ಪುರಸಭೆ: ಕಸದ ಲಾರಿಯಲ್ಲೂ ಮತದಾನ ಜಾಗೃತಿ!
Team Udayavani, Apr 26, 2018, 7:05 AM IST
ಕುಂದಾಪುರ: ಇಲ್ಲಿನ ಪುರಸಭೆಯ ಕಸದ ಲಾರಿಗಳಲ್ಲೂ ಮತದಾನ ಜಾಗೃತಿಯ ಫ್ಲೆಕ್ಸ್ ನೇತಾಡುತ್ತಿದೆ. ಚುನಾವಣೆ ಎಂಬ ಹಬ್ಬ ಬಂತು ಎಂದು ಯಕ್ಷಗಾನದ ಹಾಡು ಕೇಳುತ್ತಿದೆ. ಮತದಾನ ಜಾಗೃತಿಗೆ ಎಲ್ಲೆಡೆ ವಿವಿಧ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವಂತೂ ಮತದಾನ ಪ್ರಮಾಣ ಹೆಚ್ಚವಾಗಲು ಇನ್ನಿಲ್ಲದ ಜಾಗೃತಿ ಅಭಿಯಾನ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ವಿವಿಧ ರೀತಿಯಲ್ಲಿ ಮತದಾನ ಮಾಡಿ ಎಂದು ಅರಿವು ಮೂಡಿಸುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಕನ್ನಡ ಹಾಗೂ ಕುಂದಗನ್ನಡದಲ್ಲಿ ಮತದಾನ ಮಾಡುತ್ತೇನೆ, ಏನೇ ಕೆಲಸ ಇದ್ದರೂ ಮತದಾನ ಮಾಡಿ ಎಂಬಿತ್ಯಾದಿ ಹೋರ್ಡಿಂಗ್‌ಗಳಿವೆ.
ಮತಯಂತ್ರ ಹಾಗೂ ವಿವಿ ಪ್ಯಾಟ್ ಕುರಿತು ಜಾಗೃತಿ ಅಭಿಯಾನ ನಡೆಯುತ್ತಿದೆ. ಪುರಸಭಾ ವ್ಯಾಪ್ತಿಯ ವಿವಿಧೆಡೆ ಮತಯಂತ್ರಗಳ ಪ್ರಾತ್ಯಕ್ಷಿಕೆ, ಅಣಕು ಮತದಾನ ಮೂಲಕ ಮತಯಂತ್ರ ಮೇಲೆ ಸಂಶಯ ಇದ್ದರೆ ಹೋಗಲಾಡಿಸುವ ಯತ್ನ ನಡೆಯುತ್ತಿದೆ. ಯಂತ್ರದ ಮೂಲಕ ಈ ಹಿಂದೆ ಮತದಾನ ನಡೆದಿದ್ದರೂ ಹೊಸಬರಿಗೆ ಮತಯಂತ್ರದ ಮೂಲಕ ಮತದಾನ ಮಾಡುವುದು ಹೇಗೆ ಎಂಬ ಮಾಹಿತಿ ಬೇಕಿದ್ದರೆ, ಹಳಬರಿಗೆ ಮತಯಂತ್ರದ ಮೂಲಕ ಮತದಾನ ಮಾಡುವುದು ಹೇಗೆ ಎಂದು ನೆನಪಿಲ್ಲದಿದ್ದರೆ ಎಂದು ಜನರಿದ್ದಲ್ಲಿಗೆ ತೆರಳಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.
ಇಷ್ಟೇ ಅಲ್ಲ ಸಂಘ ಸಂಸ್ಥೆಗಳು ಅವಶ್ಯವಿದೆ ಎಂದು ತಿಳಿಸಿದರೆ ಅವರು ತಿಳಿಸಿದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಮತಯಂತ್ರದ ಪ್ರಾತ್ಯಕ್ಷಿಕೆ ನೀಡಲು ಸಿದ್ಧರಾಗಿದ್ದಾರೆ. ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಹೇಳಲು 24 ತಾಸು ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂನ್ನು ಸಹಾಯಕ ಆಯುಕ್ತರ ಕಚೇರಿಯಲ್ಲಿ ತೆರೆಯಲಾಗಿದೆ. ಪುರಸಭೆಯಲ್ಲೂ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯಲಾಗಿದೆ.
ಇದಿಷ್ಟೂ ಸಾಲದು ಎಂಬಂತೆ ಇಲ್ಲಿನ ಪುರಸಭೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕಸದ ವಾಹನಗಳು ನಗರದ ಎಲ್ಲೆಡೆ ಸಂಚರಿಸುತ್ತವೆ. ಮನೆ ಮನೆಗೆ ತೆರಳುತ್ತವೆ. ಆಗಲೂ ಜನರಿಗೆ ಕಸ ಹಾಕುವಾಗ ಮತದಾನದ ಜಾಗೃತಿ ಮೂಡಬೇಕೆಂದು ಅದರಲ್ಲೂ ಮತದಾನ ಜಾಗೃತಿ ಫಲಕ ಅಳವಡಿಸಲಾಗಿದೆ. ಮೈಕ್ ವ್ಯವಸ್ಥೆ ಇರುವ ವಾಹನಗಳಲ್ಲಿ ತೆಂಕುತಿಟ್ಟು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಯಕ್ಷಗಾನೀಯವಾಗಿ ಹಾಡಿರುವ ಮಂಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ ರಚಿಸಿದ ಹಬ್ಬ ಬಂತು ಹಬ್ಬ ಚುನಾವಣಾ ಹಬ್ಬ ಎಂಬ ಹಾಡನ್ನು ಕೇಳಿಸಲಾಗುತ್ತಿದೆ.
ಇದು ಸದ್ಯದ ಮಟ್ಟಿಗೆ ಹೊಸ ಪ್ರಯೋಗವೂ ಹೌದು. ಜಿಲ್ಲೆಯ ಯಾವುದೇ ಪುರಸಭೆಗಳು ಇಂತಹ ಪ್ರಯತ್ನ ಮಾಡಿಲ್ಲ. ಈ ಮೊದಲು ಕಸದ , ಸ್ವತ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಸಾಮೂಹಿಕವಾಗಿ ಮತದಾನ ಜಾಗೃತಿ ಉಂಟು ಮಾಡಲಾಗುತ್ತಿದೆ.
ಹಾಡು ಕೇಳುವ ವ್ಯವಸ್ಥೆ
ಜನರಿಗೆ ಮತದಾನದ ಕುರಿತು ಜಾಗೃತಿ ಉಂಟಾಗಬೇಕು. ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಬೇಕು ಎಂದು ನಾವು ಈ ಪ್ರಯೋಗ ಮಾಡಿದ್ದೇವೆ. 3 ಟ್ರಾಕ್ಟರ್, 3 ಏಸ್ ವಾಹನ ಸೇರಿದಂತೆ ಒಟ್ಟು 8 ವಾಹನಗಳಲ್ಲಿ ಫಲಕ ಅಳವಡಿಸಿ ಹಾಡು ಕೇಳಿಸುವ ವ್ಯವಸ್ಥೆ ಮಾಡಿದ್ದೇವೆ.
– ವಾಣಿ ಬಿ. ಆಳ್ವ,ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.