ಶಿಸ್ತುಬದ್ಧರಾಗಿಯೂ ಜನಪ್ರೀತಿ ಗಳಿಸಿದ ಸಾಧಕ: ವಿವೇಕ ರೈ


Team Udayavani, Aug 13, 2017, 7:15 AM IST

13-REP-2.jpg

ಕುಂದಾಪುರ: ಸಾಮಾನ್ಯವಾಗಿ ಬಹಳ ಶಿಸ್ತುಬದ್ಧರಾಗಿ ಜೀವನ ನಡೆಸುವವರು ಜನರಿಂದ ದೂರವಿರುತ್ತಾರೆ. ಪರಂಪರೆಯಲ್ಲಿ ಅಭಿಮಾನವುಳ್ಳವರು ಆಧುನಿಕತೆ ಯನ್ನು ನಿರಾಕರಿಸು ತ್ತಾರೆ ಹಾಗೂ ಸಮುದಾಯದಿಂದ ದೂರವಿರುತ್ತಾರೆ ಎನ್ನುವುದು ಪ್ರತೀತಿ. ಆದರೆ ಇದಕ್ಕೆ ಭಿನ್ನವಾಗಿರುವ
ಡಾ| ಶಾಂತಾರಾಮ್‌ ಅವರು ಇವುಗಳನ್ನೆಲ್ಲ ಮೀರಿ ಜನರ ನಡುವೆಯೇ ಸಾಧನೆ ಮಾಡಿ ತೋರಿದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅವರು ಹೇಳಿದರು.

ಅವರು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಸ್ವಪ್ನಶಿಲ್ಪಿ ಡಾ| ಎಚ್‌. ಶಾಂತಾರಾಮ್‌ ಅವರ ತೊಂಬತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆಯುವ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನ ಎನ್ನುವುದು ಪುಸ್ತಕದ ಮೂಲಕ, ರಂಗದ ಮೂಲಕ ಹಾಗೂ ರಂಗದ ಹೊರಗಡೆ ಹೀಗೆ ಮೂರು ನೆಲೆಗಳಲ್ಲಿ ದೊರೆಯುವಂತಹದು. ಈ ಮೂರು ನೆಲೆಗಳಲ್ಲಿ ಜ್ಞಾನ ಸಂಪಾ ದನೆ ಮಾಡದೇ ಹೋದಲ್ಲಿ ನಮ್ಮ ಶಿಕ್ಷಣ ಎನ್ನುವುದು ಪದವಿಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತ ವಾಗುತ್ತದೆ ಎನ್ನುವುದನ್ನು ನಂಬಿಕೊಂಡು ಬಂದವರು ಡಾ| ಶಾಂತಾರಾಮ್‌ ಅವರು ಎಂದು ವಿವೇಕ ರೈ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಡಾ| ಶಾಂತಾರಾಮರ ನೇರನುಡಿ, ಸಹನೆ, ಉನ್ನತ ವ್ಯಕ್ತಿತ್ವ ಯಾವುದೇ ಸಮಸ್ಯೆಯನ್ನು ಸಲೀಸಾಗಿ ಪರಿಹರಿಸು ವಲ್ಲಿ ಸಹಕಾರಿಯಾಗಿದೆ. ಇಂತಹ ಗುಣ ವಿಶೇಷಗಳು ಇರುವು ದರಿಂದಲೇ ಅವರು ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ರೋಟರಿ ಡಿಜಿಪಿಎಚ್‌ಎಫ್‌ ಜಿ.ಎನ್‌. ಪ್ರಕಾಶ್‌, ಯಕ್ಷಗಾನ ಕಲಾವಿದ ಶ್ರೀಧರ ಹಂದೆ, ಗಮಕ ಕಲಾವಿದ ಡಾ| ಎ.ವಿ. ಪ್ರಸನ್ನ, ಲೇಖಕ ಶಿವಾನಂದ ಕಾರಂತ ಅವರು ಡಾ| ಶಾಂತಾರಾಮರ ಕುರಿತು ನೆನಪಿನ ಮಾತುಗಳನ್ನಾಡಿದರು. ಸಾಂಕ ಯತ್ನ ಹುಟ್ಟುಹಬ್ಬದ ಅಭಿನಂದನೆ ಸ್ವೀಕರಿ ಸಿದ ಡಾ| ಶಾಂತಾರಾಮ್‌ ಅವರು ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸುತ್ತ, ಯಾವುದೇ ಓರ್ವ ವ್ಯಕ್ತಿಯಿಂದ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಎಲ್ಲರ ಸಾಂಘಿಕ ಕೊಡುಗೆಯಿಂದ ಈ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ವಿದ್ಯಾರ್ಥಿವೇತನ ವಿತರಿಸಲಾ ಯಿತು. ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ| ರೇಖಾ ವಿ. ಬನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಪ.ಪೂ. ಕಾಲೇಜಿನ ಪ್ರಾಂಶು ಪಾಲ ಜಿ.ಎಂ. ಗೊಂಡ ವಂದಿಸಿದರು. ಮಧ್ಯಾಹ್ನ ಗಮಕ ಕಲಾವಿದ ಡಾ| ಎ.ವಿ. ಪ್ರಸನ್ನ ಮತ್ತು ನಿರ್ಮಲಾ ಪ್ರಸನ್ನ ಅವರಿಂದ ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಯಿತು.

ಚಿನ್ನದ ಪದಕ ಘೋಷಣೆ
ಭಂಡಾರ್‌ಕಾರ್ಸ್‌ ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ವಿದ್ಯಾರ್ಥಿಗೆ ಶಾಂತಾರಾಮ್‌ ಅವರ ಕುಟುಂಬದವರಿಂದ “ಡಾ| ಶಾಂತಾರಾಮ ನಮಿತಿ’ ಚಿನ್ನದ ಪದಕ ನೀಡುವುದಾಗಿ ಡಾ| ಎಚ್‌. ಶಾಂತಾರಾಮ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.