“ಮುಕ್ತಿದಾತ’ ವಿಶು ಶೆಟ್ಟಿ ಅವರಿಂದ ಶತ ಶವ ಸಂಸ್ಕಾರ
Team Udayavani, Apr 23, 2019, 6:47 AM IST
ಉಡುಪಿ: ಮನೆಯಲ್ಲಿ ಸಾವು ಸಂಭವಿಸಿದರೆ ಭಯದಿಂದ ಮಾರುದ್ದ ನಿಲ್ಲುವ ಜನರಿರುವ ಕಾಲಘಟ್ಟದಲ್ಲಿ ಅನಾಥ ಶವಗಳ ಅಂತ್ಯ ಸಂಸ್ಕಾರ ಪೂರೈಸುವ ಎದೆಗಾರಿಕೆ ಎಲ್ಲರಿಗೂ ಬರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧವೋ ಎಂಬಂತೆ ಉಡುಪಿ ಅಂಬಲಪಾಡಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಳೆದ 35 ವರ್ಷಗಳಿಂದ ಇದುವರೆಗೆ ನೂರು ಅನಾಥ ಶವಗಳಿಗೆ ಮುಕ್ತಿ ನೀಡುವ ಮೂಲಕ ಉಡುಪಿ ಪರಿಸರದಲ್ಲಿ “ಮುಕ್ತಿದಾತ’ ಎನ್ನುವ ಬಿರುದಿಗೆ ಪಾತ್ರರಾಗಿದ್ದಾರೆ. ಬಾಲ್ಯದಿಂದಲೇ ಸಮಾಜ ಸೇವೆ ಶೆಟ್ಟರು ತಮ್ಮ ಚಿಕ್ಕಂದಿನಲ್ಲಿ ಊರಿನಲ್ಲಿ ಯಾರಾದರೂ ಮೃತಪಟ್ಟರೆ, ಅವರ ಶವ ಹೊತ್ತುಕೊಂಡು ಹೋಗುವಾಗ ಶವದ ಹಿಂದೆಯೇ ತೆರಳಿ ಮನೆಯವರು ಪಡುವ ನೋವು-ವೇದನೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು, ಮನದಲ್ಲಿಯೇ ಮರುಗುತ್ತಿದ್ದರು. 6ನೇ ತರಗತಿಯಲ್ಲಿರುವಾಗಲೇ ರಾ.ಹೆ.ಯಲ್ಲಿ ಅಪಘಾತವೊಂದು ಸಂಭವಿಸಿದಾಗ ಯುವಕನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಸಮಾಜ ಸೇವಾ ಕಾರ್ಯ ಆರಂಭಗೊಂಡಿತು. ಶೆಟ್ಟರು ಪಿಯುಸಿ ಯಲ್ಲಿರುವಾಗ ಪ್ರಸಿದ್ಧ ಭಾಗವತ ಕಾಳಿಂಗ ನಾವಡರನ್ನು ಆಸ್ಪತ್ರೆಗೆ ದಾಖಲಿಸಿದರು. ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಶೆಟ್ಟಿ ಅವರಲ್ಲಿ ಖರ್ಚಿಗೆ ಹಣವಿರಲಿಲ್ಲ. ಆಗ ಆ್ಯಂಬುಲೆನ್ಸ್ ಸೌಕರ್ಯವಿರಲಿಲ್ಲ (ಶವ ಹೊತ್ತುಕೊಂಡು ಸಾಗಬೇಕಿತ್ತು), ಜನಸಂಪರ್ಕವೂ ಇರಲಿಲ್ಲ, ಇಲಾಖೆಗಳಿಂದ ಸಹಕಾರವಿರಲಿಲ್ಲ ಅಂತಹ ಕಾಲದಲ್ಲಿಯೂ ಸಾವಿರಾರು ಮಂದಿಯ ಜೀವ ರಕ್ಷಣಾ ಕಾಯಕ ಮಾಡಿರುವುದು ಅವರ ದೊಡ್ಡ ಗುಣ.
ಕಾಸಿಲ್ಲದಾಗಲೂ ಶಿವನ ಬಿಟ್ಟಿ !
ಕಾಲೇಜಿಗೆ ಹೋಗುತ್ತಿರುವಾಗ ಅಪರಿಚಿತರ ಶವ ಸಂಸ್ಕಾರ ಮಾಡುವುದಕ್ಕೆ ಹಣವಿಲ್ಲದೆ, ಜೇಬಿನಲ್ಲಿದ್ದಷ್ಟು ಹಣವನ್ನು ಬೀಡಿನಗುಡ್ಡೆಯ ಸ್ಮಶಾನದಲ್ಲಿ ವನಜಕ್ಕನಿಗೆ ಕೊಟ್ಟು ಶವ ಸಂಸ್ಕಾರ ನಡೆಸುತ್ತಿದ್ದರು. ಅಂದು ವನಜಕ್ಕನವರು ಮಾಡಿದ ಸಹಕಾರವನ್ನು ಅವರು ಇಂದಿಗೂ ಸ್ಮರಿಸುತ್ತಾರೆ. ಈಗಾಗಲೇ ಉತ್ತರ ಪ್ರದೇಶ, ಬಿಹಾರ, ಕೇರಳ, ಉತ್ತರ ಕರ್ನಾಟಕ ಭಾಗದ 25 ಶವಗಳನ್ನು ಸಂಬಂಧಪಟ್ಟವರನ್ನು ಹುಡುಕಿ ಅವರಿಗೆ ಒಪ್ಪಿಸಿದ್ದಾರೆ. ವಾರಸುದಾರರಿಲ್ಲದ ಶವಗಳ ಸಂಸ್ಕಾರಕ್ಕೆ ತಗಲುವ ಸಂಪೂರ್ಣ ಖರ್ಚು ವೆಚ್ಚಗಳನ್ನು ಸ್ವತಃ ಅವರೇ ಭರಿಸುತ್ತಾರೆ.
ಕರೆ,ಮಾಹಿತಿಗೆ ಶೀಘ್ರ ಸ್ಪಂದನೆ
ಹುಟ್ಟಿನಿಂದಲೂ ಕಷ್ಟದಿಂದಲೇ ಬೆಳೆದ ಶೆಟ್ಟಿ ಅವರು ಕಷ್ಟದಲ್ಲಿರುವವನ್ನು ಕಂಡಾಗ ಮನ ಕರಗಿ ಅವರಿಗೆ ಕೈಲಾದಷ್ಟು ಸಹಾಯ ಮಾಡಬೇಕೆನ್ನುವ ಇರಾದೆ ಹೊಂದಿದ್ದಾರೆ. ಡಿಪ್ಲೋಮಾ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರರಾದ ಅವರಿಗೀಗ 47 ವರ್ಷ. ಕಷ್ಟದಲ್ಲಿರುವವರು, ಅಸಹಾಯಕರಲ್ಲದೆ ಇತರರ ಶವ ಸಂಸ್ಕಾರಕ್ಕೆ ಇಂದಿಗೂ ತೆರಳಿಲ್ಲ. ಅವರು ಜೀವನೋಪಾಯಕ್ಕೆ ರೂಫಿಂಗ್ ವರ್ಕ್ಸ್ (ವಿವಿಧ ಬಗೆಯ ಕಬ್ಬಿಣದ ಮಾಡಿನ ಕೆಲಸ) ಮಾಡುತ್ತಾ, ಕರೆಯ ಮಾಹಿತಿ ಸಿಕ್ಕೊಡನೆ ಹಗಲು ರಾತ್ರಿಯೆನ್ನದೇ ಸ್ಥಳಕ್ಕೆ ಧಾವಿಸಿ ಕಷ್ಟಕ್ಕೆ ಸ್ಪಂದಿಸುತ್ತಾರೆ.
13 ಸಾವಿರಕ್ಕೂ ಹೆಚ್ಚು ಜನರ ರಕ್ಷಣೆ
ಮಾನಸಿಕ ಅಸ್ವಸ್ಥರಲ್ಲಿ ಯುವತಿಯರು, ಮಹಿಳೆಯರೇ ಹೆಚ್ಚಿರುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಅವರು ಗುಣಮುಖರಾದಾದ ಅದಮ್ಯ ಸಂತೋಷವಾಗುತ್ತದೆ ಎಂದು ಶೆಟ್ಟರು ಹೇಳುತ್ತಾರೆ. ಅವರು ಇದುವರೆಗೆ 400ಕ್ಕೂ ಅಧಿಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಹಾಜರಾಗಿದ್ದಾರೆ. 13 ಸಾವಿರಕ್ಕೂ ಹೆಚ್ಚು ರೋಗಿಗಳು, ಅಸಹಾಯಕರು, ಕಾಯಿಲೆಗೆ ತುತ್ತಾದವರು, ಮಾನಸಿಕ ಅಸ್ವಸ್ಥರು, ಹಲ್ಲೆಗೊಳಗಾದವರನ್ನು ರಕ್ಷಿಸಿದ್ದಲ್ಲದೆ, 250ಕ್ಕೂ ಹೆಚ್ಚು ಜನರನ್ನು ಖಾಸಗಿ/ಸರಕಾರಿ ಅನಾಥಾಶ್ರಮ/ವೃದ್ಧಾಶ್ರಮ, ಮಹಿಳಾ ನಿಲಯ, ಪುನರ್ವಸತಿ ಕೇಂದ್ರ, ಮಕ್ಕಳ ರಕ್ಷಣಾ ಘಟಕಕ್ಕೆ ಶೇ. 50ರಷ್ಟು ಸ್ವತಃ ಖರ್ಚು ಭರಿಸಿ ಸೇರಿಸಿದ್ದಾರೆ.
ಜಾತಿ,ಧರ್ಮಾನುಸಾರ ಸಂಸ್ಕಾರ
ಶವ ಸಂಸ್ಕಾರಕ್ಕೆ ಜೆಸಿಬಿ, ಆ್ಯಂಬುಲೆನ್ಸ್, ಪೊಲೀಸ್ ಇಲಾಖೆ, ಶ್ಮಶಾನ ನಿರ್ವಹಣೆಯ ವನಜಕ್ಕ, ಸಮಾಜ ಸೇವಕ ತಾರನಾಥ ಮೇಸ್ತ ಅವರ ಸಹಕಾರವನ್ನು ಶೆಟ್ಟಿಯವರು ಸ್ಮರಿಸುತ್ತಾರೆ. ಮೃತಪಟ್ಟ ಅಪರಿಚಿತ ವ್ಯಕ್ತಿಯು ನಿರ್ದಿಷ್ಟ ಜಾತಿ ಅಥವಾ ಧರ್ಮದವರೆಂದು ಗೊತ್ತಾದಲ್ಲಿ, ಜಾತಿ, ಧರ್ಮಕ್ಕೆ ಸಂಬಂಧಪಟ್ಟವರ ಸಹಾಯ ಪಡೆದು ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದ ಸಾಕಷ್ಟು ಪ್ರಕರಣಗಳಿವೆ.
*ಎಸ್.ಜಿ.ನಾಯ್ಕ್ ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.