Udupi: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಪರೀಕ್ಷೆ: ಜಿಲ್ಲಾಧಿಕಾರಿ ಸೂಚನೆ

Team Udayavani, Sep 27, 2024, 12:58 AM IST

Udupi: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಪರೀಕ್ಷೆ: ಜಿಲ್ಲಾಧಿಕಾರಿ ಸೂಚನೆ

ಮಣಿಪಾಲ: ಜಿಲ್ಲೆಯಲ್ಲಿ ಸೆ.29ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನಡೆಯಲಿರುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯನ್ನು ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೆ ಪಾರದರ್ಶಕ, ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಗುರುವಾರ ಪರೀಕ್ಷೆಯ ಪೂರ್ವ ಸಿದ್ಧತೆ ಸಂಬಂಧಿಸಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾದ್ಯಂತ 17 ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀûಾರ್ಥಿಗಳು ಕೇಂದ್ರದಲ್ಲಿ ತಪಾಸಣೆ ನಡೆಸುವ ಸಿಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೆ ಒಳಗಾಗುವುದು ಕಡ್ಡಾಯ ಎಂದರು.

ಮೊಬೈಲ್‌, ಟ್ಯಾಬ್ಲೆಟ್‌, ಪೆನ್‌ಡ್ರೈವ್‌, ಬ್ಲೂಟೂತ್‌ ಡಿವೈಸ್‌, ಸ್ಮಾರ್ಟವಾಚ್‌, ಕ್ಯಾಲ್ಕುಲೇಟರ್‌ ಮತ್ತು ಇತರ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್‌ ಟೇಬಲ್ಸ್‌ ಇನ್ನಿತರ ಯಾವುದೇ ರೀತಿಯ ಉಪಕರಣಗಳನ್ನು ಕೊಂಡೊಯ್ಯು ವಂತಿಲ್ಲ. ಹೀಯರಿಂಗ್‌ ಏಡ್‌ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದರು.

ಅಭ್ಯರ್ಥಿಗಳು ಶೂ, ಸಾಕ್ಸ್‌ಗಳನ್ನು ಧರಿಸುವಂತಿಲ್ಲ. ತುಂಬು ತೋಳಿನ ಶರ್ಟ್‌, ಕುರ್ತಾ ಪೈಜಾಮ್‌, ಜೀನ್ಸ್‌ ಪ್ಯಾಂಟ್‌, ಯಾವುದೇ ಆಭರಣ, ಮೆಟಲ್‌ ಮತ್ತು ನಾನ್‌ ಮೆಟಲ್‌ (ಮಂಗಳ ಸೂತ್ರ ಹಾಗೂ ಕಾಲುಂಗುರ ಹೊರತುಪಡಿಸಿ) ಪುಲ್ಲೋವರ್ಸ್‌, ಜಾಕೆಟ್‌ ಮತ್ತು ಸ್ವೆಟರ್ಸ್‌, ಮಾಸ್ಕ್, ಟೋಪಿ ಧರಿಸುವಂತಿಲ್ಲ.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌, ಬಿಇಒ ಡಾ| ಯಲ್ಲಮ್ಮ, ತಹಶೀಲ್ದಾರ್‌ಗಳು, ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

CT Ravi

CT Ravi ಪ್ರಕರಣ: ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್‌

DR SUDHA

UGCಗೆ ಸೆಡ್ಡು: ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ

Athlete Award: ಕರ್ನಾಟಕ ಕ್ರೀಡಾಕೂಟ; ನಿಯೋಲೆ, ಜಾಫ‌ರ್‌ ಶ್ರೇಷ್ಠ ಆ್ಯತ್ಲೀಟ್ಸ್‌

Athlete Award: ಕರ್ನಾಟಕ ಕ್ರೀಡಾಕೂಟ; ನಿಯೋಲೆ, ಜಾಫ‌ರ್‌ ಶ್ರೇಷ್ಠ ಆ್ಯತ್ಲೀಟ್ಸ್‌

Under-19 ವನಿತಾ ಟಿ20 ವಿಶ್ವಕಪ್‌; ಶ್ರೀಲಂಕಾಕ್ಕೆ ಸೋಲು; ಸೂಪರ್‌ 6 ಹಂತಕ್ಕೇರಿದ ಭಾರತ

Under-19 ವನಿತಾ ಟಿ20 ವಿಶ್ವಕಪ್‌; ಶ್ರೀಲಂಕಾಕ್ಕೆ ಸೋಲು; ಸೂಪರ್‌ 6 ಹಂತಕ್ಕೇರಿದ ಭಾರತ

Ranji: ಕೌಶಿಕ್‌,ಅಭಿಲಾಷ್‌,ಪ್ರಸಿದ್ಧ್ ಘಾತಕ ಬೌಲಿಂಗ್‌: ಕರ್ನಾಟಕದ ದಾಳಿಗೆ ಪಂಜಾಬ್‌ ತತ್ತರRanji: ಕೌಶಿಕ್‌,ಅಭಿಲಾಷ್‌,ಪ್ರಸಿದ್ಧ್ ಘಾತಕ ಬೌಲಿಂಗ್‌: ಕರ್ನಾಟಕದ ದಾಳಿಗೆ ಪಂಜಾಬ್‌ ತತ್ತರ

Ranji: ಕೌಶಿಕ್‌,ಅಭಿಲಾಷ್‌,ಪ್ರಸಿದ್ಧ್ ಘಾತಕ ಬೌಲಿಂಗ್‌: ಕರ್ನಾಟಕದ ದಾಳಿಗೆ ಪಂಜಾಬ್‌ ತತ್ತರ

FIDE Rankings: 4ನೇ ಸ್ಥಾನದಲ್ಲಿ ಗುಕೇಶ್‌

FIDE Rankings: 4ನೇ ಸ್ಥಾನದಲ್ಲಿ ಗುಕೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sand

Manipal: ಪಡುತೋನ್ಸೆ: ಮರಳು ಅಕ್ರಮ ಸಾಗಾಟ ಪತ್ತೆ

Assault-Image

Manipal: ಮಲ್ಪೆ ಬೀಚ್‌ ಬಳಿ ಹಲ್ಲೆಗೈದು ಜೀವಬೆದರಿಕೆ; ದೂರು

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

kmc

Manipal: ಕೆಎಂಸಿಗೆ ಪ್ರತಿಷ್ಠಿತ ಸ್ಪಾರ್ಕ್‌ ಅನುದಾನ

1-wddsa

ಗೋವುಗಳ ಸುರಕ್ಷೆಗಾಗಿ ಶ್ರೀ ಕೃಷ್ಣ ಮಠದಲ್ಲಿ ಪಾರಾಯಣ,ಜಪಕ್ಕೆ ಚಾಲನೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Sand

Manipal: ಪಡುತೋನ್ಸೆ: ಮರಳು ಅಕ್ರಮ ಸಾಗಾಟ ಪತ್ತೆ

Assault-Image

Manipal: ಮಲ್ಪೆ ಬೀಚ್‌ ಬಳಿ ಹಲ್ಲೆಗೈದು ಜೀವಬೆದರಿಕೆ; ದೂರು

police

ಕಸ್ಟಡಿ ಅಂತ್ಯ: ಶರಣಾಗತ ನಕ್ಸಲರನ್ನು ಬೆಂಗಳೂರಿಗೆ ಕರೆದೊಯ್ದ ಪೊಲೀಸರು

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

CT Ravi

CT Ravi ಪ್ರಕರಣ: ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.