“ದೃಷ್ಟಿ ದೋಷ ಪರೀಕ್ಷೆ ಎಲ್ಲರಿಗೂ ಅನಿವಾರ್ಯ’
Team Udayavani, Oct 3, 2019, 5:31 AM IST
ಪಡುಬಿದ್ರಿ: ಶಾಲಾ ಮಕ್ಕಳು, ವಯೋ ಪ್ರಬುದ್ಧರು ಇಂದಿನ ಕಾಲಘಟ್ಟ ದಲ್ಲಿ ದೃಷ್ಟಿ ದೋಷದ ಪರೀಕ್ಷೆಗೆ ಒಳಗಾಗುವುದು ಅನಿವಾರ್ಯ. ವಯೋ ಸಹಜವಾಗಿ ಕಾಣಿಸಿಕೊಳ್ಳುವ ಡಯಾಬಿಟೀಸ್ ಮತ್ತು ರಕ್ತದೊತ್ತಡದಿಂದಾಗಿ ದೃಷ್ಟಿಗೆ ತೊಂದರೆ ಉಂಟಾಗಬಹುದು. ಇದನ್ನು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಉಡುಪಿಯ ಪ್ರಸಾದ್ ನೇತ್ರಾಲಯದ ಡಾ| ಶ್ರೀ ತೇಜಾ ಹೇಳಿದರು.
ಅವರು ಅ. 2ರಂದು ಮಹಾತ್ಮಾ ಗಾಂಧಿ, ಶಾಸ್ತ್ರಿ ಜಿ ಜಯಂತಿಯಂದು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಾಂಗಣ ದಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆ, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ, ಗಣಪತಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘ, ಉಡುಪಿಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ನವಶಕ್ತಿ ವಿಮೆನ್ಸ್ ವೆಲ್ಫೆàರ್ ಸೊಸೈಟಿ, ಲಯನ್ಸ್ ಕ್ಲಬ್ ಪಡುಬಿದ್ರಿ ಮತ್ತು ಇನ್ನರ್‌ವೀಲ್ ಕ್ಲಬ್ ಪಡುಬಿದ್ರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸತತ 8ನೇ ವರ್ಷ ನಡೆಸಲಾಗುತ್ತಿರುವ ಕಣ್ಣಿನ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಡಿ. ಪೂಜಾರಿ, ಕೇಂದ್ರೀಯ ಮತ್ಸ ಸಂಶೋಧನಾ ಇಲಾಖೆಯ ಸೇವಾ ನಿವೃತ್ತ ಲೋಹಿತಾಕ್ಷ ಸುವರ್ಣ ಪಡುಹಿತ್ಲು ಮಾತನಾಡಿದರು.
ವೇದಿಕೆಯಲ್ಲಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸುನಂದಾ ವಿಜಯ್, ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ ಗಣಪತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರೌಢಶಾಲಾ ಸಹಶಿಕ್ಷಕಿ ಅನುರಾಧಾ ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ನಿರ್ವಹಿಸಿದರು. ಎಸ್‌ಬಿವಿಪಿ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸುಮತಿ ಹೆಗಡೆ ವಂದಿಸಿದರು. ಒಟ್ಟು 138 ಮಂದಿ ನೇತ್ರ ಪರೀಕ್ಷಣೆಗೊಳಗಾಗಿದ್ದು 58 ಮಂದಿಗೆ ಕನ್ನಡಕ ವಿತರಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.