ಬ್ರಾಹ್ಮಣ ವರ್ಗಕ್ಕೆ ಅವಮಾನ: ಪ್ರತಿಭಟನೆ
Team Udayavani, Aug 12, 2017, 6:45 AM IST
ಉಡುಪಿ: ಜಾತಿ, ವರ್ಗ, ಪಂಥಗಳ ನಡುವೆ ಸಾಮರಸ್ಯ ಇರಬೇಕು. ಹೀಗಿದ್ದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಸಾಧ್ಯ. ಮನೋರಂಜನೆಯ ಹೆಸರಿನಲ್ಲಿ ಮಕ್ಕಳಲ್ಲಿ ಕೆಟ್ಟ ಸಂದೇಶ ಬಿತ್ತುವ ಸಾಹಸಕ್ಕೆ ಕೈ ಹಾಕಿ ತಪ್ಪು ಸಂದೇಶ ನೀಡಬಾರದೆಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಕನ್ನಡ ವಾಹಿನಿಯೊಂದು ಡ್ರಾಮಾ ಜೂನಿಯರ್ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಜಾತಿ ಹಾಗೂ ವೃತ್ತಿಯನ್ನು ಕೀಳರಿಮೆಯಿಂದ ಬಿತ್ತರಿಸಿದ್ದನ್ನು ಖಂಡಿಸಿ ಬುಧವಾರ ಪೇಜಾವರ ಮಠದಲ್ಲಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಿಳಿದೋ, ತಿಳಿಯದೆಯೋ ಬ್ರಾಹ್ಮಣರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿದ ವಾಹಿನಿ ಕ್ಷಮೆಯಾಚಿಸಿ ಪ್ರಕರಣವನ್ನು ಇಲ್ಲಿಗೆ ಮುಗಿಸಲಿ ಎಂದರು.
ಯಾವುದೇ ಜಾತಿ, ಧರ್ಮದವರನ್ನು ಕೆಟ್ಟದಾಗಿ ಬಿಂಬಿಸುವ ಅಧಿಕಾರ ಯಾರಿಗೂ ಇಲ್ಲ. ಅವರವರ ಕುಲಕಸುಬುಗಳಿಗೆ ಅದರದ್ದೇ ಆದ ಗೌರವ ಇದೆ. ಇನ್ನೊಬ್ಬರನ್ನು ಮನೋರಂಜನೆಗೆ ಬಳಸಿಕೊಳ್ಳುವುದು ಕೂಡಾ ಅಘಾತಕಾರಿ ಎಂದು ಮಾಜಿ ಶಾಸಕ ಕೆ.ರಘಪತಿ ಭಟ್ ನುಡಿದರು.
ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ವಿಷ್ಣುಪ್ರಸಾದ್ ಪಾಡಿಗಾರು ಸ್ವಾಗತಿಸಿದರು. ಪುರೋಹಿತರ ಸಂಘದ ಅಧ್ಯಕ್ಷ ವೇದವ್ಯಾಸ ಐತಾಳ್, ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.