ಶ್ರೀ ಕೃಷ್ಣ ಮಠ: ಕೋವಿಡ್ ನಡುವೆಯೂ ಯಶಸ್ವಿ ವಿಟ್ಲಪಿಂಡಿ ಉತ್ಸವ
Team Udayavani, Aug 31, 2021, 7:34 PM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವದ ವೇಳೆ ಭಕ್ತರಿಗೆ ರಥಬೀದಿ ಪ್ರವೇಶಕ್ಕೆ ಅವಕಾಶವಿಲ್ಲದೆ ಇರುವುದರಿಂದ ಸಾರ್ವಜನಿಕರು ಮಂಗಳವಾರ ಬೆಳಗ್ಗೆಯಿಂದ ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದು, ಶ್ರೀ ಕೃಷ್ಣ ಪ್ರಸಾದ ಸ್ವೀಕರಿಸಿ ಮಧ್ಯಾಹ್ನದೊಳಗೆ ಮನೆ ಸೇರುತ್ತಿರುವ ದೃಶ್ಯಗಳು ಕಂಡುಬಂತು.
ಸಾರ್ವಜನಿಕವಾಗಿ ಈ ಬಾರಿ ವೇಷ ಧರಿಸಲು ಅನುಮತಿ ಇಲ್ಲದೆ ಹೋದರೂ ಈ ಬಾರಿ ರಥಬೀದಿಯ ಸುತ್ತಮುತ್ತ ಬೆರಳಣಿಕೆಯ ಸಂಖ್ಯೆಯಲ್ಲಿ ವೇಷಗಳು ಹಾಗೂ ಚಿಕ್ಕ ಮಕ್ಕಳು ಮುಖಕ್ಕೆ ಬಣ್ಣ ಹಾಕಿಕೊಂಡು ರಥ ಬೀದಿ ತುಂಬಾ ಓಡಾಡುತ್ತಿರುವುದು ಕಂಡು ಬಂತು.
ಆನ್ಲೈನ್ ವೀಕ್ಷಣೆ :
ಉತ್ಸವದಲ್ಲಿ ಭಾಗವಹಿಸಲು ಅವಕಾಶವಿಲ್ಲದೆ ಇರುವುದರಿಂದ ಭಕ್ತರು ಮುಂಜಾನೆಯಿಂದಲೇ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಂಡು ಬಂತು. ಕೆಲವರು ಶ್ರೀಕೃಷ್ಣ ಕನಕನ ಕಿಂಡಿಯಲ್ಲಿ ದರ್ಶನ ಪಡೆದು ಸಂತೃಪ್ತಿ ಪಡೆದುಕೊಂಡರು. ಇನ್ನು ಕೆಲವರು ಮನೆಯಲ್ಲಿ ಕುಳಿತುಕೊಂಡು ಟಿವಿ ಮೂಲಕ ಲೈವ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಿದರು.
ಹೆಚ್ಚಿದ ವಾಹನ ಸಂಚಾರ :
ಬೆಳಗ್ಗೆಯಿಂದಲೇ ನಗರದ ಪ್ರಮುಖ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕಲ್ಸಂಕ, ಆಭರಣ ಮಳಿಗೆ ಮುಂಭಾಗ, ರಥ ಬೀದಿ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಮಧ್ಯಾಹ್ನ ಮೂರ ಬಳಿಕ ನಗರದಲ್ಲಿ ವಾಹನಗಳ ಓಡಾಟ ಕಡಿಮೆ ಇತ್ತು.
ವಿವಿಧ ಅಂಗಡಿಗಳು:
ಕೊರೊನಾದಿಂದ ರಥ ಬೀದಿಯೊಳಗೆ ಹೆಚ್ಚಿನ ಅಂಗಡಿಗಳು ಕಾಣ ಸಿಕ್ಕಿಲ್ಲ. ಆಟಿಕೆ ಮಾರುವ, ವಿವಿಧ ಗೃಹ ಉಪಯೋಗಿ ಸಾಮಗ್ರಿಗಳನ್ನು ಮಾರುವವರ ಸಂಖ್ಯೆ ತೀರಾ ಕಡಿಮೆ ಇತ್ತು. ರಥ ಬೀದಿಯಲ್ಲಿ ಹೆಣ್ಣು ಮಕ್ಕಳು ಕಿವಿಯೋಲೆ, ಬಟ್ಟೆ ಖರೀದಿಯಲ್ಲಿ ಮಗ್ನರಾಗಿದ್ದು, ಮಹಿಳೆಯರು ಹೂವು- ಹಣ್ಣು ಖರೀದಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.