ಬೀಚ್‌ನಲ್ಲಿ ಮತದಾನ ಜಾಗೃತಿ,ಮಾನವ ಸರಪಣಿ
Team Udayavani, Apr 13, 2019, 6:20 AM IST
ಕಾಪು: ಕಾಪು ಪುರಸಭೆ, ಜೇಸಿಐ ಕಾಪು, ಜೇಸಿರೆಟ್ ಮತ್ತು ಯುವ ಜೇಸಿ ವಿಭಾಗ ಹಾಗೂ ಯಾರ್ಡ್ ಫ್ರೆಂಡ್ಸ್ ಇವರ ಜಂಟಿ ಆಶ್ರಯದಲ್ಲಿ ಸೋಮವಾರ ಉಳಿಯಾರಗೋಳಿ ಯಾರ್ಡ್ ಬೀಚ್ ವಠಾರದಲ್ಲಿ ಮತದಾನ ಜಾಗೃತಿ, ಇವಿಎಂ ,ವಿವಿ ಪ್ಯಾಟ್‌ನಲ್ಲಿ ಮತದಾನ ಪ್ರಾತ್ಯಕ್ಷಿಕೆ ಮತ್ತು ಮಾನವ ಸರಪಣಿ ಕಾರ್ಯಕ್ರಮ ನಡೆಯಿತು.
ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರು ಮತದಾನ ಜಾಗƒತಿಯ ಬಗ್ಗೆ ಮಾಹಿತಿ ನೀಡಿ, ಇವಿಎಂ ,ವಿವಿ ಪ್ಯಾಟ್‌ನಲ್ಲಿ ಮತದಾನ ಮಾಡುವ ಬಗ್ಗೆ ಜನರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ಮತದಾನ ನಮ್ಮೆಲ್ಲರ ಹಕ್ಕಾಗಿದ್ದು, ಈ ಹಕ್ಕನ್ನು ಸೂಕ್ತವಾಗಿ ಬಳಸಿಕೊಂಡು ಯೋಗ್ಯರನ್ನು ನಮ್ಮ ದೇಶದ ಚುಕ್ಕಾಣಿ ಹಿಡಿಯುವಂತೆ ಮಾಡಲು ನಾವೆಲ್ಲರೂ ಕರ್ತವ್ಯ ಬದ್ಧರಾಗಿರುವಂತೆ ಕರೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿಯ ಮಾರ್ಗದರ್ಶನದಂತೆ ಯಾರ್ಡ್ ಬೀಚ್‌ನಲ್ಲಿ ಜೇಸಿಐ ಸದಸ್ಯರು, ಯಾರ್ಡ್ ಫ್ರೆಂಡ್ಸ್ ಸದಸ್ಯರು ಮತ್ತು ಉಳಿಯಾರಗೋಳಿ ಯಾರ್ಡ್ ಬೀಚ್ ಸುತ್ತಲಿನ ನಾಗರಿಕರು ಕಡ್ಡಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಮತ್ತು ಇತರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾಪು ಜೇಸಿಐ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ ನಿರ್ದೇಶಕರಾದ ಸೌಮ್ಯ ರಾಕೇಶ್, ಸಂಗೀತಾ ಪ್ರಭು, ಯಾರ್ಡ್ ಫ್ರೆಂಡ್ಸ್‌ನ ಪ್ರಮುಖರಾದ ಶಶಿಧರ್ ಸುವರ್ಣ, ಸಂಜೀವ ಕುಂದರ್, ಮಾಜಿ ಸೈನಿಕ ಸೂರ್ಯನಾರಾಯಣ್, ಜೇಸಿಐ ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ, ಜೇಸಿರೆಟ್ ಅಧ್ಯಕ್ಷೆ ಶ್ರುತಿ ಶೆಟ್ಟಿ, ಯುವಜೇಸಿ ಅಧ್ಯಕ್ಷ ಆದಿತ್ಯ ಗುರ್ಮೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.