ಕೊಲ್ಲೂರಿನಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆಗೆ ಗ್ರಾಮಸ್ಥರ ಆಕ್ರೋಶ
Team Udayavani, Feb 18, 2020, 5:40 AM IST
ಕೊಲ್ಲೂರು: ಕೊಲ್ಲೂರು ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ಬಳಕೆದಾರರು ತೊಂದರೆಗೊಳಗಾಗಿದ್ದು ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಲೋ ವೋಲ್ಟೇಜ್ ಸಮಸ್ಯೆ
ಕಳೆದ ಹಲವಾರು ತಿಂಗಳಿಂದ ಲೋ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಅಂಗಡಿ ಮುಂಗಟ್ಟು, ವ್ಯವಹಾರಸ್ಥರು ಇಲಾಖೆಗೆ ದೂರು ನೀಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಗಲಿರುಳು ವಿದ್ಯುತ್ ಬಳಕೆದಾರರು ಕುಗ್ಗಿದ ಬೆಳಕಿನಡಿ ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆ ಮಂದಿ ವಿದ್ಯುತ್ ಕೊರತೆಯಿಂದ ಬೇಸತ್ತಿದ್ದಾರೆ.
ಪೂರ್ಣಗೊಳ್ಳದ ಹಾಲ್ಕಲ್
ಸಬ್ ಸ್ಟೇಶನ್
ಕಳೆದ ಹಲವು ವರುಷಗಳಿಂದ ನಡೆಯುತ್ತಿರುವ ಹಾಲ್ಕಲ್ ಬಳಿಯ ಸಬ್ ಸ್ಟೇಶನ್ ನಿರ್ಮಾಣ ಕಾಮಗಾರಿ ಈವರೆಗೆ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವಾರು ವರುಷಗಳಿಂದ ನಡೆಯುತ್ತಿರುವ ಕಾಮಗಾರಿ ಕೊನೆಗೊಳ್ಳದಿರುವುದು ಪ್ರಶ್ನಾರ್ಥಕವಾಗಿದೆ. ಅರಣ್ಯ ಇಲಾಖೆಯ ಅನುಮತಿ ಪತ್ರವು ಸಕಾಲದಲ್ಲಿ ವಿದ್ಯುತ್ ಇಲಾಖೆಗೆ ದೊರಕದಿರುವುದು ಒಂದು ಕಾರಣ ಎನ್ನಲಾಗಿದ್ದು ಇನ್ನಿತರ ತಾಂತ್ರಿಕ ಕಾರಣಗಳು ಕೂಡ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಕೈಕೊಡುವ ದೂರವಾಣಿ ಸಂಪರ್ಕ
ದಿನಂಪ್ರತಿ ಮೂಕಾಂಬಿಕೆಯ ದರ್ಶನಕ್ಕೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಬಿ.ಎಸ್.ಎನ್.ಎಲ್. ದೂರವಾಣಿ ಹಾಗೂ ಮೊಬೆ„ಲ್ ಬಳಕೆಗೆ ಎದುರಾಗುತ್ತಿರುವ ಸಂಪರ್ಕ ವಿಘ್ನ ಈವರೆಗೆ ಪರಿಹಾರವಾಗದಿರುವುದು ಇಲ್ಲಿನ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ. ಲಕ್ಷಾಂತರ ಭಕ್ತರ ದ್ಯಾನಕೇಂದ್ರವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ವ್ಯವಸ್ಥೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಎಂದು ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರಕಿಲ್ಲ. ಇಲಾಖೆಗಳು ಅತೀ ಶೀಘ್ರದಲ್ಲೇ ಸ್ಪಂದಿಸಿ ಸಮಸ್ಯೆ ನಿಭಾಯಿಸಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.