ಸೊಬಗು, ಐಶ್ವರ್ಯದ ಪ್ರತೀಕ ವಿಷು


Team Udayavani, Apr 15, 2018, 6:15 AM IST

Vishu-festival—885858.jpg

ಸೌರಯುಗಾದಿಯನ್ನು “ಬಿಸು ಪರ್ಬ’ (ಎ. 15ರಂದು) ಎಂದು ತುಳುನಾಡಿನಾದ್ಯಂತ ಆಚರಿಸಲಾಗುತ್ತದೆ.ವಸಂತ ಋತುವಿನ ಚೈತ್ರಮಾಸದಲ್ಲಿ ಸೂರ್ಯ ಮೀನ ರಾಶಿಯಿಂದ ಮೇಷ ರಾಶಿ ಪ್ರವೇಶಿಸುವ ಪರ್ವಕಾಲವೇ ಸೌರಮಾನ ಯುಗಾದಿ. ವಿಷು ಎಂಬ ಪದಕ್ಕೆ ಹಗಲು-ರಾತ್ರಿ ಸಮ ಪ್ರಮಾಣದಲ್ಲಿರುವ ದಿನ ಎಂದರ್ಥ ಕೂಡ ಇದೆ.

ಇದು ನವ ಮನ್ವಂತರದ ಕಾಲ. ಹಬ್ಬದ ಸಡಗರದ ಜತೆಗೆ ಜನರ ಮನದಲ್ಲಿ ಹೊಸ ಕನಸುಗಳು ಚಿಗುರುವ, ಭರವಸೆ, ಆಶಯ, ಬಯಕೆ ಕವಲೊಡೆಯುವ ಸಮಯ. ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಬಾಂಧವ್ಯ, ಗೌರವ ಮನೋಭಾವ ವೃದ್ಧಿಸಲಿ.  ಜೀವನದಲ್ಲಿ ಏನೇ ಏರುಪೇರುಗಳು ಸಂಭವಿಸಿದರೂ ಸರ್ವರೂ ಸಮನ್ವಯ ದಿಂದ ಒಟ್ಟಾಗಿ ಬಾಳಬೇಕೆನ್ನುವುದು ಈ ದಿನದ ಸಂಕಲ್ಪ. 

ಸಮೃದ್ಧ, ಸಂಪ ದ್ಭರಿತ, ಸೊಬಗು, ಐಶ್ವರ್ಯದ ಪ್ರತೀಕವಾದ ಈ ವಿಷು ಆಚರಣೆಯಲ್ಲಿ ಕಣಿ ನೋಡುವುದು ವಿಶೇಷ. ಹೊಸ ವರುಷದ ಆರಂಭದಲ್ಲಿ ಶುಭ ಶಕುನ ನೋಡಬೇಕು, ಸುವಸ್ತುಗಳ ದರ್ಶನ ಮಾಡಿದರೆ ಮುಂದೆ ವರ್ಷವಿಡೀ ಶುಭ ವಾಗು ತ್ತದೆ ಎನ್ನುವುದು ನಮ್ಮ ಸಂಪ್ರದಾಯದ ನಂಬಿಕೆ ಕೂಡ ಹೌದು. ಇದರಿಂದ ಧನಾತ್ಮಕ ಭಾವನೆ ವೃದ್ಧಿಯಾಗುತ್ತದೆ. 

ಕಣಿ ನೋಡುವುದು ವಿಶಿಷ್ಟ ಅನುಭವ
ವಿಷುವಿನ ಮುನ್ನಾದಿನವೇ ಕಣಿ ಇಡಲು ಬೇಕಾಗುವ ಸಾಮಗ್ರಿಗಳನ್ನು ಮನೆಯ ಮಹಿಳೆಯರು ಜೋಡಿಸಿಡುತ್ತಾರೆ. ಮನೆಯವರೆಲ್ಲ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ದೇವರ ಕೋಣೆಯಲ್ಲಿ ಇರಿಸಿದ ಕಣಿಯನ್ನು ನೋಡುವುದು ಒಂದು ವಿಶಿಷ್ಟ ಮತ್ತು ಅಪೂರ್ವ ಕ್ಷಣ. ಕಣಿ ಕಂಡ ತತ್‌ಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿ ಕೊಳ್ಳಬೇಕು ಎಂಬ ಹೇಳಿಕೆ ಯೊಂದಿದೆ. ಇದರಿಂದ ಆಯಸ್ಸು, ಆರೋಗ್ಯ, ಐಶ್ವರ್ಯಗಳ ಸಮೃದ್ಧಿ ಯಾಗುವುದು ಎಂಬ ಆಶಯ.

ಕಣಿಯಲ್ಲಿ ಇಡಲಾಗುವ ತೆಂಗಿನಕಾಯಿ ಸಂಪತ್ತಿನ ಚಿಹ್ನೆ ಯಾದರೆ, ಭತ್ತ ಬೆಳೆಯ ಸಂಕೇತ . ಆಭರಣಗಳು ಐಶ್ವರ್ಯದ, ಫಲಪುಷ್ಪ, ತರಕಾರಿಗಳು ಏಳಿಗೆಯ ಪ್ರತೀಕ. ಕಣಿ ನೋಡಿದ ಬಳಿಕ ಮನೆಯ ಕಿರಿಯರು ಹಿರಿಯರಿಗೆ ವಂದಿಸಿ ಆಶೀರ್ವಾದ ಪಡೆಯುವುದು ವಿಷು ಆಚರಣೆಯ ಒಂದು ಭಾಗ. ಆಗ ಹಿರಿಯರು ಕಿರಿಯರಿಗೆ ದಕ್ಷಿಣೆಯಾಗಿ ನಾಣ್ಯವನ್ನು ಕೊಡುವ ಸಂಪ್ರದಾಯವೂ ಕೆಲವೆಡೆ ಇದೆ. ಕೇರಳದಲ್ಲಿ ಈ ಪದ್ಧತಿಗೆ “ವಿಷು ಕೈನೀಟ್ಟಂ’  ಎನ್ನುತ್ತಾರೆ. ಹಿಂದೆ ಚಿನ್ನದ ನಾಣ್ಯಗಳನ್ನೇ ಕೊಡುತ್ತಿದ್ದರಂತೆ.

ಕೊನ್ನೆ ಹೂವಿಗೆ ವಿಶೇಷ ಸ್ಥಾನ 
ಕೇರಳದಲ್ಲಿ ಕಣಿ ಇಡಲು ಕೊನ್ನೆ ಹೂವು ಬೇಕೇಬೇಕು. ಅಲ್ಲಿನ ರಾಜ್ಯ ಪುಷ್ಪ ಎಂದು ಗುರುತಿಸಲಾದ ಕರ್ಣಿಕಾರ (ಕೊನ್ನೆ ಹೂ) ಹೊಂಬಣ್ಣದಿಂದ ಕಂಗೊಳಿ ಸುವುದರಿಂದ ಅದರಂತೆ ಸಂಪತ್ತು ಸಮೃದ್ಧಿಯಾಗಲಿ ಎಂಬುದು ಅವರ ನಂಬಿಕೆ. 

ಈ ದಿನ ತಮ್ಮ ಹಿತ್ತಲಲ್ಲಿ ಬೆಳೆದ ತರಕಾರಿ ಗಳನ್ನೋ, ಇನ್ನಿತರ ವಸ್ತು ಗಳನ್ನೋ ಊರಿನ ಮುಖ್ಯಸ್ಥರ, ಧಣಿಗಳ ಮನೆಗೆ, ಊರಿನ ಪ್ರಮುಖ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ “ಬಿಸುಕಾಣಿಕೆ’ ನೀಡುವ ಕ್ರಮ ಕೂಡ ಕೆಲವೆಡೆ ಆಚರಣೆಯಲ್ಲಿದೆ. 

ಅಂದು ವಿಶೇಷವಾಗಿ ಹಲಸಿನ ಕಾಯಿ, ಹಣ್ಣು, ಮಾವಿನ ಹಣ್ಣು ಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಖಾದ್ಯ, ಎಳೆಗೇರು ಬೀಜದ ಪಾಯಸ, ಉದ್ದು, ಅಕ್ಕಿ ಬಳಸಿ ವಿವಿಧ ರೀತಿಯ ಕಡುಬುಗಳನ್ನು ತಯಾರಿಸುತ್ತಾರೆ.

“ಕಣಿ’ ಎಂದರೇನು
ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ರಂಗೋಲಿ ಹಾಕಿ, ತೆಂಗಿನಕಾಯಿ, ಅಕ್ಕಿ, ಅಡಿಕೆ, ವೀಳ್ಯದೆಲೆ, ಕಲಶ, ಕನ್ನಡಿ, ಭತ್ತ, ಅರಶಿನ ಕುಂಕುಮ, ನವ ಧಾನ್ಯಗಳು, ಬಂಗಾರದ ಆಭರಣ, ಕನ್ನಡಿ, ಹೂಮಾಲೆ, ವಿವಿಧ ರೀತಿಯ ಹಣ್ಣುಹಂಪಲು, ತರಕಾರಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಜೋಡಿಸಿ ಇಡುವುದನ್ನು ಕಣಿ ಎನ್ನುವರು.

ಕೃಷಿ ಚಟುವಟಿಕೆಗಳಿಗೆ ಚಾಲನೆ
ವಿಷು ಹಬ್ಬದಂದು ತುಳುನಾಡಿನಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾರೆ. ಗದ್ದೆ ಉಳು ವುದು, ಬೀಜ ಬಿತ್ತುವುದು ಇತ್ಯಾದಿ ಕೆಲಸ ಕಾರ್ಯಗಳಿಗೆ ಅಂದು ಮುಹೂರ್ತ ನೆರವೇರಿಸಲಾಗುತ್ತದೆ. ಕೇರಳದಲ್ಲಿ  ಈ ದಿನವನ್ನು  ವಾರ್ಷಿಕೋತ್ಸವ  (ಕೃಷಿ ಉತ್ಸವ) ಎಂದೇ ಆಚರಿಸಲಾಗು¤ತದೆ.  

– ಗಣೇಶ್‌ ಕುಳಮರ್ವ

ಟಾಪ್ ನ್ಯೂಸ್

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.