ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪೂರ್ಣ: ದ.ಕ.ದಲ್ಲಿ 17.37 ಲಕ್ಷ, ಉಡುಪಿ: 10.16 ಲಕ್ಷ ಮತದಾರರು


Team Udayavani, Jan 6, 2023, 7:07 AM IST

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪೂರ್ಣ: ದ.ಕ.ದಲ್ಲಿ 17.37 ಲಕ್ಷ, ಉಡುಪಿ: 10.16 ಲಕ್ಷ ಮತದಾರರು

ದ.ಕ.: 17.37 ಲಕ್ಷ ಮತದಾರರು
ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಗಳನ್ನು ಗುರುವಾರವೇ ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

9.11.2022ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಹಕ್ಕು, ಆಕ್ಷೇಪಗಳ ಸೀÌಕಾರದ ಬಳಿಕ ವಿಶೇಷ ನೋಂದಣಿ ಅಭಿಯಾನ ನಡೆದಿದ್ದು ಗುರುತು ಚೀಟಿ ವಿತರಣೆಯೂ ಪ್ರಗತಿಯಲ್ಲಿದೆ. ವಿಶೇಷ ಪರಿಷ್ಕರಣೆ ಮುಕ್ತಾಯಗೊಂಡಿದ್ದರೂ ನಿರಂತರ ಪರಿಷ್ಕರಣೆ ಎಂದಿನಂತೆ ಮುಂದುವರಿಯಲಿದೆ ಎಂದರು.

ಒಟ್ಟಾರೆ 2022ರ ಯೋಜಿತ ಜನಸಂಖ್ಯೆ 23,57,852 ಆಗಿದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 17,37,688 ಮತದಾರರಿದ್ದಾರೆ. ಇದರಲ್ಲಿ 8,50,552 ಪುರುಷ ಹಾಗೂ 8,87,060 ಮಹಿಳೆಯರು. ಇತರ ಮತದಾರರು ಸಂಖ್ಯೆ 76 ಇದೆ. 47,174 ಮಂದಿಯನ್ನು ಈ ಅಭಿಯಾನದಲ್ಲಿ ಸೇರ್ಪಡೆ ಮಾಡಿದ್ದು 18,441 ಮಂದಿಯ ಹೆಸರು ರದ್ದುಗೊಳಿಸಿದೆ, 18678 ಮಂದಿಯ ಮಾಹಿತಿ ಪರಿಷ್ಕರಿಸಲಾಗಿದೆ.

ಜಿಲ್ಲೆಯಲ್ಲಿ ಹಿಂದಿನ ಪಟ್ಟಿ ಪ್ರಕಾರ 9,845 ಯುವ ಮತದಾರರಿದ್ದು ಈಗ 15,414 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಒಟ್ಟು ಸಂಖ್ಯೆ 25,259ಕ್ಕೆ ಏರಿದೆ. ಜಿಲ್ಲೆಯಲ್ಲಿ 13,706 ವಿಕಲಚೇತನ ಮತದಾರರು, 6,392 ಗಣ್ಯ ಮತದಾರರು, 546 ಸೇವಾ ಮತದಾರರು, 76 ಮಂಗಳಮುಖೀಯರು, 225 ಅನಿವಾಸಿ ಭಾರತೀಯ ಮತದಾರರು ಇದ್ದಾರೆ.

ಎಪಿಕ್‌ ಕಾರ್ಡ್‌ ವಿತರಣೆ
ಅಭಿಯಾನದ ಭಾಗವಾಗಿ ಈಗಾಗಲೇ ಸೃಜಿಸಲಾಗಿರುವ ಎಪಿಕ್‌ ಕಾರ್ಡ್‌ಗಳನ್ನು ಸೀ³ಡ್‌ ಪೋಸ್ಟ್‌ ಮೂಲಕ ಮತದಾರರ ಮನೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ, 16099 ಗುರುತು ಚೀಟಿ ಮುದ್ರಣಕ್ಕೆ ಹೋಗಿದ್ದು, ಅದರಲ್ಲಿ 15760 ಸಿಕ್ಕಿದೆ, 14610 ಈಗಾಗಲೇ ವಿತರಣೆ ಕೂಡಾ ಆಗಿದೆ.

ಆಧಾರ್‌ ಜೋಡಣೆ
ಮತದಾರರ ಗುರುತುಚೀಟಿಯನ್ನು ಆಧಾರ್‌ ಜೊತೆ ಜೋಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆದಿದೆ, 12,46,710 ಮತದಾರರು ಈಗಾಗಲೇ ಆಧಾರ್‌ ಜೊತೆ ಜೋಡಿಸಿದ್ದಾರೆ ಎಂದ ಡಿಸಿ, ಚುನಾವಣಾ ಆಯೋಗದ ಆದೇಶದಂತೆ ಆಧಾರ್‌ ಜೋಡಣೆ ಕಡ್ಡಾಯವಾಗಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ಗುರಿ ಸಾಧನೆ
ಚುನಾವಣಾ ಆಯೋಗ ನಮ್ಮ ಜಿಲ್ಲೆಗೆ ವಿಶೇಷ ಪರಿಷ್ಕರಣ ಅಭಿಯಾನದಲ್ಲಿ 17,40,515 ಮತದಾರರ ಗುರಿ ನೀಡಿದ್ದು, ಈಗ ಶೇ 99.84ರಷ್ಟು ಗುರಿಸಾಧಿಸುವ ಮುಖೇನ 17,37,688 ಮಂದಿಯನ್ನು ಸೇರ್ಪಡೆ ಮಾಡಿದಂತಾಗಿದೆ ಎಂದು ಡಿಸಿ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ಮೋಹನ್‌ ಹಾಜರಿದ್ದರು.
**
ಉಡುಪಿ: 10.16 ಲಕ್ಷ ಮತದಾರರು
ಉಡುಪಿ: ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2023 ಜ.1ರ ಅರ್ಹತಾ ದಿನಾಂಕವನ್ನಾಗಿ ಟ್ಟುಕೊಂಡು ಐದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಜ.5ರಂದು ಎಲ್ಲ ಮತಗಟ್ಟೆಗಳಲ್ಲಿ, ಉಪ ವಿಭಾಗೀಯ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.

ಕ್ಷೇತ್ರವಾರು ಮತದಾರರು
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,12,126 ಪುರುಷರು, 1,17,421 ಮಹಿಳೆಯರು, 3 ಲಿಂಗತ್ವ ಅಲ್ಪಸಂಖ್ಯಾಕರು ಸೇರಿದಂತೆ 2,29,550 ಮತದಾರರಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 98,224 ಪುರುಷರು, 1,06,298 ಮಹಿಳೆಯರು, 3 ಲಿಂಗತ್ವ ಅಲ್ಪಸಂಖ್ಯಾಕರು ಸೇರಿ 2,04,525 ಮತದಾರರಿದ್ದಾರೆ. ಉಡುಪಿ ಕ್ಷೇತ್ರದಲ್ಲಿ 1,02,192 ಪುರುಷರು, 1,09,439 ಮಹಿಳೆಯರು ಸೇರಿ 2,11,631 ಮತದಾರರಿದಾರೆ. ಕಾಪು ಕ್ಷೇತ್ರದಲ್ಲಿ 88,114 ಪುರುಷರು, 95,968 ಮಹಿಳೆಯರು, 6 ಲಿಂಗತ್ವ ಅಲ್ಪಸಂಖ್ಯಾಕರು ಸೇರಿ 1,84,088 ಮತದಾರರಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 89,404 ಪುರುಷರು, 97,047 ಮಹಿಳೆಯರು ಸೇರಿ 1,86,451 ಮತದಾರರಿದ್ದಾರೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ 4,90,060 ಪುರುಷರು, 5,26173 ಮಹಿಳೆಯರು, 12 ಲಿಂಗತ್ವ ಅಲ್ಪಸಂಖ್ಯಾಕರು ಸೇರಿ 10,16,245 ಮತದಾರರಿದ್ದಾರೆ ಎಂದರು.

16 ಸಾವಿರ ಹೊಸ ಮತದಾರರು
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಹೊಸದಾಗಿ 16,827 ಮತದಾರರು ಸೇರ್ಪಡೆಯಾದರೆ, 5783 ಮತದಾರರನ್ನು ತೆಗೆದುಹಾಕಲಾಗಿದೆ. 13,321 ತಿದ್ದುಪಡಿ ಹಾಗೂ ವರ್ಗಾವಣೆಗೊಳಿಸಲಾಗಿದೆ. ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಸಂದರ್ಭದಲ್ಲಿ 13,816 ಯುವ ಮತದಾರರು ಹಾಗೂ 11,331 ವಿಶೇಷ ಚೇತನರು ನೋಂದಣಿಯಾಗಿದ್ದಾರೆ ಎಂದರು.

ಸಹಾಯವಾಣಿ
1950 ಸಂಖ್ಯೆಗೆ ಕರೆಮಾಡಿ ಮತದಾರರು ಪಟ್ಟಿ ಪರಿಷ್ಕರಣೆ ಸಹಿತ ಚುನಾವಣೆ ಸಂಬಂಧಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಮತದಾರರ ದಿನ
ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯು ಅಜ್ಜರಕಾಡು ಪುರಭವನದಲ್ಲಿ ನಡೆಯುತ್ತಿದ್ದು, ಅದೇ ರೀತಿಯಲ್ಲಿ ತಾಲೂಕು ಮತ್ತು ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌., ವಿವಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.