ಆರೋಗ್ಯ ಕಾಪಾಡಬೇಕಾದ ವೆಟ್‌ವೆಲ್‌ಗಳೇ ಸಂಪೂರ್ಣ ರೋಗಗ್ರಸ್ತ
Team Udayavani, Feb 17, 2020, 5:57 AM IST
ಕಿನ್ನಿಮೂಲ್ಕಿ: ಇಂದ್ರಾಣಿ ತೀರ್ಥ ನದಿಯ ಇಂದಿನ ದುಃಸ್ಥಿತಿಗೆ ಯಾರು ಕಾರಣ ಎಂಬ ಪ್ರಶ್ನೆಯನ್ನು ಹುಡುಕಿಕೊಂಡು ಸಮಸ್ಯೆಯಾದ ಪ್ರದೇಶದಲ್ಲೆಲ್ಲ ತಿರುಗಾಡಿದಾಗ ಎಲ್ಲರೂ ಬೊಟ್ಟು ಮಾಡಿದ್ದು ನಗರಸಭೆ ಯಲ್ಲಿನ ವೆಟ್‌ವೆಲ್ ಮತ್ತು ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಕಳಪೆ ನಿರ್ವಹಣೆ ಬಗ್ಗೆ.
ಈ ಹಿನ್ನೆಲೆಯಲ್ಲಿ ಸುದಿನ ಅಧ್ಯ ಯನ ತಂಡ ಉಡುಪಿ ನಗರಸಭೆ ನಿರ್ವಹಿಸುತ್ತಿರುವ ವೆಟ್‌ವೆಲ್ ಮತ್ತು ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿತು. ಅಲ್ಲಿನ ಸ್ಥಿತಿ ಕಂಡು ಹೌಹಾರು ವುದಷ್ಟೇ ನಮಗೆ ಉಳಿದದ್ದು. ಯಾಕೆಂ ದರೆ, ಕನಿಷ್ಠ ಕಾಳಜಿಯಿಂದಲೂ ಆ ವೆಟ್‌ವೆಲ್‌ಗಳನ್ನು, ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ವಹಿಸು ತ್ತಿಲ್ಲ. ಈ ಬಗ್ಗೆ ನಗರಸಭೆ ತಲೆ ಕೆಡಿಸಿ ಕೊಂಡಂತೆಯೇ ತೋರುತ್ತಿಲ್ಲ.
ವೆಟ್‌ವೆಲ್ ಸ್ಥಿತಿ ಕೇಳಿ
ಉಡುಪಿ ನಗರಸಭೆ 4 ವೆಟ್‌ವೆಲ್‌ಗಳನ್ನು ಹೊಂದಿವೆ. ಕಿನ್ನಿಮೂಲ್ಕಿ, ನಾಯರ್‌ಕೆರೆ, ಬನ್ನಂಜೆ-ಕರಾವಳಿ ಬೈಪಾಸ್ ಬಳಿ ಹಾಗೂ ಮಠದಬೆಟ್ಟುವಿ ನಲ್ಲಿ ಅನುಕ್ರಮವಾಗಿ 25 ಎಚ್‌ಪಿ, 35 ಎಚ್‌ಪಿ, 170 ಎಚ್‌ಪಿ ಹಾಗೂ 180 ಎಚ್‌ಪಿ ಸಾಮರ್ಥ್ಯದ ಮೋಟಾರ್‌ಹೊಂದಲಾಗಿದೆ. ಈ ಪೈಕಿ ಒಂದು ಸ್ಟೇಷನ್‌ನಲ್ಲಿ ಮಾತ್ರ ಜನರೇಟರ್ ಇದೆ. ಉಳಿದಂತೆ ಎಲ್ಲೂ ಜನರೇಟರ್ ಇಲ್ಲ. ಒಂದು ಸ್ಟೇಷನ್ ಬಿಟ್ಟರೆ ಉಳಿದೆಡೆ ಎಲ್ಲೂ ಪರ್ಯಾಯ ಮೋಟಾರ್ ಇಲ್ಲ. ಆದರೆ ನಗರಸಭೆ ಅಧಿಕಾರಿಗಳ ಪ್ರಕಾರ ಎಲ್ಲ ಕಡೆ ಎಲ್ಲವೂ ಇದೆ !
ತಾಂತ್ರಿಕ ಪರಿಣತರು ಕೊಡುವ ಮಾಹಿತಿಯಂತೆ, ಒಮ್ಮೆ ಮೋಟಾರ್ ಕೆಟ್ಟರೆ ಅದನ್ನು ದುರಸ್ತಿಪಡಿಸಲು ಕನಿಷ್ಠ 10 ಗಂಟೆಗಳಾದರೂ ಬೇಕು. ಮೋಟಾರ್ ಸಮಸ್ಯೆಗೆ ತಕ್ಕಂತೆ ಸಮಯ ನಿರ್ಧಾರವಾಗುತ್ತದೆ. ಕೆಲವೊಮ್ಮೆ ದುರಸ್ತಿಗೆ ಸಂಬಂಧಿಸಿ ಬಿಡಿಭಾಗಗಳು ಸ್ಥಳೀಯವಾಗಿ ಸಿಕ್ಕರೆ ಪರವಾಗಿಲ್ಲ, ಇಲ್ಲವಾದರೆ ಬೆಂಗಳೂರು ಮತ್ತಿತರ ಕಡೆಯಿಂದ ತರಿಸಬೇಕು. ಅಲ್ಲಿಯ ವರೆಗೆ ಪರ್ಯಾಯ ಮೋಟಾರ್ ಇಲ್ಲದಿದ್ದರೆ ಏನೂ ಮಾಡುವಂತಿಲ್ಲ.
ಕಳಪೆ ನಿರ್ವಹಣೆ
ಇದು ಮಾತ್ರ ಸತ್ಯ. ನೀವು ಯಾವುದೇ ವೆಟ್‌ವೆಲ್‌ಗಳಿಗೆ ಹೋದರೂ ಕಾಣಸಿಗುವುದು ಆದರ ದುಃಸ್ಥಿತಿ ಮಾತ್ರ. ಯಂತ್ರಗಳೆಲ್ಲ ತುಕ್ಕು ಹಿಡಿದು, ಕುಸಿಯುವಂತಿವೆ. ಕಟ್ಟಡ ಮತ್ತು ಅದರ ಕಾಂಪೌಂಡ್ ಗೋಡೆಯೂ ಕುಸಿಯುವಂತಿದೆ. ಹೇಳು ವವರು, ಕೇಳುವವರು ಕಾಣಸಿಗುವುದಿಲ್ಲ. ಅಲ್ಲಿ ಜನರೇಟರ್ ವ್ಯವಸ್ಥೆಗೆ ಶೆಡ್ ಇದ್ದರೂ ಜನರೇಟರ್ ವ್ಯವಸ್ಥೆ ಇಲ್ಲ. ಒಂದು ವೆಟ್‌ವೆಲ್‌ಗೆ ತಂಡ ಭೇಟಿ ಕೊಟ್ಟಾಗ ಅಲ್ಲಿದ್ದ ತಾತ್ಕಾಲಿಕ ಸಿಬಂದಿಯೊಬ್ಬ ಕರೆಂಟ್ ಹೋದಾಗ ಏನು ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಏನುಮಾಡುವುದು. ಒಂದಷ್ಟು ಹೊತ್ತಿನಲ್ಲಿ ಕರೆಂಟ್ ಬಂದರೆ ಪರವಾಗಿಲ್ಲ. ಇಲ್ಲವಾದರೆ ನೇರ ನದಿಗೆ ಬಿಡಲೇಬೇಕು. ಬೇರೆ ವ್ಯವಸ್ಥೆ ಇಲ್ಲ’ ಎಂದರು. ಜನರೇಟರ್ ವ್ಯವಸ್ಥೆ ಇಲ್ಲವೆ ಎಂದು ಕೇಳಿದ್ದಕ್ಕೆ, ಇಲ್ಲ. ಅವೆಲ್ಲ ನಮಗೆ ಗೊತ್ತಿಲ್ಲ ಎಂದು ನುಣುಚಿಕೊಂಡರು.
ಈ ಉತ್ತರ ಉಳಿದ ವೆಟ್‌ವೆಲ್‌ಗಳಲ್ಲೂ ಬಂದಿತು. ಕೆಲವು ವೆಟ್‌ವೆಲ್‌ಗಳ ಸಿಬಂದಿ ತ್ಯಾಜ್ಯನೀರು ನೇರವಾಗಿ ನದಿಗೆ, ತೋಡಿಗೆ ಬಿಟ್ಟಾಗ ಎದುರಾಗುವ ಸಮಸ್ಯೆ ಕಂಡು ಪರ್ಯಾಯ ಮೋಟಾರ್ ಹಾಗೂ ಜನರೇಟರ್ ವ್ಯವಸ್ಥೆಗೆ ನಗರಸಭೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ನಗರಸಭೆ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ. ಮೂರು ವೆಟ್‌ವೆಲ್‌ಗಳಲ್ಲಿ ಯಾವ ಪರ್ಯಾಯ ವ್ಯವಸ್ಥೆಯೂ ಇಲ್ಲದಿರುವುದು ಈ ಆರೋಪಕ್ಕೆ ಪುಷ್ಟಿ ನೀಡಿದೆ.
ಒಂದು ವರ್ಷವಾದರೂ ಬರಬೇಕು
ಸಾಮಾನ್ಯವಾಗಿ ಒಮ್ಮೆ ದುರಸ್ತಿ ಮಾಡಿದರೆ ಪಂಪ್‌ಗ್ಳು ಕನಿಷ್ಠವೆಂದರೂ ಒಂದು ವರ್ಷವಾದರೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿರುವ ಪಂಪ್‌ಗ್ಳು ಕೇವಲ ಐದೇ ತಿಂಗಳಿಗೆ ದುರಸ್ತಿಗೆ ಒಳಗಾಗುತ್ತಿವೆ. ಇದಕ್ಕೆ ನಿರ್ವಹಣೆ ಕೊರತೆಯೇ ಕಾರಣ ಎನ್ನಲಾಗುತ್ತಿದೆ.
ಯಾವ ರೀತಿಯ ನಿರ್ವಹಣೆ?
ವಿವಿಧ ಭಾಗಗಳ ತ್ಯಾಜ್ಯ ನೀರಿನೊಂದಿನ ಘನತ್ಯಾಜ್ಯ ವಸ್ತುಗಳು ಪೈಪ್‌ಲೈನ್ ಮೂಲಕ ವೆಟ್‌ವೆಲ್‌ಗೆ ಸೇರುತ್ತವೆ. ಇನ್ನರ್‌ವೆಲ್ ಪಂಪ್‌ಗೆ ಹೋಗುವ ಮಧ್ಯೆ ಅಳವಡಿಸಲಾದ ಕಬ್ಬಿಣದ ನೆಟ್(ಸ್ಟಾಕ್‌ನೆಟ್) ನಲ್ಲಿ ಘನ ತ್ಯಾಜ್ಯಗಳು ಸಂಗ್ರಹವಾಗುತ್ತವೆ. ಅದನ್ನು ನಿತ್ಯವೂ ಶುಚಿಗೊಳಿಸದೇ ಇದ್ದರೆ ಅದು ಪಂಪ್‌ಗೆ ನೇರವಾಗಿ ಸಾಗಿ ಕೊಳಚೆ ನೀರು ಬ್ಲಾಕ್ ಆಗಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತವೆ. ಕೆಲವೊಮ್ಮೆ ತ್ಯಾಜ್ಯ ನೀರಿನ ಅಧಿಕ ಒತ್ತಡದಿಂದಾಗಿಯೂ ನೆಟ್ ಹರಿದು ಹೋಗಿ ತ್ಯಾಜ್ಯಗಳು ಪಂಪ್‌ನಲ್ಲಿ ಸಿಕ್ಕಿ ಬೀಳುತ್ತವೆ. ಹೀಗಾಗಿ ಪಂಪ್‌ಗ್ಳ ಬಾಳಿಕೆಯ ಅವಧಿ ಕುಸಿಯುತ್ತದೆ.
ಉಡುಪಿ ಸಮಸ್ಯೆಯೇನು?
ಉಡುಪಿ ವೆಟ್‌ವೆಲ್‌ಗಳಲ್ಲಿ ಗ್ರೀವ್ ಚೇಂಬರ್ 3 ತಿಂಗಳಿಗೊಮ್ಮೆ ಹಾಗೂ ಪ್ರತಿನಿತ್ಯ (ಸ್ಟಾಕ್‌ನೆಟ್) ಕಬ್ಬಿಣ ನೆಟ್‌ಅನ್ನು ಶುಚಿಗೊಳಿಸುತ್ತಿಲ್ಲ. ಇದರಿಂದ ಕಸಕಡ್ಡಿ, ಘನತ್ಯಾಜ್ಯಗಳು ಪಂಪ್‌ಗೆ ಸಿಲುಕಿ ಹಾಳಾಗುವುದು ಸಾಮಾನ್ಯವಾಗಿದೆ. ವೆಟ್‌ವೆಲ್‌ನಲ್ಲಿ ಕೆಲಸ ನಿರ್ವಹಿಸುವ ಸಿಬಂದಿ ಮೋಟಾರ್‌ಗಳನ್ನು ಸ್ವಯಂ ಚಾಲಿತ (ಆಟೋಮ್ಯಾಟಿಕ್) ಸ್ಥಿತಿಗೆ ಇರಿಸಿ ಹೋಗುವುದರಿಂದ ಮೋಟಾರ್‌ನಲ್ಲಿ ಉಂಟಾಗುವ ವ್ಯತಿರಿಕ್ತ ಶಬ್ದ ಹಾಗೂ ಇತರೆ ವ್ಯತ್ಯಾಸಗಳನ್ನು ಗಮನಿಸುವುದಿಲ್ಲ. ಈ ರೀತಿ ಬೇಕಾಬಿಟ್ಟಿಯಾಗಿ ಮೋಟಾರ್‌ನ್ನು ಓಡಿಸುವುದರಿಂದ ಅವು ಬಹುಬೇಗ ಸುಟ್ಟು ಹೋಗುತ್ತಿವೆ ಮತ್ತು ಕೆಡುತ್ತಿವೆ.
ಪ್ರಸ್ತುತ ಇಲ್ಲಿನ ವೆಟ್‌ವೆಲ್‌ಗಳಲ್ಲಿರುವುದು ಸಬ್‌ಮರ್ಸಿಬಲ್ ಪಂಪ್‌ಗ್ಳು. ಈ ಪಂಪ್‌ಗ್ಳು ನೀರಿನೊಳಗೆ ಇರುವುದರಿಂದಾಗಿ ಸಂಪೂರ್ಣವಾಗಿ ಹಾಳಾಗುವವರೆಗೂ ಯಾವುದೇ ಮುನ್ಸೂಚನೆ ದೊರಕದು. ಪಂಪ್‌ಗ್ಳು ಹಾಳಾದರೆ ದುರಸ್ತಿ ಮಾಡಲು ಕನಿಷ್ಟವೆಂದರೂ ಎರಡರಿಂದ ಮೂರು ದಿನಗಳು ತಗಲುತ್ತವೆ. ಪಂಪ್ ರಿಪೇರಿಗೆ ದ.ಕ. ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಿದ್ದು, ಅವರು ಬಂದು ದುರಸ್ತಿಗೊಳಿಸಬೇಕು. ಎಲ್ಲ ವೆಟ್‌ಗಳಲ್ಲಿ ಒಂದೇ ಪಂಪ್ ಇರುವುದರಿಂದ ಪಂಪ್ ಹಾಳಾದರೆ ಕೊಳಚೆ ನೀರನ್ನೇ ನೇರವಾಗಿ ಇಂದ್ರಾಣಿ ನದಿಗೆ ಬಿಡಲೇಬೇಕು. ಬೇರೆ ಮಾರ್ಗವೇ ಇಲ್ಲವಾಗಿದೆ.
ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ನಿರ್ವಹಣೆಯಲ್ಲಿ ವೆಟ್‌ವೆಲ್‌ಗಳ ಪಾತ್ರ ಬಹಳ ಮಹತ್ವದ್ದು. ಅವುಗಳು ಸಕ್ರಿಯ ಮತ್ತು ಸುಸ್ಥಿರವಾಗಿದ್ದಷ್ಟು ಇಂದ್ರಾಣಿ ತೀರ್ಥ ನದಿಯಂಥ ಜಲಮೂಲಗಳ ಆರೋಗ್ಯ ಕಾಪಾಡಬಹುದು. ಹಾಗಾಗಿ ದ್ರವತ್ಯಾಜ್ಯ ನಿರ್ವಹಣೆಯ ಆರೋಗ್ಯವನ್ನು ಕಾಪಾಡುವ ಉಡುಪಿ ನಗರಸಭೆಯ ವೆಟ್‌ವೆಲ್‌ಗಳ ಆರೋಗ್ಯವೇ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಹಾಗಾಗಿಯೇ ಇಂದ್ರಾಣಿ ತೀರ್ಥ ನದಿಯ ಆರೋಗ್ಯಕ್ಕೂ ಗರ ಬಡಿದಿದೆ.
ವೆಟ್‌ವೆಲ್ ಎಂದರೇನು?
ವೆಟ್‌ವೆಲ್ ಎಂದರೆ ಸರಳವಾಗಿ
ಹೇಳುವುದಾದರೆ ದೊಡ್ಡ ಬಾವಿಗಳು. ಅಲ್ಲಿಗೆ ಒಳಚರಂಡಿಯ ಸಂಪರ್ಕಗಳನ್ನು ಕಲ್ಪಿಸಲಾಗಿರುತ್ತದೆ. ನಗರದ ವಿವಿಧ ಭಾಗಗಳಿಂದ ಒಳಚರಂಡಿ ಮೂಲಕ ಬರುವ ತ್ಯಾಜ್ಯ ನೀರು ಮೊದಲಿಗೆ ಈ ವೆಟ್‌ವೆಲ್‌ಗಳಲ್ಲಿ ಸಂಗ್ರಹವಾಗುತ್ತದೆ. ಅದಾದ ಬಳಿಕ ಅಲ್ಲಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಅಲ್ಲಿ ಶುದ್ಧೀಕರಿಸಿ ಹೊರಬಿಡಲಾಗುತ್ತದೆ. ಈ ವೆಟ್‌ವೆಲ್ ಸುಸ್ಥಿರವಾಗಿರಬೇಕೆಂದರೆ, ದಿನಪೂರ್ತಿ ಕರೆಂಟ್ ವ್ಯವಸ್ಥೆ, ನಿಯಮಿತ ನಿರ್ವಹಣೆ, ಪರ್ಯಾಯ ಮೋಟಾರ್ ವ್ಯವಸ್ಥೆ ಹಾಗೂ ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲಿ ಪರಿಸ್ಥಿತಿ ನಿಭಾವಣೆಗೆ ಜನರೇಟರ್‌ಗಳು ಇರಬೇಕು. ಇವೆಲ್ಲವೂ ಇದ್ದಾಗ ಮಾತ್ರ ಈ ವೆಟ್‌ವೆಲ್‌ನಿಂದ ಪ್ರಯೋಜನ.
ಈಗ ಏನಾಗುತ್ತಿದೆ?
ಪ್ರಸ್ತುತ ಇರುವ ವೆಟ್‌ವೆಲ್‌ಗಳು ಸುಸಜ್ಜಿತವಾಗಿಲ್ಲ. ಒಂದೆಡೆ ಜನ ರೇಟರ್ ಇಲ್ಲವಾದರೆ, ಮತ್ತೂಂದೆಡೆ ಪರ್ಯಾಯ ಮೋಟಾರ್ ವ್ಯವಸ್ಥೆ ಇಲ್ಲ. ಮಗದೊಂದು ಕಡೆ ತೀರ ಕಳಪೆ ನಿರ್ವಹಣೆ. ಮತ್ತೂ ಹಲ ವೆಡೆ ಸಿಬಂದಿಯದ್ದೇ ಸಮಸ್ಯೆ. ಇವೆಲ್ಲದರ ಪರಿಣಾಮ, ತ್ಯಾಜ್ಯ ನೀರು ನೇರವಾಗಿ ಇಂದ್ರಾಣಿ ನದಿಗೆ ಹರಿಯುವಂತಾಗಿದೆ. ಉದಾ ಹರಣೆ 1-ವೆಟ್‌ವೆಲ್ ಒಂದರಲ್ಲಿ ಮೋಟಾರ್ ಕಾರ್ಯನಿರ್ವಹಿಸು ತ್ತಿರುವಾಗ ಆಕಸ್ಮಿಕವಾಗಿ ಕರೆಂಟ್ ಹೋಗುತ್ತದೆ. ಆಗ ಸ್ವಲ್ಪ ಹೊತ್ತಲ್ಲೇ ಜನರೇಟರ್ ಚಾಲೂ ಮಾಡಿ, ನಿರ್ವಹಿಸಬೇಕು. ಜನ ರೇಟರ್ ಇಲ್ಲದಿದ್ದರೆ ಕರೆಂಟ್ ಬರುವವರೆಗೆ ಕೈಕಟ್ಟಿ ಕುಳಿತುಕೊಳ್ಳ ಬೇಕು.
ಕರೆಂಟ್ ಇಲ್ಲದ ಮತ್ತು ಜನರೇಟರ್ ಇಲ್ಲದ ಕಾರಣ ವೆಟ್‌ವೆಲ್‌ನಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ನೀರನ್ನು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲು ಆಗುವುದಿಲ್ಲ. ಆಗ ವೆಟ್‌ವೆಲ್ ತುಂಬಿ ಕೊಳ್ಳತೊಡಗುತ್ತದೆ. ಅದು ಪೂರ್ತಿ ತುಂಬಿ ಉಕ್ಕಿ ಹರಿಯುವಾಗ ಏನೂ ಮಾಡಲಾಗದು. ನೇರವಾಗಿ ಇಂದ್ರಾಣಿ ನದಿ ತೀರ್ಥಕ್ಕೆ ಬಿಡ ಬೇಕು. ಹಾಗೆಯೆ ಪೈಪ್‌ಗ್ಳನ್ನು ಅಳ ವಡಿಸಲಾಗಿದೆ. ಉದಾಹರಣೆ 2- ತೀರಾ ಕಳಪೆ ನಿರ್ವಹಣೆಯಿಂದ ಕೆಲವೊಮ್ಮೆ ಮೋಟಾರ್ ಹಾಳಾಗಿ ಬಿಡುತ್ತದೆ. ಆಗ ಪರ್ಯಾಯ ಮೋಟಾರ್ ಇದ್ದರೆ ಕೂಡಲೇ ತಾಂತ್ರಿಕ ಪರಿಣತರನ್ನು ಕರೆಸಿ ಅಳ ವಡಿಸಬೇಕು. ಅದಕ್ಕೆ ಸಮಯ ನಿಗದಿಪಡಿಸಲಾಗದು. ಎರಡರಿಂದ 3 ದಿನ ತಗಲಬಹುದು. ಒಂದು ವೇಳೆ ಪರ್ಯಾಯ ಮೋಟಾರ್ ಇಲ್ಲದಿದ್ದರೆ ಏನೂ ಮಾಡುವಂತಿಲ್ಲ. ವೆಟ್‌ವೆಲ್ ಸಂಪೂರ್ಣ ಖಾಲಿ ಯಿದ್ದರೆ ತುಂಬಲು ಕನಿಷ್ಠ 30 ನಿಮಿಷ ಬೇಕು. ಇಲ್ಲವಾದರೆ 15 ನಿಮಿಷದೊಳಗೇ ಅದು ಉಕ್ಕಿ ಹರಿಯುತ್ತದೆ. ಹೀಗೆ ಹರಿದದ್ದೆಲ್ಲ ಹೋಗುವುದು ಇಂದ್ರಾಣಿ ತೀರ್ಥ ನದಿಗೆ ಅಥವಾ ಮಳೆ ನೀರು ಹರಿದು ಹೋಗುವ ತೋಡಿಗೆ.
ಪರಿಹಾರವೇನು?
ನಾಲ್ಕು ವೆಟ್‌ವೆಲ್‌ಗಳಿಗೆ ಡ್ರೈ ಪಂಪ್ ಅಳವಡಿಸಿ, ಅವುಗಳನ್ನು ಅಲ್ಲಿನ ಸಿಬಂದಿ ಸರಿಯಾಗಿ ನಿರ್ವಹಿಸಿದರೆ ಪಂಪ್ ಕೆಡುವ ಸಮಸ್ಯೆ ಶೇ. 90 ರಷ್ಟು ಕಡಿಮೆ ಮಾಡಲು ಸಾಧ್ಯ. ಇದರೊಂದಿಗೆ ಸಾಕಷ್ಟು ಸಾಮರ್ಥ್ಯದ ಜನರೇಟರ್ ಅಳವಡಿಸಿದರೆ ಸಮಸ್ಯೆಯನ್ನು ನಿರ್ವಹಿಸಬಹುದು. ಆಗ ಕೊಳಚೆ ನೀರು ಕರೆಂಟ್ ಇಲ್ಲದಿದ್ದಾಗ ಮತ್ತು ಪಂಪ್ ಕೆಟ್ಟು ಹೋದಾಗ ನೇರವಾಗಿ ಇಂದ್ರಾಣಿ ನದಿಗೆ ಬಿಡುವ ಸಮಸ್ಯೆ ತಪ್ಪುತ್ತದೆ. ಈ ಮೋಟಾರ್‌ಗಳಿಗೆ ಕನಿಷ್ಠ 8ರಿಂದ 10 ಲಕ್ಷ ರೂ. ತಗಲಬಹುದು. ಆದರೆ ಈ ಪರಿಹಾರ ಅಂಗೈಯಲ್ಲೇ ಇದ್ದರೂ ಜಾರಿಗೊಳಿಸದಿರುವುದು ನಗರಸಭೆಯ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತಿದೆ. ಅಷ್ಟೇ ಅಲ್ಲ ; ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಬಗ್ಗೆಯೂ ನಾಗರಿಕರು ಬೇಸರಪಡುವಂತಾಗಿದೆ.
ನಿಮ್ಮ ಅಭಿಪ್ರಾಯ ಕಳುಹಿಸಿ 7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.