ದರ ಏರಿಕೆ ದೂರು: ಪರಿಶೀಲನೆ : ತರಕಾರಿ ಅಂಗಡಿಗೆ ಎಸಿ ಭೇಟಿ
Team Udayavani, Apr 12, 2020, 3:04 PM IST
ಕೋಟ: ಸಾಲಿಗ್ರಾಮದ ಕೆಲವು ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಹೀಗಾಗಿ ಕುಂದಾಪುರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರ ಸೂಚನೆಯಂತೆ ಕಂದಾಯ ಅಧಿಕಾರಿಗಳ ತಂಡ ಶನಿವಾರ ಸಾಲಿಗ್ರಾಮದಲ್ಲಿ ಪ್ರತಿ ಅಂಗಡಿಗೆ ಭೇಟಿ ನೀಡಿ ದರ ಪರಿಶೀಲಿಸಿತು.
ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಬಾರದು, ಅಂಗಡಿಗಳ ಮುಂದೆ ದರಪಟ್ಟಿ ಅಳವಡಿಸಿ ಕೊಳ್ಳಬೇಕು. ಮತ್ತೆ ದೂರುಗಳು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋಟ ಕಂದಾಯ ಅಧಿಕಾರಿ ರಾಜು, ವಿ.ಎ. ಮಹೇಂದ್ರ ಮತ್ತು ತಂಡ ಎಚ್ಚರಿಕೆ ನೀಡಿತು.
ಪೊಲೀಸರಿಂದಲೂ ಕಾರ್ಯಾಚರಣೆ
ಇಲ್ಲಿನ ಕಾರಂತ ಬೀದಿಯಲ್ಲಿ ತರಕಾರಿ ಮತ್ತಿತರ ವಸ್ತುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದು, ಸಾಮಾಜಿಕ ಅಂತರವಿಲ್ಲದೆ ವ್ಯವಹರಿಸುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕೋಟದ ಪೊಲೀಸರು ಈ ಪ್ರದೇಶಗಳಿಗೆ ಭೇಟಿ ನೀಡಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. ಅನಗತ್ಯ ತಿರುಗಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಸಮಯ ಮೀರಿ ತೆರೆದಿದ್ದ ಅಂಗಡಿ ಮುಚ್ಚಿಸಲಾಯಿತು.
ಕುಂದಾಪುರ: ಇಲ್ಲಿನ ಕೆಲವು ತರಕಾರಿ ಅಂಗಡಿಗಳಿಗೆ ಶನಿವಾರ ಭೇಟಿ ನೀಡಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಅವರು ತರಕಾರಿ ದರ ಪರಿಶೀಲನೆ ನಡೆಸಿದರು.
ಕೊರೊನಾ ಹಿನ್ನೆಲೆಯಲ್ಲಿ ತರಕಾರಿ ಅಂಗಡಿಗಳಿಗೆ ಮಾರಾಟಕ್ಕೆ ಅವಕಾಶ ನೀಡಿದ್ದರೂ ತರಕಾರಿಗಳ ದರವನ್ನು ಏರಿಸಬಾರದು, ಕುಂದಾಪುರದಲ್ಲಿ ಏಕ ರೀತಿಯ ಬೆಲೆ ವಿಧಿಸಬೇಕು ಎನ್ನುವ ಆದೇಶವನ್ನು ಈಗಾಗಲೇ ಎಸಿಯವರು ಹೊರಡಿಸಿದ್ದರು. ಇದರಂತೆ ಶನಿವಾರ ಕೆಲವು ತರಕಾರಿ ಅಂಗಡಿಗಳಿಗೆ ಭೇಟಿ ನೀಡಿ ಈ ದರ ಪಟ್ಟಿ ಪಾಲನೆಯಾಗುತ್ತಿದೆಯೇ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಕ್ರಮ ಕೈಗೊಳ್ಳುವ ಎಚ್ಚರಿಕೆ
ಈ ವೇಳೆ ತರಕಾರಿ ಅಂಗಡಿ ಯವರಲ್ಲಿ ಎಲ್ಲಿಂದ ತರಕಾರಿ ಪೂರೈಕೆ ಯಾಗುತ್ತಿದೆ? ಎಲ್ಲ ಕಡೆಗಳಲ್ಲಿ ಒಂದೇ ರೀತಿಯ ದರ ಪಾಲನೆ ಆಗುತ್ತಿದೆಯಾ? ದರ ಪಟ್ಟಿಗಿಂತ ಹೆಚ್ಚಿನ ಬೆಲೆ ವಿಧಿಸುವುದು ಕಂಡು ಬಂದಲ್ಲಿ ಕ್ರಮ ಜರಗಿಸುವುದಾಗಿ ವ್ಯಾಪಾರಿಗಳಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.