ಕಾರವಾರದವರೆಗೂ ವಿಸ್ಟಾಡೋಮ್ ರೈಲು ವಿಸ್ತರಣೆ
Team Udayavani, Aug 14, 2021, 6:51 AM IST
ಕುಂದಾಪುರ/ಉಡುಪಿ: ಕೋವಿಡ್ ಕಾರಣದಿಂದ ಭಾಗಶಃ ಸಂಚಾರ ಮೊಟಕುಗೊಳಿಸಿದ್ದ ಬೆಂಗಳೂರು-ಕಾರವಾರ (06211/12) ಬೆಳಗಿನ ರೈಲು, ಆ.16ರಿಂದ ಹೊಸ ವಿಸ್ಟಾಡೋಮ್ ಕೋಚಿ ನೊಂದಿಗೆ ಪುನರಾರಂಭಗೊಳ್ಳಲಿದೆ ಎಂದು ನೈಋತ್ಯ ರೈಲ್ವೇ ತಿಳಿಸಿದೆ. ಇದಕ್ಕೆ ಕೊಂಕಣ್ ರೈಲ್ವೇ ಒಪ್ಪಿಗೆ ಸೂಚಿಸಿದ್ದು ರೈಲ್ವೇ ಹಿತರಕ್ಷಣ ಸಮಿತಿ, ಪ್ರಯಾಣಿಕರ ಒತ್ತಾಯ, ಹೋರಾಟ ಫಲಪ್ರದವಾಗಿದೆ.
ಕೊರೊನಾ ಕಾರಣದಿಂದ ಯಶವಂತಪುರ – ಕಾರವಾರ ಹಗಲು ರೈಲು ಸ್ಥಗಿತಗೊಂಡ ಬಳಿಕ ಅದೇ ಸಮಯದಲ್ಲಿ ವಿಸ್ಟಾಡೋಮ್ ಪ್ರವಾಸಿ ಬೋಗಿಯಿರುವ ರೈಲನ್ನು ಯಶವಂತಪುರದಿಂದ ಮಂಗಳೂರು ತನಕ ಓಡಿಸಲಾಗುತ್ತಿತ್ತು. ಇದರಿಂದ ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ನಿರಾಸೆಯಾಗಿತ್ತು.
ಈ ಸಂಬಂಧ ಕಾರವಾರದವರೆಗೂ ಈ ರೈಲನ್ನು ವಿಸ್ತರಿಸಬೇಕೆಂದು ಕುಂದಾಪುರ, ಉತ್ತರ ಕನ್ನಡ ರೈಲ್ವೇ ಪ್ರಯಾಣಿಕರ ಹಿತರಕ್ಷಣ ಸಮಿತಿ, ಉತ್ತರ ಕನ್ನಡ ರೈಲ್ವೇ ಸಮಿತಿ, ರೈಲು ಪ್ರಯಾಣಿಕರು ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದರು.
ಈ ನಿಟ್ಟಿನಲ್ಲಿ ತತ್‌ಕ್ಷಣ ಕಾರ್ಯ ಪ್ರವೃತ್ತರಾದ ಶೋಭಾ ಕರಂದ್ಲಾಜೆಯವರು, ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಕಾರವಾರ-ಬೆಂಗಳೂರು ಹಗಲು ರೈಲನ್ನು ಪುನರಾರಂಭಿಸುವಂತೆ ಮನವಿ ಮಾಡಿದರು. ಈ ಮನವಿಗೆ ಸಚಿವರು ಸ್ಪಂದಿಸಿ ವಿಸ್ಟಾಡೋಮ್ ಕೋಚ್ ಸಹಿತ ರೈಲು ಆರಂಭಿಸಲು ರೈಲ್ವೇ ಇಲಾಖೆಗೆ ಸೂಚಿಸಿದರು. ಈ ಸಂಬಂಧ “ಉದಯವಾಣಿ’ಯು ಜು. 13ರಂದು ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.
ಜನಪ್ರತಿನಿಧಿಗಳ ಸಹಕಾರ :
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಅನಂತ ಕುಮಾರ್ ಹೆಗಡೆ, ಶಾಸಕರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಮಟಾದ ದಿನಕರ್ ಶೆಟ್ಟಿ ಅವರ ಸಹಕಾರ ಮತ್ತು ನಮ್ಮ ಹೋರಾಟದಿಂದ ವಿಸ್ಟಾಡೋಮ್ ರೈಲು ಕಾರವಾರದವರೆಗೆ ವಿಸ್ತರಿಸಲು ಸಾಧ್ಯವಾಗಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಆ.16ಕ್ಕೆ ರೈಲು ಆಗಮನ :
ವಿಸ್ಟಾಡೋಮ್ ರೈಲು ಉಡುಪಿ, ಕುಂದಾಪುರಕ್ಕೆ ಆ. 16ರಂದು ಬರಲಿದ್ದು, ಆ ದಿನ ಸಂಜೆ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮವಿದೆ. ಉಡುಪಿ, ಕುಂದಾಪುರ, ಬೈಂದೂರು, ಕಾರವಾರದವರೆಗೆ ಅತ್ಯಾಧುನಿಕ ಸೌಲಭ್ಯಗಳಿರುವ ಈ ಬೋಗಿಗಳಲ್ಲಿ ಪ್ರಯಾಣಿಸಿದರೆ, ಪಂಚಗಂಗಾವಳಿ ನದಿ, ಗೋಕರ್ಣ, ಮುಡೇìಶ್ವರ, ಕಡಲ ಕಿನಾರೆ, ಒತ್ತಿನೆಣೆ ಗುಡ್ಡ ಸಹಿತ ಇನ್ನಿತರ ಸಹಜ ಸೌಂದರ್ಯದ ಪ್ರಾಕೃತಿಕ ಸೊಬಗನ್ನು ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.