“ವಿವೇಕಾನಂದರು ಇಂದಿನ ಯುವಕರಿಗೆ ಸ್ಫೂರ್ತಿ’
Team Udayavani, Mar 22, 2018, 6:45 AM IST
ಕುಂದಾಪುರ: ಮೊಳಹಳ್ಳಿ ಗ್ರಾಮದ ಮರಾತೂರು ಶಾಲೆಯಲ್ಲಿ ಯಕ್ಷಾಭಿಮಾನಿಗಳ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ದುಡಿದು ಕಮಲಶಿಲೆ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದ ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಶೆಟ್ಟಿ, ಭಜನ ಕ್ಷೇತ್ರದಲ್ಲಿ ಅಗ್ರಮಾನ್ಯರೆನಿಸಿಕೊಂಡ ಹಾಗೂ ಹೊಸ ತಲೆಮಾರಿಗೆ ಸ್ಫೂರ್ತಿಯಾದ ವರ್ತಕ ಉಪ್ಪರಿಗೆ ಮನೆ ಶಂಕರ ಶೆಟ್ಟಿ, ಹೆಂಗ ವಳ್ಳಿ ಬಾಲಕೃಷ್ಣ ಶೆಟ್ಟಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಮೇರು ಭಾಗವತರಾಗಿ ಮೆರೆದ ಹೊಸಂಗಡಿ ರವೀಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಅವರು, ಭಾರತದ ಸಂಸ್ಕೃತಿಯ ಸಾರವನ್ನು ವಿಶ್ವಕ್ಕೆ ಪಸರಿಸುವ ಕಾರ್ಯ ಮಾಡಿದ ವಿವೇಕಾನಂದರು ಇಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅದೇ ಸ್ಫೂರ್ತಿಯನ್ನು ಪಡೆದ ಇಲ್ಲಿನ ಯುವಕರು ಸಾಮಾಜಿಕ ಜಾಗೃತಿ ಮೂಡಿಸುವುದಕ್ಕೆ ಮತ್ತು ಕಲೆಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರ ಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಎಂ. ದಿನೇಶ್ ಹೆಗ್ಡೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ದೀನಪಾಲ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಉದಯ ಕುಲಾಲ್, ಉಪಾಧ್ಯಕ್ಷೆ ವಾಣಿ ಆರ್. ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಇಂದಿರಾ ಉದಯ ಶೆಟ್ಟಿ, ಗುತ್ತಿಗೆದಾತ ಹೊರ್ನಾಡಿ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ಮರಾತೂರು ಶಾಂತಾ ರಾಮ ಶೆಟ್ಟಿ ಅವರು ಶುಭಾಸಂಶನೆ ಗೈದರು. ಉದ್ಯಮಿ ಬೆದ್ರಾಡಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಂಘಟಕ ಗೋಪಾಲಕೃಷ್ಣ ಆಚಾರ್ಯ, ಸುಪ್ರೀತಾ ಆಚಾರ್ಯ, ಲೋಕೇಶ್ ಸಮ್ಮಾನಿತರ ಪಟ್ಟಿ ವಾಚಿಸಿದರು. ಅಂಚೆ ಇಲಾಖೆಯ ಮಂಜುನಾಥ ಬೆದ್ರಾಡಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪಿ.ಟಿ. ಪ್ರಕಾಶ್ ಶೆಟ್ಟಿ ಬೆಳಗೊಡು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.