ಶ್ರೀಕೃಷ್ಣ ಮಠದಲ್ಲಿ “ವಿಶ್ವಾರ್ಪಣಂ’
Team Udayavani, Jun 18, 2019, 10:46 AM IST
ಉಡುಪಿ: ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಷಷ್ಠಿಪೂರ್ತಿ ಪ್ರಯುಕ್ತ ಸೋಮವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿರಾಟಪರ್ವ ಪ್ರವಚನ ಮಂಗಲ ಮತ್ತು ಗುರುವಂದನೆ “ವಿಶ್ವಾರ್ಪಣಂ’ ನಡೆಯಿತು.
ಅದಮಾರು ಶ್ರೀಪಾದರು ಈ ತನಕ ರಾಘವೇಂದ್ರ ವಿಜಯ, ಶ್ರೀಕೃಷ್ಣ ಲೀಲಾಮೃತ ವಿಷಯಗಳ ಬಗ್ಗೆ ನೀಡಿದ ಪ್ರವಚನಗಳನ್ನು ಸಂಗ್ರಹಿಸಿ ಪಲಿಮಾರು ಮಠದ ತತ್ತ ಸಂಶೋಧನ ಸಂಸತ್‌ನಿಂದ ಪ್ರಕಾಶಿಸಲ್ಪಟ್ಟ 2 ಕೃತಿಗಳು, ಶ್ರೀಪಾದರ ಸಂಸ್ಥೆಗಳ, 60 ವರ್ಷಗಳ ಸಾಧನೆಗಳ ಚಿತ್ರಗಳು ಮತ್ತು ವಿದ್ವಾಂಸರ, ಅಭಿಮಾನಿಗಳ ಲೇಖನವಿರುವ ಸ್ಮರಣ ಸಂಚಿಕೆ ಪುಸ್ತಕಗಳನ್ನು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.
ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ತಿಳಿವಳಿಕೆ ಕಡಿಮೆ ಇದ್ದರೆ ಇನ್ನೊಬ್ಬರಲ್ಲಿ ಕೇಳಬೇಕು. ಭಗವಂತನ ಅರಿವಿನ ಜ್ಞಾನ ಪಡೆಯಲು ಎಲ್ಲರೂ ಹಂಬಲಿಸಬೇಕು. ದೇವರ ಅನುಗ್ರಹದಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತಿದೆ ಎಂದರು. ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜತೆ ಪಾಠ ಓದುವ ಕಾಲದಿಂದ ಅವರ ಜತೆಗಿದ್ದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅಭಿನಂದಿಸಿ ಅವರ ವಾಕ³ಟುತ್ವ, ಸಿದ್ಧಾಂತ ನಿಷ್ಠೆಯನ್ನು ಕೊಂಡಾಡಿದರು. ಸನ್ಯಾಸಿಗಳಿಗೆ ಪಾಠ- ಪ್ರವಚನ ಬಹಳ ಮುಖ್ಯ. ಸ್ವಾಮೀಜಿ ಯವರು ಪ್ರವಚನದಲ್ಲಿ ಅತೀವ ಸಾಧನೆಯ ಜತೆ ದಾನಧರ್ಮಗಳನ್ನೂ ಮಾಡುತ್ತಿದ್ದಾರೆ ಎಂದರು.
ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು, ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು. ತಣ್ತೀ ಸಂಶೋಧನ ಸಂಸತ್ ನಿರ್ದೇಶಕ ಡಾ| ವಂಶಿ ಕೃಷ್ಣಾಚಾರ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.