ಮೂರು ಗ್ರಾ.ಪಂ.ಗಳ ಉಪ ಚುನಾವಣೆ: ಜ. 2ರಂದು ಮತದಾನ
Team Udayavani, Jan 1, 2019, 8:55 PM IST
ಕುಂದಾಪುರ: ಗಂಗೊಳ್ಳಿ ಗ್ರಾ.ಪಂ.ಗೆ ಜ. 2ರಂದು ಚುನಾವಣೆ ನಡೆಯಲಿದ್ದು, ಮತದಾನ ಪ್ರಕ್ರಿಯೆಗೆ ಮಂಗಳವಾರ ಅಂತಿಮ ಹಂತದ ಸಿದ್ಧತೆ ನಡೆಯಿತು. ಕುಂದಾಪುರದ ಮಿನಿ ವಿಧಾನ ಸೌಧದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಮಸ್ಟರಿಂಗ್ ಕಾರ್ಯ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯಿತು. ಬಳಿಕ ಎಲ್ಲ ಮತಗಟ್ಟೆ ಅಧಿಕಾರಿಗಳನ್ನು ಆಯಾಯ ಮತಗಟ್ಟೆಗೆ ಕಳುಹಿಸಿಕೊಡಲಾಯಿತು.
ಇವಿಎಂ ಬಳಕೆ
ಗಂಗೊಳ್ಳಿ, ಬೈಂದೂರು ಹಾಗೂ ಯಡ್ತರೆ ಗ್ರಾ.ಪಂ. ಚುನಾವಣೆಗೆ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತ ಯಂತ್ರ ಬಳಸಲಾಗುತ್ತಿದೆ. ಗಂಗೊಳ್ಳಿ ಗ್ರಾ.ಪಂ.ನ ಗಂಗೊಳ್ಳಿಯಲ್ಲಿ 8 ಕ್ಷೇತ್ರಗಳಿಗೆ ಒಟ್ಟು 12 ಮತಗಟ್ಟೆಗಳಿರಲಿದ್ದು, ಅದರಲ್ಲಿ 1-2 ಹಾಗೂ 5-6 ನೇ ಕ್ಷೇತ್ರಗಳಿಗೆ ತಲಾ ಎರಡು ಮತಗಟ್ಟೆ, ಬಾಕಿ ಉಳಿದದ್ದಕ್ಕೆ ತಲಾ 1 ಮತಗಟ್ಟೆ ಇರಲಿದೆ. ಒಟ್ಟು 33 ಸ್ಥಾನಗಳಲ್ಲಿ 85 ಮಂದಿ ಕಣದಲ್ಲಿದ್ದಾರೆ.
ಒಟ್ಟು ಇರುವ 12 ಮತಗಟ್ಟೆಗಳ ಪೈಕಿ 9 ಸೂಕ್ಷ್ಮ ಮತಗಟ್ಟೆಗಳು ಹಾಗೂ 3 ಅತಿಸೂಕ್ಷ್ಮ ಮತಗಟ್ಟೆಗಳನ್ನಾಗಿ ವಿಂಗಡಿಸಲಾಗಿದೆ. ಬಂದರು ಪ್ರದೇಶವಿರುವ ಗಂಗೊಳ್ಳಿಯಲ್ಲಿ ಒಟ್ಟು 10,456 ಮಂದಿ ಮತದಾರರಿದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದು, ಒಟ್ಟು ಇರುವ 33 ಸ್ಥಾನಗಳ ಪೈಕಿ 17ರಲ್ಲಿ ಮಹಿಳೆಯರು ಹಾಗೂ 16ರಲ್ಲಿ ಪುರುಷರಿಗೆ ಮೀಸಲಾತಿಯನ್ನು ನೀಡಲಾಗಿದೆ. ಒಟ್ಟು ಇರುವ 12 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆ 5 ಮಂದಿ ಅಧಿಕಾರಿಗಳು ಹಾಗೂ ತಲಾ ಇಬ್ಬರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶವಾದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಯಡ್ತರೆ, ಬೈಂದೂರು ಗ್ರಾ.ಪಂ.
ಬೈಂದೂರು: ಇಲ್ಲಿನ ವಿಧಾನ ಸಭಾ ಕ್ಷೇತ್ರದ ಯಡ್ತರೆ, ಬೈಂದೂರು ಗ್ರಾಮ ಹಾಗೂ ಕೆರ್ಗಾಲು ಗ್ರಾಮದ ಒಂದು ವಾರ್ಡ್‌ನ ಉಪ ಚುನಾವಣೆ ಜ. 2ರಂದು ನಡೆಯಲಿದೆ. ಬೈಂದೂರು ತಹಶೀಲ್ದಾರ ಮುಂದಾಳತ್ವದಲ್ಲಿ ಈಗಾಗಲೇ ಚುನಾವಣೆ ತಯಾರಿಯ ಎಲ್ಲ ಕಾರ್ಯಗಳು ಮುಗಿದಿವೆ. ಮಸ್ಟ್ ರಿಂಗ್ ಹಾಗೂ ಡಿಮಸ್ಟ್ ರಿಂಗ್ ಸೇರಿದಂತೆ ಮತ ಎಣಿಕೆ ಬೈಂದೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಯಡ್ತರೆ ಗ್ರಾ.ಪಂ.ನಲ್ಲಿ 25 ವಾರ್ಡ್ ಗಳಿಗೆ ಒಟ್ಟು 68 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 2 ಅರ್ಜಿಗಳು ತಿರಸ್ಕೃತಗೊಂಡಡಿವೆೆ. 8 ಅಭ್ಯರ್ಥಿಗಳ ನಾಮಪತ್ರ ಹಿಂತೆಗೆದುಕೊಂಡು ಒಟ್ಟೂ 58 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೈಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 21 ವಾರ್ಡ್ ಗಳಿಗೆ ಒಟ್ಟು 64ನಾಮಪತ್ರ ಸಲ್ಲಿಕೆಯಾಗಿದ್ದವು. 3 ನಾಮಪತ್ರಗಳು ತಿರಸ್ಕೃತಗೊಂಡಿವೆ. 7 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, 54 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಡ್ತರೆ ಗ್ರಾ.ಪಂ.ನಲ್ಲಿ 9 ಮತಗಟ್ಟೆ ಹಾಗೂ ಬೈಂದೂರು ಗ್ರಾಮದಲ್ಲಿ 10 ಮತಗಟ್ಟೆಗಳನ್ನು ತೆರೆಯಲಾಗಿದೆ. ಕೆರ್ಗಾಲು 4ನೇ ವಾರ್ಡ್‌ನ ಉಪಚುನಾವಣೆಗೆ 1 ಮತಗಟ್ಟೆ ಇದೆ. ಒಟ್ಟು 95 ಅಧಿಕಾರಿಗಳು, ತಲಾ 1 ಆರಕ್ಷಕರು ಹಾಗೂ 2 ಮೀಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.
ಎಡಗೈ ಮಧ್ಯದ ಬೆರಳಿಗೆ ಶಾಯಿ
ಈ ಚುನಾವಣೆಯಲ್ಲಿ ಗಂಗೊಳ್ಳಿ ಗ್ರಾಮದ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಜ. 4 ರಂದು ಕುಂದಾಪುರದ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.