ಲಾಕ್‌ಡೌನ್ ಬಳಿಕ ವಾಹನ ನೋಂದಣಿ ಚೇತರಿಕೆ
Team Udayavani, Jul 27, 2021, 4:00 AM IST
ಉಡುಪಿ: ಜಿಲ್ಲಾದ್ಯಂತ ದ್ವಿಚಕ್ರ ವಾಹನ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ 6 ತಿಂಗಳುಗಳಲ್ಲಿ ಒಟ್ಟು 7,065 ದ್ವಿಚಕ್ರ ವಾಹನಗಳನ್ನು ನೋಂದಣಿ ಮಾಡಲಾಗಿದ್ದರೆ, 2,631 ಕಾರುಗಳು ನೋಂದಾಯಿಸಲ್ಪಟ್ಟಿವೆ.
ಕಳೆದ ಬಾರಿಯ ಲಾಕ್‌ಡೌನ್ ಅವಧಿಯಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಹೆಚ್ಚಿನ ಮಂದಿ ಸ್ವಂತ ವಾಹನ ಹೊಂದುವ ಇಚ್ಛೆಯನ್ನು ಹೊಂದಿದ್ದರು. ಅದರಂತೆ ವಾಹನಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಕೊರೊನಾ ಅವಧಿಯಲ್ಲಿಯೇ ಹೆಚ್ಚಳ ಕಂಡಿತ್ತು. ಎರಡನೇ ಲಾಕ್‌ಡೌನ್ ಅವಧಿಗೂ ಮುನ್ನವೇ ಪ್ರಗತಿ ಕಂಡಿದ್ದ ವಾಹನ ನೋಂದಣಿ ಮೇಯಲ್ಲಿ ಬಹುತೇಕ ಇಳಿಕೆಯಾಗಿತ್ತು. ಈಗ ಮತ್ತೆ ಚೇತರಿಕೆಗೊಂಡು ನೋಂದಣಿ ಆಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಜಿÇÉೆಯ ಪ್ರಯಾಣಿಕ ವಾಹನಗಳಾದ ಬಸ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳು ವಾಹನದ ಮೂಲ ದಾಖಲಾತಿ ಗಳೊಂದಿಗೆ ಕಚೇರಿಗೆ ಸರೆಂಡರ್ ಮಾಡಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕವೇ ವಾಹನ ಉಪಯೋಗಿಸಲು ಸಾಧ್ಯವಿದೆ. ವಾಹನದ ಬಾಕಿ ತೆರಿಗೆ ಪಾವತಿಸದೆ ಅಥವಾ ವಿನಾಯಿತಿ ಪಡೆಯದೆ, ಪೂರ್ವಾನುಮತಿ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸಿದಲ್ಲಿ ಕಚೇರಿಯ ವಿಶೇಷ ತಪಾಸಣೆ ಸಂದರ್ಭ ಸಿಕ್ಕಿಬಿದ್ದಲ್ಲಿ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.
ವಾಹನ ಜನವರಿ ಫೆಬ್ರವರಿ ಮಾರ್ಚ್ ಎಪ್ರಿಲ್ ಮೇ ಜೂನ್ ಒಟ್ಟು
ದ್ವಿಚಕ್ರ 1,278 1,953 1,928 1,376 11 519 7,065
ಕಾರುಗಳು 788 558 599 434 10 242 2631
ಎಲ್‌ಜಿವಿ 60 68 61 40 05 18 252
ಎಂಜಿವಿ 05 07 05 04 01 05 27
ಎಚ್‌ಜಿವಿ 12 12 07 15 16 04 66
ಇತರ 118 133 141 75 03 31 501
ಒಟ್ಟು 2,261 2,731 2,741 1,944 46 819 10,542
ಈ ವರ್ಷಾರಂಭದಿಂದಲೇ ವಾಹನಗಳ ನೋಂದಣಿ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ಇಳಿಕೆ ಕಂಡಿದ್ದ ನೋಂದಣಿ ಪ್ರಕ್ರಿಯೆ ಈಗ ಮತ್ತೆ ಯಥಾಸ್ಥಿತಿಗೆ ಮರಳುತ್ತಿದೆ.–ಜೆ.ಪಿ.ಗಂಗಾಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
ತೆರಿಗೆ ಪಾವತಿ ಕಡ್ಡಾಯ :
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಯಾಣಿಕ ವಾಹನಗಳಾದ ಬಸ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳು ವಾಹನದ ಮೂಲ ದಾಖಲಾತಿ ಗಳೊಂದಿಗೆ ಕಚೇರಿಗೆ ಸರೆಂಡರ್ ಮಾಡಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕವೇ ವಾಹನ ಉಪಯೋಗಿಸಲು ಸಾಧ್ಯವಿದೆ. ವಾಹನದ ಬಾಕಿ ತೆರಿಗೆ ಪಾವತಿಸದೆ ಅಥವಾ ವಿನಾಯಿತಿ ಪಡೆಯದೆ, ಪೂರ್ವಾನುಮತಿ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸಿದಲ್ಲಿ ಕಚೇರಿಯ ವಿಶೇಷ ತಪಾಸಣೆ ಸಂದರ್ಭ ಸಿಕ್ಕಿಬಿದ್ದಲ್ಲಿ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್