ಹಳ್ಳಿಗಳೇ ಭಾರತದ ಆತ್ಮ: ಸೀತಾರಾಮ ಕೆದ್ಲಾಯ
Team Udayavani, Dec 3, 2018, 11:13 AM IST
ಉಡುಪಿ: ಹಳ್ಳಿಗಳೇ ದೇಶದ ಆತ್ಮ. ಹಳ್ಳಿಗಳಲ್ಲಿ ಎಲ್ಲರೊಂದಿಗೆ ಬೆರೆತಾಗ ದೇವಮಾನವ ಬದುಕು ನಮ್ಮದಾಗುತ್ತದೆ ಎಂದು ಪಾದಯಾತ್ರೆಯ ಮೂಲಕ ಭಾರತ ಪ್ರದಕ್ಷಿಣೆ ಮಾಡಿದ ಸಾಧಕ ಸೀತಾರಾಮ ಕೆದ್ಲಾಯ ಹೇಳಿದರು. ಉಡುಪಿ ಇಂದ್ರಾಳಿ- ಮಂಚಿಕೋಡಿಯ ಭಾಗ್ಯಶ್ರೀ ಕೊರಗ ಸಮುದಾಯ ಭವನದಲ್ಲಿ ರವಿವಾರ ಜರಗಿದ ‘ಸೌಹಾರ್ದ ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಳ್ಳಿಗಳಲ್ಲಿರುವ ಅಮ್ಮಂದಿರು ಈ ಜಗತ್ತಿನ ಆತ್ಮ. ಅವರು ನೀಡಿದ ಶಿಕ್ಷಣವೇ ನಮ್ಮ ಬದುಕನ್ನು ಅರಳಿಸಿದೆ. ಆದರೆ ಮಾನವ ನಿರ್ಮಿತ ಪಠ್ಯ ಆಧರಿತ ಶಿಕ್ಷಣ ಆರಂಭವಾದಂದಿನಿಂದ ನಾವು ವಿಕೃತಿಯೆಡೆಗೆ ಹೊರಳಿದೆವು. ಸುಂದರ ಬದುಕು ನಮ್ಮದಾಗಬೇಕಾದರೆ ಹಳ್ಳಿಗಳ ಕಡೆ ಹೋಗಬೇಕು ಎಂದು ಕೆದ್ಲಾಯ ಹೇಳಿದರು.
ಮಾದರಿ ಕಾರ್ಯಕ್ರಮ
ಶಾಸಕ ರಘುಪತಿ ಭಟ್ ಮಾತನಾಡಿ, ಈ ಹಿಂದೆ ಕೊರಗ ಸಮುದಾಯ ಭವನ ಉದ್ಘಾಟನೆ ಸಂದರ್ಭದಲ್ಲಿ ಸೌಹಾರ್ದ ಮಿಲನ ಕಾರ್ಯಕ್ರಮ ನಡೆದಿತ್ತು. ಇದು ಎರಡನೇ ಮಾದರಿ ಕಾರ್ಯಕ್ರಮ. ಇಂತಹ ಸಮುದಾಯಗಳ ಜತೆ ಹೆಚ್ಚು ಬೆರೆತು ಬೇಕಾದ ಸವಲತ್ತುಗಳನ್ನು ಒದಗಿಸಿಕೊಟ್ಟಾಗ ಪರಿವರ್ತನೆ ಸಾಧ್ಯ ಎಂದರು.
ಪ್ರತ್ಯೇಕ ಮೀಸಲಾತಿ ಬೇಕು
ಕೊರಗ ಸಮುದಾಯದವರಿಗೆ ಪ್ರತ್ಯೇಕ ಮೀಸಲಾತಿ ಬೇಕು. ಕೊರಗ ಸಮುದಾಯ ದಲ್ಲಿ ಆತ್ಮವಿಶ್ವಾಸ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಸಕ ಭಟ್ ಹೇಳಿದರು. ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಕೊರಗರಿಗೆ ಮೆರುಗು ನೀಡುವ ಕೆಲಸಗಳು ನಡೆಯಬೇಕಾಗಿವೆ. ಹಿಂದೂ ಸಮಾಜ ಹಾಲು ಸಕ್ಕರೆಯಂತೆ ಜತೆಯಾಗಿ ಸಾಗಬೇಕು. ಕೊರಗ ಸಮಾಜದ ಜತೆ ನಾನು ಸದಾ ಇರುತ್ತೇನೆ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿದ್ಯಾರ್ಥಿವೇತನ, ರಘುಪತಿ ಭಟ್ ಅವರು ವಸ್ತ್ರಗಳನ್ನು ವಿತರಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕಾರ್ಯಕ್ರಮ ಸಂಘಟಕರಾದ ರಮ್ಯಾ ಮತ್ತು ಕೆ. ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು. ಸುಂದರ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ನಾಯ್ಕ ಸ್ವಾಗತಿಸಿದರು. ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು, ಸುಶ್ಮಿತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.