಜೆಯ ಹಿರಿಯ ಪ್ರಗತಿಪರ ಕೃಷಿಕೆ ಮತ್ತು ಮೂಲ್ಯದಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಪ್ರಗತಿಪರ ಕೃಷಿಕ ಉದಯ್ ಜಿ., ಕಾಪು ಜೇಸಿಐ ನಿಕಟಪೂರ್ವ ಅಧ್ಯಕ್ಷ ವಿನೋದ್ ಕಾಂಚನ್, ಜೇಸಿರೆಟ್ ಅಧ್ಯಕ್ಷ ಗಾಯಾತ್ರಿ ಜಿ. ಆಚಾರ್ಯ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐ ಅಧ್ಯಕ್ಷೆ ಅರುಣಾ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರುತಿ ಎಸ್. ಶೆಟ್ಟಿ ವಂದಿಸಿದರು.
20 ಕ್ವಿಂಟಾಲ್‌ನಷ್ಟು ಸೌತೆ ನೇರ ಮಾರಾಟಕ್ಕೆ ಲಭ್ಯ
ನೇರ ತರಕಾರಿ ಮಾರಾಟ ಮೇಳದಲ್ಲಿ ಸೌತೆ ಕಾಯಿ, ಮುಳ್ಳು ಸೌತೆ, ಬಸಳೆ, ಸೋರೆ ಕಾಯಿ, ಬೂದು ಕುಂಬಳ, ಮಟ್ಟುಗುಳ್ಳವನ್ನು ಗದ್ದೆಯಲ್ಲೇ ಮಾರಾಟ ಮಾಡಲಾಗಿದ್ದು, ಸುಮಾರು ಎರಡೂವರೆ ಕ್ವಿಂಟಲ್‌ನಷ್ಟು ಸೌತೆ ಕಾಯಿ ಮಾರಾಟವಾಗಿದೆ. ಸುಮಾರು 15 ಕ್ವಿಂಟಲ್ ನಷ್ಟು ಸಾವಯವ ಸೌತೆ ಕಾಯಿ ಮಾರಾಟಕ್ಕೆ ಲಭ್ಯವಿದ್ದು ಗ್ರಾಹಕರು ಗದ್ದೆಗೆ ಬಂದು ನೇರವಾಗಿ ಖರೀದಿಸಲು ಅವಕಾಶವಿದೆ.
ಉದಯ್ ಜಿ. ಇನ್ನಂಜೆ (ಪ್ರಗತಿಪರ ಕೃಷಿಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.